IND vs SA: ಟೀಂ ಇಂಡಿಯಾ ಇಂದು ‘ಈ ’ ತಪ್ಪುಗಳನ್ನು ತಿದ್ದಿಕೊಂಡ್ರೆ ಮಾತ್ರ ಗೆಲುವು..!


ಟೀಂ ಇಂಡಿಯ ಮೊದಲ ಏಕದಿನ ಪಂದ್ಯದ ಸೋಲಿನಲ್ಲಿ ಏನೆಲ್ಲಾ ತಪ್ಪುಗಳನ್ನು ಮಾಡಿತೋ, ಆ ತಪ್ಪಗಳನ್ನು ಎರಡನೇ ಏಕದಿನ ಪಂದ್ಯದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಒಂದಲ್ಲ, ಎರಡಲ್ಲ ಹಲವು ತಪ್ಪುಗಳು ಭಾರತದ ಬೆನ್ನಿಗೆ ಸಿಲುಕಿವೆ. ಹಾಗಾಗಿ ಕೋಚ್​​ ಮತ್ತು ನಾಯಕ, ಆಟಗಾರರಿಗೆ ತಪ್ಪುಗಳನ್ನು ಮನವರಿಕೆ ಮಾಡಿ ತಿದ್ದುವುದು ಅಗತ್ಯ.

ಮೊದಲ ಏಕದಿನ ಸೋಲುಂಡ ಭಾರತ, ಇದೀಗ 2ನೇ ಏಕದಿನ ಪಂದ್ಯಕ್ಕೆ ಸಜ್ಜಾಗ್ತಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸಿಕೊಳ್ಳುವ ಅಗತ್ಯ ಇದೆ. ತವರಿನಲ್ಲಿ ದಕ್ಷಿಣ ಆಫ್ರಿಕಾವನ್ನ ಮಣಿಸೋದು ಅಷ್ಟು ಸುಲಭವಲ್ಲ. ಹಾಗಾಗಿ ಮೊದಲ ಪಂದ್ಯದಲ್ಲಿ ಯಾವ ವಿಭಾಗದಲ್ಲಿ ಏನೆಲ್ಲಾ ತಪ್ಪುಗಳು ನಡೆದ್ವು ಅನ್ನೋದ್ರ ಮೇಲೆ ತುಂಬಾನೇ ಅಧ್ಯಯನ ನಡೆಸೋದು ಭಾರತದ ಮುಂದಿರುವ ದೊಡ್ಡ ಸವಾಲಾಗಿದೆ.

ಉತ್ತಮ ಓಪನಿಂಗ್​ ಪಡೆಯೋದು ಅನಿವಾರ್ಯ..!

ಮೊದಲ ಪಂದ್ಯದಲ್ಲಿ ಶಿಖರ್​ ಧವನ್​ ಅದ್ಭುತ ಇನ್ನಿಂಗ್ಸ್​ ಕಟ್ಟುತ್ತಿದ್ರೆ, ರಾಹುಲ್​ ನಿಧಾನ ಗತಿ ಬ್ಯಾಟಿಂಗ್​​ ನಡೆಸಿ ಬೇಗನೇ ಔಟಾದ್ರು. ಇದರ ಪರಿಣಾಮ ಭಾರತ ಮೊದಲ ವಿಕೆಟ್​​​ಗೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯ್ತು. ಹಾಗಾಗಿ ಪಂದ್ಯ ಗೆಲ್ಲಬೇಕೆಂದರೆ ಉತ್ತಮ ಭದ್ರ ಬುನಾದಿ ಹಾಕಿಕೊಡುವುದು ಇಲ್ಲಿ ಪ್ರಮುಖ ಪಾತ್ರವಹಿಸುತ್ತೆ.

ಮಧ್ಯಮ ಕ್ರಮಾಂಕ ಇನ್ನಷ್ಟು ಬಲಗೊಳ್ಳಬೇಕು..!

ಉತ್ತಮ ಆರಂಭ ಪಡೆಯದ ಕಾರಣ, ಮಧ್ಯಮ ಕ್ರಮಾಂಕ ಕೂಡ ಕುಸಿಯಿತು. ಕೊಹ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ಟರೆ, ಶ್ರೇಯಸ್​ ಅಯ್ಯರ್​, ರಿಷಭ್​ ಪಂತ್​, ವೆಂಕಟೇಶ್​​ ಅಯ್ಯರ್​ ಭರವಸೆಯ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದ್ರು. ಇದರಿಂದಲೇ ಪಂದ್ಯ ಸೋಲು ಕಂಡಿತು. ಹಾಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್​​​ಗಳು ಕಠಿಣ ಅಭ್ಯಾಸ ನಡೆಸೋದು ಅನಿವಾರ್ಯ.

ಹರಿಣಗಳ ಎದುರು ನಡೆಯದ ಬೌಲರ್​​​ಗಳ ಆಟ..!

ಹೌದು..! ಆರಂಭದಲ್ಲಿ ಬೂಮ್ರಾ 2 ವಿಕೆಟ್​ ಪಡೆದಿದ್ದು ಬಿಟ್ಟರೆ, ಉಳಿದೆಲ್ಲಾ ಬೌಲರ್ಸ್​ ತೀರಾ ದುಬಾರಿಯಾದ್ರು. ಮೊದಲು ವಿಕೆಟ್​ ಉರುಳಿಸಿದ್ರೂ ಮಧ್ಯಮ ಓವರ್​​​​ಗಳಲ್ಲಿ ಬೌಲರ್ಸ್​​​ ವಿಕೆಟ್​​ಗಾಗಿ ಪರದಾಡಿದ್ರು. ಅಲ್ಲದೆ ಭುವನೇಶ್ವರ್​​, ಶಾರ್ದೂಲ್​, ಚಹಲ್​ ಅಶ್ವಿನ್​​​ರಂತ ಶ್ರೇಷ್ಠ ಬೌಲರ್​​ಗಳಿದ್ರೂ ಪಂದ್ಯದ ಮೇಲೆ ಹಿಡಿತ ಸಾಧಿಸಲು ವಿಫಲರಾದ್ರು.

ಕೊಹ್ಲಿ ಮಾರ್ಗದರ್ಶನ ಪಡೆಯಬೇಕು ಕ್ಯಾಪ್ಟನ್ ರಾಹುಲ್..!

ಹೌದು.. ಕೆ.ಎಲ್​​.ರಾಹುಲ್​ ನಾಯಕತ್ವ ಸಪ್ಪೆಯಾಗಿತ್ತು. ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು. ಫೀಲ್ಡ್​ ಹೇಗೆ ಸೆಟ್​ ಮಾಡ್ಬೇಕು ಅನ್ನೋದ್ರಲ್ಲಿ​ ರಾಹುಲ್​​​​​​​ ವೀಕ್​ ಅನ್ನೋದನ್ನ ಪ್ರೂವ್​ ಮಾಡಿದ್ರು. ಜೊತೆಗೆ 6ನೇ ಬೌಲರ್​​ ಇದ್ರೂ ಬಳಸಿಕೊಳ್ಳದಿರೋದು ಕೂಡ ತಂಡಕ್ಕೆ ಹಿನ್ನಡೆಯಾಯ್ತು. ಹಾಗೆಯೇ ಒತ್ತಡದಲ್ಲಿ ಖಡಕ್​ ನಿರ್ಧಾರಕ್ಕೆ ರಾಹುಲ್​ ಕೈ ಹಾಕಲಿಲ್ಲ. ಹಾಗಾಗಿ ಅನುಭವಿ ನಾಯಕ​ ಕೊಹ್ಲಿಯಿಂದ ಮಾರ್ಗದರ್ಶನ ಪಡೆಯಬೇಕು.

ಫೀಲ್ಡಿಂಗ್​ ವೇಳೆ ಆಟಗಾರರಲ್ಲಿ ಚುರುಕುತನವೇ ಇರಲಿಲ್ಲ..!
ಆಟಗಾರರು ಆನ್​ ದ ಫೀಲ್ಡ್​​ನಲ್ಲಿ ಸದಾ ಅಗ್ರೆಸ್ಸಿವ್​ ಆಗಿರಬೇಕು. ಆಗಲೇ ಎದುರಾಳಿ ಆತಂಕಕ್ಕೆ ಒಳಗಾಗೋದು. ಆದ್ರೆ ಕೊಹ್ಲಿ ಬಿಟ್ಟರೆ ಯಾರಲ್ಲೂ ಈ ಗುಣ ಕಂಡು ಬಂದಿಲ್ಲ. ಕೆಲ ರನೌಟ್​​, ಕ್ಯಾಚ್​​ಗಳನ್ನೂ ಕೈ ಚೆಲ್ಲಿದ್ರು. ಹಾಗೆಯೇ ಮಿಸ್​​ ಫೀಲ್ಡಿಂಗ್​​ನಿಂದಲೂ ದಕ್ಷಿಣ ಆಫ್ರಿಕಾಗೆ ರನ್​​ ಹರಿದು ಬಂದವು. ಒಟ್ನಲ್ಲಿ ಆಟಗಾರರು ಈ ಎಲ್ಲಾ ವಿಭಾಗಗಳ ಮೇಲೆ ಇಂದು ಇಂಪ್ರೂವ್​ ಮಾಡಿಕೊಂಡಿದ್ದೇ ಆದ್ರೆ, 2ನೇ ಪಂದ್ಯದ ಗೆಲುವು ನಮ್ಮದೇ ಆಗೋದು ಖಚಿತ..!

The post IND vs SA: ಟೀಂ ಇಂಡಿಯಾ ಇಂದು ‘ಈ ’ ತಪ್ಪುಗಳನ್ನು ತಿದ್ದಿಕೊಂಡ್ರೆ ಮಾತ್ರ ಗೆಲುವು..! appeared first on News First Kannada.

News First Live Kannada


Leave a Reply

Your email address will not be published. Required fields are marked *