Ind vs NZ: ಜಿದ್ದಾಜಿದ್ದಿಯ ಕಣದಲ್ಲಿ ಎಡವಿದ ಅನುಭವಿಗಳು: ಸಿಕ್ಕ ಅವಕಾಶ ಕೈಚೆಲ್ಲಿದ್ರಾ ಕನ್ನಡಿಗ?

ಕಿವೀಸ್​​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಟೀಮ್​ ಇಂಡಿಯಾ ವಿಫಲವಾಗಿದೆ. ಇದರ ನೇರ ಹೊಣೆ ಈ ಮೂವರು ಆಟಗಾರರದ್ದು. ಆ ಆಟಗಾರರು ಯಾರು.? ಅವರು ಮಾತ್ರ ಯಾಕೆ ಹೊಣೆಗಾರರು.?

ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಭಾರತ ಎಡವಿದೆ. ಟಾಸ್​​ ಗೆಲುವು ತಂಡಕ್ಕೆ ಮುನ್ನಡೆ ತಂದುಕೊಟ್ಟರೂ ಬ್ಯಾಟಿಂಗ್​ನಲ್ಲಿ ಎಡವಿದ್ದು, ತಂಡಕ್ಕೆ ಹಿನ್ನಡೆಯಾಗಿದೆ. ಇದೀಗ ಈ ಹಿನ್ನೆಡೆಯ ನೇರ ಹೊಣೆಯನ್ನ ಮಯಾಂಕ್​ ಅಗರ್​ವಾಲ್​, ಚೇತೇಶ್ವರ್​​ ಪೂಜಾರ, ನಾಯಕ ಅಜಿಂಕ್ಯಾ ರಹಾನೆ ಹೊರಬೇಕಿದೆ..!

ಸಿಕ್ಕ ಅವಕಾಶ ಕೈ ಚೆಲ್ಲಿದ ಮಯಾಂಕ್​ ಅಗರ್​ವಾಲ್​.!
ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಬೆಂಚ್​​ಗೆ ಸೀಮಿತವಾಗಿದ್ದ ಮಯಾಂಕ್​ ಪಾಲಿಗೆ, ಕಿವೀಸ್​ ಸರಣಿಯಲ್ಲಿ ಅವಕಾಶದ ಬಾಗಿಲು ತೆರೆದಿತ್ತು. ಈ ಚಾನ್ಸ್​ನ್ನ ಕನ್ನಡಿಗ ಕೈ ಚೆಲ್ಲಲ್ಲ ಅನ್ನೋದು, ಕ್ರಿಕೆಟ್​​ ಲೋಕದ ಟಾಕ್​ ಕೂಡ ಆಗಿತ್ತು. ಆದ್ರೆ ಕಾನ್ಪುರ ಅಂಗಳದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್​, ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು.

ಮುಂಬೈಕರ್​​ ರಹಾನೆಯಿಂದಲೂ ಬಾರದ ನಾಯಕನಾಟ.!
ಫಾರ್ಮ್​ ಕಂಡುಕೊಳ್ಳಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ನಾಯಕ ಅಜಿಂಕ್ಯಾ ರಹಾನೆ ಆಟವೂ, ಭಿನ್ನವಾಗಿರಲಿಲ್ಲ. ಆರಂಭದಲ್ಲಿ ಬೆಸ್ಟ್​​​​ ಶಾಟ್​​ಗಳನ್ನ ಸಿಡಿಸಿ ಭರವಸೆ ಮೂಡಿಸಿದರಾದ್ರೂ, ಒಂದು ಬೇಜವಾಬ್ದಾರಿಯುತ ಶಾಟ್​ ಆಟವನ್ನ 35 ರನ್​ಗಳಿಗೆ ಅಂತ್ಯಗೊಳಿಸಿತು.

ಸುಲಭದ ತುತ್ತಾದ ಟೆಸ್ಟ್​ ಸ್ಪೆಷಲಿಸ್ಟ್​​ ಪೂಜಾರ.!
ಟೆಸ್ಟ್​​ ಸ್ಪೆಷಲಿಸ್ಟ್​​ ಎಂಬ ಹೆಗ್ಗಳಿಕೆ ಹೊತ್ತಿರುವ ಚೇತೇಶ್ವರ್ ಪೂಜಾರ ಪಾಲಿಗೆ ನ್ಯೂಜಿಲೆಂಡ್​ ಸರಣಿ ಟೆಸ್ಟಿಂಗ್​ ಸಿರೀಸ್​ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದ್ರೆ, ಇದನ್ನ ಪೂಜಾರ ಅರಿತಂತೇ ಅನ್ನಿಸ್ತಾ ಇಲ್ಲ. ಕಾನ್ಪುರ ಮೈದಾನದಲ್ಲೂ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ ಪೂಜಾರ, ಕೇವಲ 26 ರನ್​ಗಳಿಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದ್ರು.

ಈ ಮೂವರು ಅಲ್ಪ ಮೊತ್ತಕ್ಕೆ ಔಟ್​​ ಆಗಿದ್ದಕ್ಕೆ, ಫಾರ್ಮ್​ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಕ್ಕೆ ಮಾತ್ರ ಹಿನ್ನಡೆಯ ನೇರ ಹೊಣೆ ಇವರ ಹೆಗಲೇರಿಲ್ಲ. ಸ್ಟಾರ್ ಆಟಗಾರರ ಅಲಭ್ಯತೆಯಲ್ಲಿ ತಂಡ ಕಣಕ್ಕಿಳಿದಾಗ, ಅನುಭವಿಗಳು ಜವಾಬ್ದಾರಿಯುತ ಆಟ ಆಡಲಿಲ್ಲ ಅನ್ನೋದು ಒಂದು ಕಾರಣವಾಗಿದೆ. ಹಾಲಿ ಟೆಸ್ಟ್​​ ಚಾಂಪಿಯನ್​ ಅಂತಹ ಬಲಿಷ್ಠ ತಂಡದೆದುರು ಕನಿಷ್ಠ ಯುವ ಆಟಗಾರ ಶುಭಮನ್​ ಗಿಲ್​ ತೋರಿದ ಹೋರಾಟವನ್ನೂ, ಈ ಮೂವರು ತೋರಲಿಲ್ಲ. ರೆಸ್ಪಾನ್ಸಿಬಲ್​ ಇನ್ನಿಂಗ್ಸ್​​ ಕಟ್ಟಬೇಕಾದವರೇ ಲೂಸ್​​ ಶಾಟ್ಸ್​​​ ಆಡಿ ಸುಲಭದ ತುತ್ತಾಗಿದ್ದು ಎಷ್ಟರ ಮಟ್ಟಿಗೆ ಸರಿ ಅನ್ನೋದಷ್ಟೇ, ಈಗ ಹುಟ್ಟಿರೋ ಪ್ರಶ್ನೆಯಾಗಿದೆ.

News First Live Kannada

Leave a comment

Your email address will not be published. Required fields are marked *