IND vs NZ: ಟೀಂ ಇಂಡಿಯಾದಿಂದ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟಿದ್ಯಾಕೆ? ಕನ್ನಡಿಗ ರಾಹುಲ್ ನೀಡಿದ ಉತ್ತರವಿದು | India vs New Zealand 1st T20I KL Rahul comments on hardik pandya exclusion from team india


IND vs NZ: ಟೀಂ ಇಂಡಿಯಾದಿಂದ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟಿದ್ಯಾಕೆ? ಕನ್ನಡಿಗ ರಾಹುಲ್ ನೀಡಿದ ಉತ್ತರವಿದು

ರಾಹುಲ್, ಪಾಂಡ್ಯ

2021 ರ ಟಿ 20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಇದೀಗ ಹೊಸ ಆರಂಭವನ್ನು ಮಾಡುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ. ಟೀಂ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾದ ನೂತನ ಉಪನಾಯಕ ಕೆಎಲ್ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಹೊಸ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಗುಳಿದಿರುವ ವಿಷಯದ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದಿದು.

ಹಾರ್ದಿಕ್ ಪಾಂಡ್ಯ ಬಗ್ಗೆ ರಾಹುಲ್ ಹೇಳಿದ್ದೇನು?
ಹಾರ್ದಿಕ್ ಪಾಂಡ್ಯ ನಿರ್ಗಮನದ ಕಾರಣವೇನು ಎಂದು ಪತ್ರಕರ್ತರು ಕೆಎಲ್ ರಾಹುಲ್ ಅವರನ್ನು ಕೇಳಿದರು. ಅದಕ್ಕೆ ಕೆಎಲ್ ರಾಹುಲ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪಾಂಡ್ಯರನ್ನು ಕೈಬಿಟ್ಟಿರುವುದಕ್ಕೆ ನಿಜವಾದ ಕಾರಣ ನನಗೆ ಗೊತ್ತಿಲ್ಲ. ಹಾರ್ದಿಕ್ ಪಾಂಡ್ಯ ಅವರು ಏನು ಮಾಡಬೇಕು ಮತ್ತು ಅವರಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ತಿಳಿದಿದೆ. ಅವರು ಈ ಎಲ್ಲಾ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ರಾಹುಲ್ ಉತ್ತರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ವರದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿಲ್ಲ ಆದರೆ ತಂಡದಿಂದ ಕೈಬಿಡಲಾಗಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್‌ಗೆ ಸಂಪೂರ್ಣವಾಗಿ ಫಿಟ್ ಆಗಿಲ್ಲ ಮತ್ತು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ, ಅವರ ತಂಡ ಭಾರತದ ಆಡುವ XI ನಲ್ಲಿ ಸ್ಥಾನ ಪಡೆಯುತ್ತಿಲ್ಲ.

ವರದಿಯೊಂದರ ಪ್ರಕಾರ, ಟೀಂ ಇಂಡಿಯಾದ ಆಯ್ಕೆಗಾರರು ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಹೊರಗಿಡಲು ದೊಡ್ಡ ಕಾರಣವನ್ನು ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರು ಪುನರಾಗಮನ ಮಾಡಲು ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು ಎಂದು ಅವರು ಹೇಳಿದ್ದರು. ಒಬ್ಬ ಬ್ಯಾಟ್ಸ್‌ಮನ್ ಆಗಿ ಪಾಂಡ್ಯ ತಂಡಕ್ಕೆ ಸರಿಹೊಂದುವುದಿಲ್ಲ ಮತ್ತು ಈಗ ಅವರನ್ನು ದೇಶೀಯ ಕ್ರಿಕೆಟ್ ಆಡಲು ಹೇಳಲಾಗಿದೆಯಂತೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರವೇ ತಂಡಕ್ಕೆ ಮರಳಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 69 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಭಾರೀ ಒತ್ತಡದ ನಂತರ, ಅವರು 4 ಓವರ್ಗಳನ್ನು ಬೌಲ್ ಮಾಡಿದರು ಅದರಲ್ಲಿ ಅವರು ಯಾವುದೇ ಯಶಸ್ಸನ್ನು ಪಡೆಯಲಿಲ್ಲ. ಪಾಂಡ್ಯ ಬದಲಿಗೆ ನ್ಯೂಜಿಲೆಂಡ್ ಸರಣಿಯಲ್ಲಿ ವೆಂಕಟೇಶ್ ಅಯ್ಯರ್ ಅವರಿಗೆ ಅವಕಾಶ ನೀಡಲಾಗಿದ್ದು, ಈ ಆಟಗಾರ ತನ್ನ ಶಕ್ತಿ ಪ್ರದರ್ಶನ ಮಾಡಿದರೆ ಹಾರ್ದಿಕ್ ವಾಪಸಾತಿಯ ಹಾದಿ ಇನ್ನಷ್ಟು ಕಷ್ಟಕರವಾಗಲಿದೆ.

TV9 Kannada


Leave a Reply

Your email address will not be published. Required fields are marked *