IND vs NZ 3rd ODI Shubman Gill smashes 4th ODI hundred in Indore | IND vs NZ: ಕೇವಲ 9 ದಿನಗಳಲ್ಲಿ ಮೂರನೇ ಶತಕ ಬಾರಿಸಿದ ಶುಭ್​ಮನ್ ಗಿಲ್..!


TV9kannada Web Team

TV9kannada Web Team | Edited By: pruthvi Shankar

Updated on: Jan 24, 2023 | 3:42 PM

IND vs NZ: ಸತತ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಟೀಂ ಇಂಡಿಯಾದ ಮತ್ತೊಬ್ಬ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಮತ್ತೊಂದು ಏಕದಿನ ಶತಕ ಸಿಡಿಸಿ ಮಿಂಚಿದ್ದಾರೆ.

IND vs NZ: ಕೇವಲ 9 ದಿನಗಳಲ್ಲಿ ಮೂರನೇ ಶತಕ ಬಾರಿಸಿದ ಶುಭ್​ಮನ್ ಗಿಲ್..!

ಶುಭ್​ಮನ್ ಗಿಲ್

ಸತತ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಟೀಂ ಇಂಡಿಯಾದ ಮತ್ತೊಬ್ಬ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಮತ್ತೊಂದು ಏಕದಿನ ಶತಕ ಸಿಡಿಸಿ ಮಿಂಚಿದ್ದಾರೆ. ಇಂದೋರ್‌ನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ತಮ್ಮ ಏಕದಿನ ವೃತ್ತಿ ಜೀವನದ ನಾಲ್ಕನೇ ಶತಕವನ್ನು ಗಿಲ್ ಪೂರೈಸಿದ್ದಾರೆ. ಕಳೆದ 9 ದಿನಗಳಲ್ಲಿ ಗಿಲ್ ಅವರ ಮೂರನೇ ದೊಡ್ಡ ಇನ್ನಿಂಗ್ಸ್ ಇದಾಗಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 208 ರನ್ ಗಳಿಸಿದ್ದ ಗಿಲ್, ಅದಕ್ಕೂ ಮೊದಲು ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 116 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಇಂದೋರ್‌ನಲ್ಲಿ ರೋಹಿತ್ ಶರ್ಮಾ ಜೊತೆಗೂಡಿ ಕಿವೀಸ್ ಬೌಲರ್‌ಗಳನ್ನು ಛಿದ್ರಗೊಳಿಸಿದ ಗಿಲ್ ದಾಖಲೆಯ ಜೊತೆಯಾಟವನ್ನು ಹಂಚಿಕೊಂಡರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *