India vs New Zealand 1st Test Day 5
IND vs NZ 1st Test, Day 5 LIVE Score: ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಪ್ರಥಮ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಅಂತಿಮ ಕೊನೇ ದಿನದಾಟ ಆರಂಭವಾಗಿದ್ದು ಆದಷ್ಟು ಬೇಗ ನ್ಯೂಜಿಲೆಂಡ್ ಅನ್ನು ಆಲೌಟ್ ಮಾಡಲು ಭಾರತ ಎದುರು ನೋಡುತ್ತಿದೆ. ಇತ್ತ ಕೇನ್ ಪಡೆ ಗೆಲುವು ಸಾಧಿಸಲು ಸಾಧ್ಯವಾಗದೇ ಇದ್ದರೂ ಕನಿಷ್ಠ ಡ್ರಾ ಮಾಡುವತ್ತ ಚಿತ್ತ ನೆಟ್ಟಿದೆ. ಭಾರತದ ಪ್ರಮುಖ ಅಸ್ತ್ರ ಸ್ಪಿನ್ನರ್ಗಳೇ ಆಗಿರುವುದರಿಂದ ಅಶ್ವಿನ್ (R Ashwin), ಜಡೇಜಾ (Jadeja) ಮತ್ತು ಅಕ್ಷರ್ ಪಟೇಲ್ರನ್ನು (Axar Patel) ಕಿವೀಸ್ ಪಡೆ ಎದುರಿಸಲು ಯಾವರೀತಿ ಪ್ಲಾನ್ ಮಾಡಿದೆ ಎಂಬೂದು ಕುತೂಹಲ ಕೆರಳಿಸಿದೆ. ಭಾರತ ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ, ನ್ಯೂಜಿಲೆಂಡ್ಗೆ 284 ರನ್ ಗೆಲುವಿನ ಗುರಿ ನೀಡಿತು. ನಾಲ್ಕನೇ ದಿನದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿತ್ತು.