IND vs NZ: ಸೊನ್ನೆ ಸುತ್ತುವುದರಲ್ಲಿ ಕೊಹ್ಲಿಗಿಲ್ಲ ಸರಿಸಾಟಿ! ಕಿವೀಸ್ ವಿರುದ್ಧ ಕೆಟ್ಟ ದಾಖಲೆಗೆ ಕೊರಳೊಡ್ಡಿದ ವಿರಾಟ್ | Virat kohli could not score in mumbai test first innings against new zealand name unwanted record

1/4

ಐಸಿಸಿ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರು. ಈ ಕಾರಣಕ್ಕಾಗಿ, ಅವರು ನ್ಯೂಜಿಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳ T20 ಸರಣಿಯಲ್ಲಿ ಆಡಲಿಲ್ಲ ಮತ್ತು ಕಾನ್ಪುರದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೂ ಇರಲಿಲ್ಲ. ಮುಂಬೈನಲ್ಲಿ ಇಂದಿನಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಅವರು ದೊಡ್ಡ ಇನ್ನಿಂಗ್ಸ್‌ನೊಂದಿಗೆ ಮರಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು ಆದರೆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕೊಹ್ಲಿ ವಿವಾದಾತ್ಮಕ ಎಲ್ಬಿಡಬ್ಲ್ಯೂಗೆ ಔಟಾದರು. ಒಟ್ಟಾರೆ ಫಲಿತಾಂಶವೆಂದರೆ ಕೊಹ್ಲಿ ಖಾತೆಗೆ 0 ಬಂದಿದ್ದು, ಇದರೊಂದಿಗೆ ಕೆಲವು ಬೇಡದ ದಾಖಲೆಗಳು ಅವರ ಹೆಸರಿಗೆ ಬಂದವು.

2/4

ವಿರಾಟ್ ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಭಾರತದಲ್ಲಿ ಇದು ಆರನೇ ಬಾರಿಗೆ ನಾಯಕನಾಗಿ ಕೊಹ್ಲಿ ಖಾತೆ ತೆರೆಯದೆ ಹಿಂದಿರುಗಿದ್ದಾರೆ. ಅವರಿಗಿಂತ ಮೊದಲು, ಈ ದಾಖಲೆ ಎಂಕೆ ಪಟೌಡಿ ಹೆಸರಿನಲ್ಲಿತ್ತು, ಅವರು ತಮ್ಮ ಮನೆಯಲ್ಲಿ ಐದು ಬಾರಿ ಶೂನ್ಯಕ್ಕೆ ಔಟಾದರು.

3/4

ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಈಗ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿಯೊಂದಿಗೆ ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಇದ್ದಾರೆ. ಇವರಿಬ್ಬರ ನಂತರ ಇಂಗ್ಲೆಂಡ್‌ನ ಮೈಕಲ್ ಅಥರ್ಟನ್, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೆ ಮತ್ತು ಭಾರತದ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಮೂವರೂ ನಾಯಕರಾಗಿ ಟೆಸ್ಟ್‌ನಲ್ಲಿ ಎಂಟು ಬಾರಿ ಶೂನ್ಯಕ್ಕೆ ಔಟಾದ ದಾಖಲೆ ಹೊಂದಿದ್ದಾರೆ.

4/4

ಮತ್ತೊಂದೆಡೆ, ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಶೂನ್ಯಕ್ಕೆ ಔಟಾದ ಬಗ್ಗೆ ನಾವು ಮಾತನಾಡಿದರೆ, ಕೊಹ್ಲಿ ಕಿವೀಸ್ ವಿರುದ್ಧದ ಟೆಸ್ಟ್‌ನಲ್ಲಿ ಒಟ್ಟು 14 ಬಾರಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ.

TV9 Kannada

Leave a Reply

Your email address will not be published. Required fields are marked *