IND vs NZ: ನ್ಯೂಜಿಲೆಂಡ್-ಭಾರತ ಮೊದಲ ಟಿ20: ಪಂತ್​ಗೆ ಚಾನ್ಸ್​ ಸಿಗೋದು ಡೌಟ್, ಯಾಕೆ ಗೊತ್ತಾ? | IND vs NZ: India Playing XI for 1st T20


IND vs NZ: ನ್ಯೂಜಿಲೆಂಡ್-ಭಾರತ ಮೊದಲ ಟಿ20: ಪಂತ್​ಗೆ ಚಾನ್ಸ್​ ಸಿಗೋದು ಡೌಟ್, ಯಾಕೆ ಗೊತ್ತಾ?

IND vs NZ

ಟಿ20 ವಿಶ್ವಕಪ್​ ಬಳಿಕ ಟೀಮ್ ಇಂಡಿಯಾ ಮೊದಲ ಸರಣಿ ಆಡಲು ಸಜ್ಜಾಗಿದೆ. ಅದು ಕೂಡ ಟಿ20 ವಿಶ್ವಕಪ್​ ರನ್ನರ್ ಅಪ್​ ತಂಡ ನ್ಯೂಜಿಲೆಂಡ್ ವಿರುದ್ದ ಎಂಬುದು ವಿಶೇಷ. ನವೆಂಬರ್ 17 ರಿಂದ ಶುರುವಾಗಲಿರುವ ಮೊದಲ ಟಿ20 ಪಂದ್ಯದೊಂದಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ. ಹೀಗಾಗಿಯೇ ಮೊದಲ ಪಂದ್ಯವೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಹೀನಾಯವಾಗಿ ಸೋಲನುಭವಿಸಿತ್ತು. ಇದೀಗ ಅದೇ ತಂಡವನ್ನು ಮತ್ತೆ ಟೀಮ್ ಇಂಡಿಯಾ ಎದುರಿಸುತ್ತಿದೆ. ಇತ್ತ ಭಾರತ ತಂಡದಲ್ಲೂ ಪ್ರಮುಖ ಬದಲಾವಣೆಯಾಗಿದ್ದು, ಹೀಗಾಗಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬ ಕುತೂಹಲ ಕೂಡ ಮನೆ ಮಾಡಿದೆ.

ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 6+5 ಲೆಕ್ಕಾಚಾರದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ 6 ಬ್ಯಾಟರ್​ಗಳು ಹಾಗೂ 5 ಬೌಲರುಗಳು ತಂಡದಲ್ಲಿರಲಿದ್ದಾರೆ. ಅದರಂತೆ ಆರಂಭಿಕರಾಗಿ ರೋಹಿತ್ ಮತ್ತು ರಾಹುಲ್ ಆಡುವುದು ಬಹುತೇಕ ಖಚಿತ ಎನ್ನಬಹುದು. ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಲಿದ್ದಾರೆ.

ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ. ಇನ್ನು ಆಲ್​ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್​ ಅವರನ್ನು ಕಣಕ್ಕಿಳಿಸಬಹುದು. ಏಕೆಂದರೆ ಮಧ್ಯಮ ವೇಗದ ಆಲ್​ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ವೆಂಕಟೇಶ್ ಅಯ್ಯರ್ ಮಾತ್ರ ಇದ್ದಾರೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಬಹುದು.

ಇನ್ನು ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳಾಗಿ ಅಶ್ವಿನ್ ಮತ್ತು ಚಹಲ್ ಅವಕಾಶ ಪಡೆಯುವುದು ಖಚಿತ. ಅದೇ ರೀತಿ ವೇಗದ ಬೌಲರ್​ಗಳಾಗಿ ಭುವನೇಶ್ವರ್ ಕುಮಾರ್ ಜೊತೆ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್​ಗಳಾಗಿ ತಂಡದಲ್ಲಿರುವ ಕಾರಣ, ಮೊದಲ ಟಿ20ಯಿಂದ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಬಹುದು. ಒಂದು ವೇಳೆ ಪಂತ್​ರನ್ನು ಕಣಕ್ಕಿಳಿಸಿದರೆ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಡಬೇಕಾಗುತ್ತದೆ. ಹೀಗಾಗಿ 5ನೇ ಕ್ರಮಾಂಕದ ಸ್ಥಾನಕ್ಕಾಗಿ ಪಂತ್-ಅಯ್ಯರ್ ನಡುವೆ ಪೈಪೋಟಿ ಇರಲಿದೆ.

ನ್ಯೂಜಿಲೆಂಡ್ ಟಿ20 ಸರಣಿಗಾಗಿ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ನವೆಂಬರ್ 17 ರಿಂದ ಆರಂಭವಾಗಲಿದೆ. ಮೊದಲ ಟಿ20 ಜೈಪುರದಲ್ಲಿ ನಡೆಯಲಿದ್ದು, ಎರಡನೇ ಟಿ20 ನವೆಂಬರ್ 19 ರಂದು ರಾಂಚಿಯಲ್ಲಿ ಮತ್ತು ಮೂರನೇ ಟಿ20 ನವೆಂಬರ್ 21 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(IND vs NZ: India Playing XI for 1st T20)

TV9 Kannada


Leave a Reply

Your email address will not be published. Required fields are marked *