IND vs SA: ಕೇರಳದಲ್ಲಿ ಟೀಮ್ ಇಂಡಿಯಾ ಬಸ್​ಗೆ ಮುಗಿಬಿದ್ದ ಫ್ಯಾನ್ಸ್: ಸಂಜು ಫೋಟೋ ತೋರಿಸಿದ ಸೂರ್ಯಕುಮಾರ್ | IND vs SA 1st T20I Suryakumar Yadav flashing the picture of Sanju Samson on his phone to fans around the bus


ರೋಹಿತ್ ಪಡೆ ವಿಮಾನದಿಂದ ಇಳಿದು ಹೊರಗಡೆ ನಿಂತಿದ್ದ ಬಸ್ ಏರಿ ಹೊಟೇಲ್​ಗೆ ತೆರಳುವ ಸಂದರ್ಭ ಅಭಿಮಾನಿಗಳು ಜೋರಾಗಿ ಸಂಜು ಸಂಜು ಎಂದು ಕೂಗಿದ್ದಾರೆ. ಈ ಸಂದರ್ಭ ಬಸ್​ನಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಮೊಬೈಲ್​ನಲ್ಲಿ ಸ್ಯಾಮ್ಸನ್ ಫೋಟೋವನ್ನು ಅಭಿಮಾನಿಗಳಿಗೆ ತೋರಿಸಿ ಖುಷಿ ಪಡಿಸಿದ್ದಾರೆ.

IND vs SA: ಕೇರಳದಲ್ಲಿ ಟೀಮ್ ಇಂಡಿಯಾ ಬಸ್​ಗೆ ಮುಗಿಬಿದ್ದ ಫ್ಯಾನ್ಸ್: ಸಂಜು ಫೋಟೋ ತೋರಿಸಿದ ಸೂರ್ಯಕುಮಾರ್

Sanju Samson and Suryakumar Yadav

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ವಶಪಡಿಸಿಕೊಂಡ ಭಾರತ ಕ್ರಿಕೆಟ್ ತಂಡ ಇದೀಗ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ನಾಳೆ (. 28) ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್​ಫೀಲ್ಡ್ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಸೋಮವಾರ ಸಂಜೆ ತಿರುವನಂತಪುರಂಗೆ (Trivandrum) ಬಂದ ಭಾರತೀಯ ಆಟಗಾರರಿಗೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇರಳ ಕ್ರಿಕೆಟ್ ಸಂಸ್ಥೆ ಅದ್ಧೂರಿ ಸ್ವಾಗತ ನೀಡಿತು. ಟೀಮ್ ಇಂಡಿಯಾ (Team India) ಪ್ಲೇಯರ್​ಗಳನ್ನು ನೋಡಲು ಏರ್​ಪೋರ್ಟ್ ಹೊರಗಡೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸೇರಿದ್ದರು.

ರೋಹಿತ್ ಪಡೆ ವಿಮಾನದಿಂದ ಇಳಿದು ಹೊರಗಡೆ ನಿಂತಿದ್ದ ಬಸ್ ಏರಿ ಹೊಟೇಲ್​ಗೆ ತೆರಳುವ ಸಂದರ್ಭ ಅಭಿಮಾನಿಗಳು ಜೋರಾಗಿ ಸಂಜು ಸಂಜು ಎಂದು ಕೂಗಿದ್ದಾರೆ. ಈ ಸಂದರ್ಭ ಬಸ್​ನಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಮೊಬೈಲ್​ನಲ್ಲಿ ಸ್ಯಾಮ್ಸನ್ ಫೋಟೋವನ್ನು ಅಭಿಮಾನಿಗಳಿಗೆ ತೋರಿಸಿ ಖುಷಿ ಪಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶ್ವಕಪ್​ಗೆ ಆಯ್ಕೆಯಾಗದ ಸಂಜು:

ಮುಂದಿನ ತಿಂಗಳು ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗೆ ಸಂಜು ಸ್ಯಾಮ್ಸನ್ ಆಯ್ಕೆಯಾಗಿಲ್ಲ. ಅಲ್ಲದೆ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಸೇರ್ಪಡೆ ಆಗಿಲ್ಲ. ಕೇರಳದ ವಿಕೆಟ್ ಕೀಪರ್, ಬ್ಯಾಟರ್ ಸ್ಯಾಮ್ಸನ್ ಅವರನ್ನು ಬಿಸಿಸಿಐ ಪುನಃ ಕಡೆಗಣಿಸಿದ್ದಕ್ಕೆ ಅವರ ಅಭಿಮಾನಿ ಭಾರತದ ಆಟಗಾರರು ಬಂದಾಗ ಸಂಜು, ಸಂಜು ಎಂದು ಕೂಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವು ಅಕ್ಟೋಬರ್ 28ರಂದು ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ಕೂಡ ಮೈದಾನದಲ್ಲಿ ನಾವು ಸಂಜು ಹೆಸರನ್ನು ಕೂಗುತ್ತೇವೆ ಎಂದು ಫ್ಯಾನ್ಸ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ಲೇಯರ್ಸ್​ಗೆ ಅದ್ಧೂರಿ ಸ್ವಾಗತ:

ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಕೂಡ ಭಾರತೀಯ ಸಂಪ್ರದಾಯದಂತೆ ತಿಲಕ ವಿರಿಸಿ, ಮಲ್ಲಿಗೆ ಮಾಲೆ ಹಾಕಿ ಏರ್​ಪೋರ್ಟ್​ನಲ್ಲಿ ಸ್ವಾಗತಿಸಲಾಯಿತು. ಬಳಿಕ ಕ್ರಿಕೆಟಿಗರು ಬಿಗಿ ಭದ್ರತೆಯಲ್ಲಿ ಹೊಟೇಲ್‌ಗೆ ತೆರಳಿದರು. ಆಫ್ರಿಕಾ ತಂಡದಲ್ಲಿರುವ ಭಾರತೀಯ ಮೂಲದ ಕೇಶವ್‌ ಮಹಾರಾಜ್‌ ತಿರುವನಂತಪುರದ ಪ್ರಸಿದ್ಧ ದೇವಾಲಯ, ಪದ್ಮನಾಭಸ್ವಾಮಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಇಂದಿನಿಂದ ಅಭ್ಯಾಸ ಶುರು:

TV9 Kannada


Leave a Reply

Your email address will not be published.