IND vs NZ: India Predicted Playing 11 For 3rd ODI Kannada News zp | IND vs NZ 3rd ODI: ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ


India Predicted Playing 11: ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್​ ಬೀಸಲಿದ್ದಾರೆ.

India vs New Zealand 3rd ODI: ಭಾರತ-ನ್ಯೂಜಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯವು ನಾಳೆ (ಜ.24) ನಡೆಯಲಿದೆ. ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡಲಿರುವುದು ಬಹುತೇಕ ಖಚಿತ. ಏಕೆಂದರೆ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ಭಾರತ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಹೀಗಾಗಿ ಅಂತಿಮ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ. ಹೀಗಾಗಿ ಕಳೆದೆರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಆಟಗಾರರು ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಬಹುದು.

ಇಲ್ಲಿ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದು ಖಚಿತ. ಆದರೆ ಅತ್ಯುತ್ತಮ ಫಾರ್ಮ್​​ನಲ್ಲಿರುವ ಶುಭ್​ಮನ್ ಗಿಲ್​ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಏಕೆಂದರೆ ಗಿಲ್ ಮುಂಬರುವ ಟೆಸ್ಟ್​ ಸರಣಿಯಲ್ಲೂ ಕಾಣಿಸಿಕೊಳ್ಳಬೇಕಿದ್ದು, ಹೀಗಾಗಿ ಔಪಚಾರಿಕ ಪಂದ್ಯದಿಂದ ಹೊರಗುಳಿಯಬಹುದು. ಇನ್ನು ಶುಭ್​ಮನ್ ಗಿಲ್ ಸ್ಥಾನದಲ್ಲಿ ಇಶಾನ್ ಕಿಶನ್ ಆರಂಭಿಕರಾಗಿ ಕಾಣಿಸಿಕೊಳ್ಳಬಹುದು.

ತಾಜಾ ಸುದ್ದಿ

ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್​ ಬೀಸಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ 5ನೇ ಕ್ರಮಾಂಕದಲ್ಲಿ ಆಡಿದ್ದರು. ಒಂದು ವೇಳೆ ಕಿಶನ್ ಆರಂಭಿಕರಾಗಿ ಆಡಿದ್ರೆ ರಜತ್ ಪಾಟಿದಾರ್​ಗೆ 5ನೇ ಕ್ರಮಾಂಕದಲ್ಲಿ ಅವಕಾಶ ಸಿಗಬಹುದು.

ಹಾಗೆಯೇ ಆಲ್​ರೌಂಡರ್​ ಆಗಿ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲೂ ಮುಂದುವರೆಯಲಿದ್ದಾರೆ. ಅವರ ಜೊತೆಗೆ ಮತ್ತೋರ್ವ ಆಲ್​ರೌಂಡರ್ ಆಗಿ ವಾಷಿಂಗ್ಟನ್ ಸುಂದರ್​ಗೆ ಬದಲಿಗೆ ಶಹಬಾಝ್ ಅಹ್ಮದ್​ಗೆ ಮಣೆಹಾಕಬಹುದು. ಇನ್ನು ಕುಲ್ದೀಪ್ ಯಾದವ್ ಬದಲು ಈ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ ಕಣಕ್ಕಿಳಿಯುವ ಸಾಧ್ಯತೆಯಿದೆ ಹೆಚ್ಚಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಅಥವಾ ಮೊಹಮ್ಮದ್ ಶಮಿ…ಇವರಿಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಬದಲಿಗೆ ಉಮ್ರಾನ್ ಮಲಿಕ್​ಗೆ ಅವಕಾಶ ನೀಡಬಹುದು. ಇನ್ನುಳಿದಂತೆ ಶಾರ್ದೂಲ್ ಠಾಕೂರ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲಿ ಇಬ್ಬರು ವೇಗಿಗಳಿಗೆ ವಿಶ್ರಾಂತಿ ನೀಡಲು ಮುಂದಾದರೆ ಟೀಮ್ ಇಂಡಿಯಾ ಹೆಚ್ಚುವರಿ ಸ್ಪಿನ್ನರ್​ನೊಂದಿಗೆ ಕಣಕ್ಕಿಳಿಯಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ರೋಹಿತ್ ಶರ್ಮಾ
  • ಇಶಾನ್ ಕಿಶನ್
  • ವಿರಾಟ್ ಕೊಹ್ಲಿ
  • ಸೂರ್ಯಕುಮಾರ್ ಯಾದವ್
  • ರಜತ್ ಪಾಟಿದಾರ್
  • ಶಹಬಾಝ್ ಅಹ್ಮದ್
  • ಯುಜ್ವೇಂದ್ರ ಚಹಾಲ್
  • ಶಾರ್ದೂಲ್ ಠಾಕೂರ್
  • ಮೊಹಮ್ಮದ್ ಶಮಿ
  • ಉಮ್ರಾನ್ ಮಲಿಕ್

ಭಾರತ ಏಕದಿನ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ರಜತ್ ಪಾಟಿದಾರ್.

TV9 Kannada


Leave a Reply

Your email address will not be published. Required fields are marked *