IND vs SA: ಆಟಗಾರನಾಗಿ ಕ್ಲಿಕ್, ನಾಯಕನಾಗಿ ಫ್ಲಾಪ್! ನಾಯಕನಾಗಿ ರಾಹುಲ್​ಗೆ ಇದು ಮಾಡು ಇಲ್ಲವೇ ಮಡಿ ಸರಣಿ | All eyes on kl rahul Captaincy in india vs south africa t20 series


IND vs SA: ಆಟಗಾರನಾಗಿ ಕ್ಲಿಕ್, ನಾಯಕನಾಗಿ ಫ್ಲಾಪ್! ನಾಯಕನಾಗಿ ರಾಹುಲ್​ಗೆ ಇದು ಮಾಡು ಇಲ್ಲವೇ ಮಡಿ ಸರಣಿ

KL Rahul and Rahul Dravid

IND vs SA: ಟೀಂ ಇಂಡಿಯಾ ನಾಯಕನಾಗಿ ರಾಹುಲ್ ಅವರ ದಾಖಲೆಯನ್ನು ನೋಡಿದರೆ ಇನ್ನೂ ಕೆಟ್ಟದಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಅವರು ನಾಯಕತ್ವದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತಿತ್ತು. ನಂತರ ರಾಹುಲ್ ನಾಯಕತ್ವ ವಹಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಸೋತರು.

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದು ಪಂದ್ಯಗಳ T20 ಸರಣಿಯು ಜೂನ್ 9 ರಂದು ಪ್ರಾರಂಭವಾಗುತ್ತದೆ. ಸರಣಿಯ ಮೊದಲ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಗಾಗಿ, ಬಿಸಿಸಿಐ ಹಿರಿಯ ಆಯ್ಕೆ ಸಮಿತಿಯು ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ನಾಯಕ ರೋಹಿತ್ ಶರ್ಮಾ (Rohit Sharma, Jaspreet Bumra)ಗೆ ವಿಶ್ರಾಂತಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ತಂಡದ ನಾಯಕನಾಗಿ ಕೆಎಲ್ ರಾಹುಲ್ (KL Rahul)​ಗೆ ಪಟ್ಟಕಟ್ಟಲಾಗಿದೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ರಾಹುಲ್ ತಂಡದ ನಾಯಕರಾಗಿದ್ದರು. ರಾಹುಲ್ ಇತ್ತೀಚೆಗೆ IPL-2022 ರಲ್ಲಿ ಹೊಸದಾಗಿ ಪ್ರಾರಂಭಿಸಲಾದ ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವ ವಹಿಸಿದ್ದರು. ಅವರು ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ದರು. ಆದರೆ, ಈ ಯಶಸ್ಸು ಟೀಂ ಇಂಡಿಯಾದಲ್ಲಿ ಪುನರಾವರ್ತನೆಯಾಗುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇದರ ಹಿಂದೆ ಹಲವು ಕಾರಣಗಳಿವೆ. ನಾಯಕನಾಗಿ ರಾಹುಲ್ ದಾಖಲೆ ಉತ್ತಮವಾಗಿಲ್ಲ. ಆದರೂ ಅವರು ಟೀಂ ಇಂಡಿಯಾ ನಾಯಕ ರೇಸ್‌ನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ ನಂತರ ರಾಹುಲ್ ನಾಯಕತ್ವದ ರೇಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ರಾಹುಲ್ ನಂತರ ಪಂದ್ಯಕ್ಕೆ ತಂಡದ ನಾಯಕರಾಗಿದ್ದರು. ರೋಹಿತ್ ಶರ್ಮಾ ಮೂರು ಸ್ವರೂಪಗಳಿಗೆ ನಾಯಕನಾಗಿದ್ದರೆ, ರಾಹುಲ್ ಉಪನಾಯಕನಾಗಿ ನೇಮಕಗೊಂಡರು.

TV9 Kannada


Leave a Reply

Your email address will not be published.