India vs New Zealand 2nd Test Live Score Kannada
IND vs NZ 2nd Test, Day 2 LIVE Score: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭದ ನಡುವೆಯೂ ಪ್ರವಾಸಿ ತಂಡದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ (73ಕ್ಕೆ 4) ಮಾರಕ ದಾಳಿಗೆ ತತ್ತರಿಸಿತು. ಬಳಿಕ ಮಯಾಂಕ್ ಅಗರ್ವಾಲ್ ಏಕಾಂಗಿ ನಿರ್ವಹಣೆ ಫಲವಾಗಿ ಭಾರತ ತಂಡ ಮೊದಲ ದಿನದಂತ್ಯಕ್ಕೆ 70 ಓವರ್ಗಳಲ್ಲಿ 4 ವಿಕೆಟ್ಗೆ 221 ರನ್ ಕಲೆಹಾಕಿತ್ತು. ಆಕರ್ಷಕ ಶತಕ ಸಿಡಿಸಿದ ಮಯಾಂಕ್ ಮೊದಲ ದಿನದ ಹೀರೋ ಆದರು. ಮಯಾಂಕ್ ಅಜೇಯ 120 ರನ್ ಗಳಿಸಿ ಮತ್ತು ವೃದ್ದಿಮಾನ್ ಸಾಹ 25 ರನ್ ಗಳಿಸಿ ಇಂದು ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ದೊಡ್ಡ ಮೊತ್ತ ಕಲೆಹಾಕುವ ಯೋಜನೆಯಲ್ಲಿದ್ದರೆ ಇತ್ತ ಕಿವೀಸ್ ಪಡೆ ಟೀಮ್ ಇಂಡಿಯಾವನ್ನು ಬೇಗನೆ ಆಲೌಟ್ ಮಾಡುವತ್ತ ಚಿತ್ತ ನೆಟ್ಟಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ 70 ಓವರ್ 221/4
(ಮಯಂಕ್ ಅಗರ್ವಾಲ್ ಅಜೇಯ 120, ಶುಭ್ಮನ್ ಗಿಲ್ 44, ವೃದ್ಧಿಮಾನ್ ಸಾಹ ಅಜೇಯ 25, ಎಜಾಜ್ ಪಟೇಲ್ 73/4)