IND vs NZ: 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದ ಜಯಂತ್ ಯಾದವ್ ಬಗ್ಗೆ ನಿಮಗೆಷ್ಟು ಗೊತ್ತು? | Jayant yadav come back after 4 years in indian test team playing 11 in mumbai where he created history


IND vs NZ: 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದ ಜಯಂತ್ ಯಾದವ್ ಬಗ್ಗೆ ನಿಮಗೆಷ್ಟು ಗೊತ್ತು?

ಜಯಂತ್ ಯಾದವ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಅನುಭವಿ ಆಟಗಾರರು ಗಾಯದ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಗುಳಿದಿದ್ದರಿಂದ ಭಾರತಕ್ಕೆ ಆತಂಕ ಎದುರಾಗಿದ್ದು. ಉಪನಾಯಕ ಅಜಿಂಕ್ಯ ರಹಾನೆ, ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿರುವ ಕಾರಣ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ರಹಾನೆ ಬದಲಿಗೆ ನಾಯಕ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಇಶಾಂತ್ ಬದಲಿಗೆ ಮೊಹಮ್ಮದ್ ಸಿರಾಜ್​ಗೆ ಅವಕಾಶ ಸಿಕ್ಕಿದೆ. ಅದೇ ಹೊತ್ತಿಗೆ ಜಡೇಜಾ ಬದಲಿಗೆ ತಂಡಕ್ಕೆ ಬಂದಿರುವ ಆಟಗಾರ ನಾಲ್ಕು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ವಾಪಸಾಗುತ್ತಿದ್ದು, ಅದೂ ಈ ಆಟಗಾರ ತನ್ನ ಪ್ರತಿಭೆ ತೋರಿ ಇತಿಹಾಸ ಸೃಷ್ಟಿಸಿದ ನೆಲದಲ್ಲಿ. ಈ ಆಟಗಾರನ ಹೆಸರು ಜಯಂತ್ ಯಾದವ್. ಯಾದವ್ ಮುಂಬೈ ಟೆಸ್ಟ್​ನಲ್ಲಿ ಮೊದಲ ಓವರ್​ನಲ್ಲೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಜೊತೆಗೆ ಬ್ಯಾಟಿಂಗ್​ನಲ್ಲಿ 12 ರನ್​ಗಳ ಕೊಡುಗೆ ನೀಡಿದರು.

ಜಯಂತ್ ಆಲ್ ರೌಂಡರ್. ಅವರು ಆಫ್ ಸ್ಪಿನ್ ಮತ್ತು ಕೆಳಹಂತದಲ್ಲಿ ಬ್ಯಾಟಿಂಗ್ ಕೊಡುಗೆ ಕೊಡಬಲ್ಲರು. ಈ ಪಂದ್ಯಕ್ಕೂ ಮುನ್ನ ಜಯಂತ್ ಭಾರತ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಫೆಬ್ರವರಿ 2017 ರಲ್ಲಿ ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಈ ಪಂದ್ಯದ ನಂತರ, ಅವರಿಗೆ ಟೆಸ್ಟ್ ಆಡಲು ಅವಕಾಶ ಸಿಗಲಿಲ್ಲ. ನ್ಯೂಜಿಲೆಂಡ್ ಸರಣಿಗೆ ತಂಡವನ್ನು ಪ್ರಕಟಿಸಿದಾಗ ಜಯಂತ್ ಹೆಸರು ತಂಡದಲ್ಲಿತ್ತು. ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಕೂಡ ತಂಡದಲ್ಲಿದ್ದರೂ ಜಯಂತ್​ಗೆ ಆಡುವ ಇಲೆವೆನ್​ನಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಿತ್ತು. ಈ ಮೂವರಲ್ಲಿ ಯಾರಿಗಾದರೂ ಗಾಯವಾದರೆ ಮಾತ್ರ ಅವರಿಗೆ ಅವಕಾಶ ಸಿಗುವುದರಲ್ಲಿತ್ತು.

ಮುಂಬೈನಲ್ಲಿ ಅದ್ಭುತ ಇನ್ನಿಂಗ್ಸ್
ಮುಂಬೈ ಮತ್ತು ಜಯಂತ್ ನಡುವೆ ವಿಶೇಷ ಸಂಬಂಧವಿದೆ. ನಾಲ್ಕು ವರ್ಷಗಳ ನಂತರ ಅದೇ ಮೈದಾನಕ್ಕೆ ಮರಳುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಏಕೈಕ ಶತಕ ಬಾರಿಸಿದ್ದರು. ಡಿಸೆಂಬರ್ 8 ಮತ್ತು 12, 2016 ರ ನಡುವೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಜಯಂತ್ ಅದ್ಭುತ ಶತಕವನ್ನು ಗಳಿಸಿದರು. ಈ ಶತಕವು ಭಾರತಕ್ಕೆ ಪ್ರಬಲ ಸ್ಕೋರ್ ನೀಡಿತು, ನಂತರ ಭಾರತವು ಇಂಗ್ಲೆಂಡ್ ಅನ್ನು ಇನಿಂಗ್ಸ್ ಮತ್ತು 36 ರನ್‌ಗಳಿಂದ ಸೋಲಿಸಿತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 400 ರನ್ ಗಳಿಸಿತ್ತು. ಭಾರತದ ಬ್ಯಾಟಿಂಗ್ ಕೂಡ ಅತ್ಯುತ್ತಮವಾಗಿತ್ತು. ಆರಂಭಿಕ ಆಟಗಾರ ಮುರಳಿ ವಿಜಯ್ 136 ರನ್ ಗಳಿಸಿದ್ದರೆ, ನಾಯಕ ವಿರಾಟ್ ಕೊಹ್ಲಿ 235 ರನ್ ಗಳಿಸಿ ದ್ವಿಶತಕ ಸಿಡಿಸಿದ್ದರು. ಜಯಂತ್ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು 104 ರನ್ ಗಳಿಸಿದರು. ಅವರು ನಾಯಕ ವಿರಾಟ್ ಅವರೊಂದಿಗೆ ಒಂಬತ್ತನೇ ವಿಕೆಟ್‌ಗೆ 241 ರನ್‌ಗಳನ್ನು ಹಂಚಿಕೊಂಡರು. ಇದಕ್ಕಾಗಿ ಅವರು 204 ಎಸೆತಗಳನ್ನು ಎದುರಿಸಿದರು ಮತ್ತು 15 ಬೌಂಡರಿಗಳನ್ನು ಬಾರಿಸಿದರು.

TV9 Kannada


Leave a Reply

Your email address will not be published. Required fields are marked *