IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು | India vs south africa t20 series dinesh karthik hardik pandya ishan kishan rahul dravid rohit sharma


IND vs SA: ಬೆಂಗಳೂರು ಟಿ20 ಮಳೆಯಿಂದಾಗಿ ರದ್ದಾಗಿದ್ದು, ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ನಡುವಿನ ಟಿ20 ಸರಣಿ 2-2ರಲ್ಲಿ ಸಮಬಲಗೊಂಡಿದೆ. ಆದಾಗ್ಯೂ, ಇದರ ಹೊರತಾಗಿಯೂ, ಭಾರತ ತಂಡವು 3 ದೊಡ್ಡ ಯಶಸ್ಸನ್ನು ಸಾಧಿಸಿದೆ, ಇದು ಸರಣಿಯನ್ನು ಗೆಲ್ಲುವುದಕ್ಕಿಂತ ಹೆಚ್ಚಿನ ಉಪಕಾರ ಮಾಡಿಕೊಟ್ಟಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಐದನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ, ಸರಣಿಯಲ್ಲಿ ಶ್ರೇಷ್ಠ ಕ್ರಿಕೆಟ್ ಆಡಲಾಗಿದೆ. ಮೊದಲೆರಡು ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದ್ದು, ಬಳಿಕ ಟೀಂ ಇಂಡಿಯಾ ಅತಿಥಿಗಳನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಟೀಮ್ ಇಂಡಿಯಾ ಫಾರ್ಮ್​ನಲ್ಲಿದ್ದು, ಸರಣಿ ಗೆಲ್ಲುವ ಹೆಚ್ಚಿನ ಅವಕಾಶಗಳು ಇದ್ದವು ಆದರೆ ಮಳೆ ಪಂದ್ಯವನ್ನು ಹಾಳುಮಾಡಿತು. ಅಲ್ಲದೆ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲದಿದ್ದರೂ ಮೂರು ರಂಗಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ (Rahul Dravid and captain Rohit Sharma) ಮೂರು ದೊಡ್ಡ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡಿದ್ದಾರೆ.

ದಿನೇಶ್ ಕಾರ್ತಿಕ್ ರೂಪದಲ್ಲಿ ಫಿನಿಶರ್ ಸಿಕ್ಕಿದ್ದಾರೆ

ದಕ್ಷಿಣ ಆಫ್ರಿಕಾ ಸರಣಿಯಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ಗೆ ಒಬ್ಬ ಅದ್ಭುತ ಫಿನಿಶರ್‌ ಪಡೆದುಕೊಂಡಿದೆ. IPL 2022 ರ ನಂತರ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮೂರು ವರ್ಷಗಳ ನಂತರ, ಕಾರ್ತಿಕ್, ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 46 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 92 ರನ್ ಗಳಿಸಿದರು. ದಿನೇಶ್ ಎರಡು ಬಾರಿ ಅಜೇಯರಾಗಿದ್ದು, ಅವರ ಸ್ಟ್ರೈಕ್ ದರವು 158 ಕ್ಕಿಂತ ಹೆಚ್ಚಿತ್ತು. ಅಂತಹ ಪರಿಸ್ಥಿತಿಯಲ್ಲಿ, ಕಾರ್ತಿಕ್ T20 ವಿಶ್ವಕಪ್‌ನಲ್ಲಿ ಫಿನಿಶರ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿದೆ.

TV9 Kannada


Leave a Reply

Your email address will not be published.