IND vs NZ 2021
ರೋಹಿತ್ ಶರ್ಮಾ (Rohit Sharma) ಹಾಗೂ ರಾಹುಲ್ ದ್ರಾವಿಡ್ (Rahul Dravid) ಅವರ ಕ್ಯಾಪ್ಟನ್ಸಿ ಮತ್ತು ಕೋಚ್ ಕಾಂಬಿನೇಷನ್ ನ್ಯೂಜಿಲೆಂಡ್ (India vs New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ (T20 Series) ಸಖತ್ ಆಗಿ ವರ್ಕೌಟ್ ಆಗಿದೆ. ಕೊನೇ ಹಂತದಲ್ಲಿ ರೋಚಕ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ (Team India) 1-0 ಮುನ್ನಡೆ ಸಾಧಿಸಿದೆ. ಸದ್ಯ ಉಭಯ ತಂಡಗಳು ಎರಡನೇ ಕಾಳಗಕ್ಕೆ ಸಜ್ಜಾಗುತ್ತಿದೆ. ಇಂದು ರಾಂಚಿಯ (Ranchi) ಜೆಎಸ್ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ದ್ವಿತೀಯ ಟಿ20 ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್ (T20 World Cup) ರನ್ನರ್ ಅಪ್ ತಂಡಕ್ಕೆ ಶಾಕ್ ನೀಡಿ ಸರಣಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿ ಭಾರತವಿದ್ದರೆ, ಇತ್ತ ಬ್ಲ್ಯಾಕ್ಕ್ಯಾಪ್ಸ್ ಕಿವೀಸ್ ಸರಣಿ ಸಮಬಲದ ತೀವ್ರ ಒತ್ತಡದಲ್ಲಿದೆ. ಹೀಗಾಗಿ ಇಂದಿನ ಮ್ಯಾಚ್ ಹೈವೋಲ್ಟೇಜ್ ಪಂದ್ಯವಾಗುವುದು ಖಚಿತ.
LIVE Cricket Score & Updates
-
19 Nov 2021 18:20 PM (IST)
ಭಾರತಕ್ಕೆ ಸರಣಿ ವಶಪಡಿಸಿಕೊಳ್ಳುವ ಅವಕಾಶವಿದೆ
ನೂತನ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಐದು ವಿಕೆಟ್ಗಳ ಜಯ ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾಗೆ ಸರಣಿ ವಶಪಡಿಸಿಕೊಳ್ಳುವ ಅವಕಾಶವಿದೆ.
-
19 Nov 2021 18:19 PM (IST)
ರಾಂಚಿಯಲ್ಲಿ 2ನೇ ಟಿ20 ಪಂದ್ಯ ನಡೆಯುತ್ತಿದೆ
ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಇಂದು ರಾಂಚಿಯಲ್ಲಿ ನಡೆಯಲಿದೆ. ಸದ್ಯ ಭಾರತ ಈ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.