IND vs SA: ಕೆಎಲ್, ಕೋಚ್ ದ್ರಾವಿಡ್​ಗೆ ಶುರುವಾಗಿದೆ ಒಂದಲ್ಲ ಎರಡಲ್ಲ ಮೂರು ಹೊಸ ಟೆನ್ಶನ್ | KL Rahul and head coach Rahul Dravid has to take 3 BIG DECISIONS on Indian Playing XI vs SA 1st T20I


IND vs SA: ಕೆಎಲ್, ಕೋಚ್ ದ್ರಾವಿಡ್​ಗೆ ಶುರುವಾಗಿದೆ ಒಂದಲ್ಲ ಎರಡಲ್ಲ ಮೂರು ಹೊಸ ಟೆನ್ಶನ್

KL Rahul and Rahul Dravid

India vs South Africa: ಜೂನ್ 9 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು ಭಾರತೀಯ (IND vs SA) ಯುವ ಪಡೆ ತಯಾರಿ ನಡೆಸಬೇಕಿದೆ. ಆದರೆ, ಸರಣಿ ಆರಂಭಕ್ಕೂ ಮುನ್ನ ನಾಯಕ ಹಾಗೂ ಕೋಚ್ ದ್ರಾವಿಡ್​ಗೆ ಹೊಸ ತಲೆನೋವು ಶುರುವಾಗಿದೆ.

ಐಪಿಎಲ್ ಮುಕ್ತಾಯದ ಬಳಿಕ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ (Team India) ಆಟಗಾರರು ಇನ್ನೆರಡು ದಿನಗಳಲ್ಲಿ ಮುಂದಿನ ಸರಣಿಗೆ ಸಜ್ಜಾಗಲಿದ್ದಾರೆ. ಜೂನ್ 9 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು ಭಾರತೀಯ (IND vs SA) ಯುವ ಪಡೆ ತಯಾರಿ ನಡೆಸಬೇಕಿದೆ. ಐದು ಪಂದ್ಯಗಳ ಟಿ20 ಸರಣಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಕೆಎಲ್ ‌ರಾಹುಲ್‌ (KL Rahul) ತಂಡವನ್ನು ಮುನ್ನಡೆಸಲಿದ್ದಾರೆ. ರಿಷಬ್ ಪಂತ್ ಉಪನಾಯಕನಾಗಿದ್ದಾರೆ. ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಅವರಿಗೂ ರೆಸ್ಟ್ ನೀಡಲಾಗಿದೆ. ಹಾರ್ದಿಕ್‌ ಪಾಂಡ್ಯ ಮತ್ತು ದಿನೇಶ್‌ ಕಾರ್ತಿಕ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಜೊತೆಗೆ ಕೆಲ ಯುವ ಆಟಗಾರರು ಕೂಡ ಆಯ್ಕೆಯಾಗಿದ್ದಾರೆ. ಆದರೆ, ಸರಣಿ ಆರಂಭಕ್ಕೂ ಮುನ್ನ ನಾಯಕ ಹಾಗೂ ಕೋಚ್ ದ್ರಾವಿಡ್​ಗೆ ಹೊಸ ತಲೆನೋವು ಶುರುವಾಗಿದೆ. ಪ್ಲೇಯಿಂಗ್ ಇಲೆವೆನ್ ವಿಚಾರದಲ್ಲಿ ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಒತ್ತಡ ಇವರ ಮೇಲಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಕ್ರಮಾಂಕ:

ಐಪಿಎಲ್ 2022 ರಲ್ಲಿ ಹಾರ್ದಿಕ್ ಅವರ ಬ್ಯಾಟಿಂಗ್-ಬೌಲಿಂಗ್ ಅದ್ಭುತವಾಗಿತ್ತು. 487 ರನ್ ಕಲೆಹಾಕಿದ್ದರು. ಆದರೆ, ಇವರು ಬ್ಯಾಟಿಂಗ್ ಮಾಡಲು ಬರುತ್ತಿದ್ದ ಕ್ರಮಾಂಕ 3 ಅಥವಾ 4. ಆದರೆ, ಇದೀಗ ಟೀಮ್ ಇಂಡಿಯಾಕ್ಕೆ ಬಂದ ಮೇಲೆ ಇವರ ಬ್ಯಾಟಿಂಗ್ ಕ್ರಮಾಂಕ ಯಾವುದು ಎಂಬ ಚಿಂತೆ ಶುರುವಾಗಿದೆ. ಯಾಕೆಂದರೆ ಟಾಪ್ ಆರ್ಡರ್​ನಲ್ಲಿ ಈಗಾಗಲೇ ಕೆಎಲ್ ರಾಹುಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಹೀಗೆ ಪ್ರಮುಖ ಬ್ಯಾಟರ್​ಗಳಿದ್ದಾರೆ. ನಾಯಕ ಹಾಗೂ ಕೋಚ್ ದ್ರಾವಿಡ್ ಈ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕಿದೆ.

ರಾಹುಲ್ ಜೊತೆ ಓಪನರ್ ಯಾರು?:

ಇಬ್ಬರು ರಾಹುಲ್​ಗೆ ಇರುವ ಮತ್ತೊಂದು ಟೆನ್ಶನ್ ಎಂದರೆ ಆರಂಭಿಕರು ಯಾರು ಎಂಬುದು. ಇದಕ್ಕೆ ಎರಡು ಆಯ್ಕೆ ಇದೆ. ಕೆಎಲ್ ಖಚಿತವಾಗಿ ಇನ್ನಿಂಗ್ಸ್​ ಆರಂಭಿಸಿದರೆ ಇನ್ನೊಂದು ಆಯ್ಕೆ ರುತುರಾಜ್ ಗಾಯಕ್ವಡ್ ಅಥವಾ ಇಶಾನ್ ಕಿಶನ್. ಇಬ್ಬರು ಕೂಡ ಡಿಸೆಂಟ್ ಫಾರ್ಮ್​ನಲ್ಲಿದ್ದಾರೆ. ಟೀಮ್ ಇಂಡಿಯಾದ ಭವಿಷ್ಯದ ಓಪನರ್ ಕೂಡ ಹೌದು, ಹೀಗಾಗಿ ಇವರಲ್ಲಿ ಯಾರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಎಂಬುದು ನೋಡಬೇಕಿದೆ.

Lionel Messi: ಫೈನಲಿಸಿಮಾ ಕಪ್ ಗೆದ್ದುಕೊಂಡ ಅರ್ಜೆಂಟಿನಾ: ಲಿಯೊನೆಲ್ ಮೆಸ್ಸಿ ವಿಶೇಷ ಸಾಧನೆ

ಬೌಲಿಂಗ್ ಪಡೆ ಹೇಗೆ?:

ಬೌಲರ್​ಗಳ ದಂಡೇ ಟೀಮ್ ಇಂಡಿಯಾದಲ್ಲಿದೆ. ಯುಜ್ವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ಜೋಡಿಯಾದರೆ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಶ್​ದೀಪ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ವೇಗಿಗಳಾಗಿದ್ದಾರೆ. ಐಪಿಎಲ್​ನಲ್ಲಿ ಹರ್ಷಲ್ ಉತ್ತಮ ಪ್ರದರ್ಶನ ನೀಡಿದ್ದರು. ಭುವಿ ಹಾಗೂ ಅರ್ಶ್​ದೀಪ್ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಆವೇಶ್ ಹಾಗೂ ಉಮ್ರಾನ್ ಸ್ಪೀಡ್ ಸ್ಟಾರ್​ಗಳಾಗಿದ್ದಾರೆ. ಒಟ್ಟಾರೆ ಬೌಲಿಂಗ್ ಆಯ್ಕೆ ಕೂಡ ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಾಗಲಿದೆ.

ಜೂನ್ 9 ರಿಂದ ಆರಂಭಗೊಳ್ಳುವ ಮೊದಲ ಟಿ20 ಪಂದ್ಯವು ದೆಹಲಿಯಲ್ಲಿ ನಡೆಯಲಿದ್ದು, ಜೂನ್ 12 ಎರಡನೇ ಟಿ20 ಕಟಕ್, ಜೂನ್ 14 ಮೂರನೇ ಟಿ20 ವಿಶಾಖಪಟ್ಟಣಂ, ಜೂನ್ 17 ನಾಲ್ಕನೇ ಟಿ20 ರಾಜ್‌ಕೋಟ್‌, ಜೂನ್ 19 ಐದನೇ ಟಿ20 ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

TV9 Kannada


Leave a Reply

Your email address will not be published. Required fields are marked *