ಕೇನ್ ವಿಲಿಯಮ್ಸನ್
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ವಿಳಂಬವಾಗಿದೆ. ಆದರೆ ಈ ನಡುವೆ ನ್ಯೂಜಿಲೆಂಡ್ಗೆ ಕೆಟ್ಟ ಸುದ್ದಿಯೊಂದು ಬಂದಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇದಕ್ಕೆ ಕಾರಣ ಅವರ ಮೊಣಕೈ ಗಾಯ. ಮುಂಬೈ ಟೆಸ್ಟ್ನಲ್ಲಿ ವಿಲಿಯಮ್ಸನ್ ಆಡುವುದಿಲ್ಲ ಎಂದು ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಖಚಿತಪಡಿಸಿದ್ದಾರೆ. ಅವರ ಸ್ಥಾನದಲ್ಲಿ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ.
ವಿಲಿಯಮ್ಸನ್ ಅವರ ಮೊಣಕೈ ಗಾಯವು ಅವರನ್ನು ಬಹಳ ಸಮಯದಿಂದ ಕಾಡುತ್ತಿದ್ದು, ಮುಂಬೈ ಟೆಸ್ಟ್ಗೆ ಮುಂಚಿತವಾಗಿ ಮತ್ತೊಮ್ಮೆ ಕಿವೀಸ್ ನಾಯಕನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ವಿಡಿಯೋ ಬಿಡುಗಡೆ ಮಾಡಿ ಕೋಚ್ ಗ್ಯಾರಿ ಸ್ಟೆಡ್ ಈ ಮಾಹಿತಿ ನೀಡಿದ್ದಾರೆ. “ದುರದೃಷ್ಟವಶಾತ್ ಕೇನ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಹಿಂದಿನ ಪಂದ್ಯದ ವೇಳೆ ಅವರ ಎಡ ಮೊಣಕೈ ಗಾಯ ಮತ್ತೆ ಕಾಣಿಸಿಕೊಂಡಿತ್ತು. ಹಾಗಾಗಿ ನಾವು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ನಾವು ಅವರಿಗೆ ಸ್ವಲ್ಪ ವಿಶ್ರಾಂತಿ ನೀಡಬೇಕು ಮತ್ತು ನಂತರ ಅವರನ್ನು ಬಲಪಡಿಸಬೇಕು. ಈ ಪಂದ್ಯದಲ್ಲಿ ಕೇನ್ ಆಡದಿರುವುದು ಬೇಸರ ತಂದಿದೆ ಎಂದಿದ್ದಾರೆ.
ಯೋಜನೆ ಅಗತ್ಯವಿದೆ
ಕೋಚ್, ಕೇನ್ಗೆ ಇದು ತುಂಬಾ ಕಷ್ಟದ ಸಮಯ. ಅವರು ನಿರಂತರವಾಗಿ ಈ ಗಾಯದ ವಿರುದ್ಧ ಹೋರಾಡುತ್ತಿದ್ದಾರೆ. ನಾವು ವರ್ಷಪೂರ್ತಿ ಅವರ ಗಾಯವನ್ನು ನಿಭಾಯಿಸುತ್ತಿದ್ದೇವೆ. ಟಿ 20 ವಿಶ್ವಕಪ್, ನಂತರ ಟೆಸ್ಟ್ ಕ್ರಿಕೆಟ್ ಆಡುವುದು ಅವರ ಬ್ಯಾಟಿಂಗ್ ಮೇಲೆ ಹೊರೆ ಹೆಚ್ಚಿಸಿತು ಮತ್ತು ಮೊಣಕೈ ಗಾಯ ಮತ್ತೆ ಕಂಡುಬಂದಿತು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕೇನ್ಗೆ ಇದು ಸವಾಲಿನ ವರ್ಷವಾಗಿದೆ. ನಾವು ಅವರಿಗಾಗಿ ಉತ್ತಮ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಈ ಗಾಯಗಳು ಅವರಿಗೆ ಮತ್ತೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ವಿಲಿಯಮ್ಸನ್ ಸ್ಥಾನದಲ್ಲಿ ಯಾವ ಆಟಗಾರನಿಗೆ ಅವಕಾಶ ಸಿಗುತ್ತದೆ ಎಂಬುದು ಟಾಸ್ ಬಳಿಕ ತಿಳಿಯಲಿದೆ ಆದರೆ ಭಾರತಕ್ಕೆ ಖಂಡಿತಾ ಸಮಾಧಾನದ ವಿಚಾರ. ಕೇನ್ ವಿಲಿಯಮ್ಸನ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳೆಂದು ಪರಿಗಣಿಸಲಾಗಿದೆ. ಅವರು ಭಾರತೀಯ ಬ್ಯಾಟ್ಸ್ಮನ್ಗಳಿಗೆ ತೊಂದರೆ ಉಂಟುಮಾಡಬಹುದು. ಈಗ ಅವರಿಲ್ಲದಿರುವುದರಿಂದ ಭಾರತಕ್ಕೆ ಕೆಲಸ ಸುಲಭವಾಗುತ್ತದೆ.