IND vs SA: ನಾಯಕನಾಗಿ ಫೀಲ್ಡಿಗಿಳಿದ ತಕ್ಷಣ ವೀರೇಂದ್ರ ಸೆಹ್ವಾಗ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್ | KL Rahul third player to captain India in ODIs without captaincy in List A cricket


IND vs SA: ನಾಯಕನಾಗಿ ಫೀಲ್ಡಿಗಿಳಿದ ತಕ್ಷಣ ವೀರೇಂದ್ರ ಸೆಹ್ವಾಗ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಕೆಎಲ್ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕರಾಗಿ ರಾಹುಲ್ ಇತಿಹಾಸ ನಿರ್ಮಿಸಿದ್ದರು. ರಾಹುಲ್ ಲಿಸ್ಟ್ ಎ ಕ್ರಿಕೆಟ್‌ಗೆ ನಾಯಕತ್ವ ವಹಿಸದೆ 50 ಓವರ್‌ಗಳ ಕ್ರಿಕೆಟ್‌ನಲ್ಲಿ ದೇಶವನ್ನು ಮುನ್ನಡೆಸಿದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸೈಯದ್ ಕಿರ್ಮಾನಿ ಮತ್ತು ಆಕ್ರಮಣಕಾರಿ ಆರಂಭಿಕ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ರಾಹುಲ್​ಗೆ ವಹಿಸಲಾಗಿದೆ.

ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸಿದ ನಂತರ ಆಯ್ಕೆಗಾರರು ರೋಹಿತ್ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ಮಾಡಿದ್ದರು. ಕರ್ನಾಟಕದ ಬ್ಯಾಟ್ಸ್‌ಮನ್ ರಾಹುಲ್ ತಮ್ಮ 39ನೇ ಏಕದಿನ ಪಂದ್ಯಕ್ಕೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ದೇಶಕ್ಕಾಗಿ 50 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೊದಲು ತಂಡದ ನಾಯಕತ್ವ ವಹಿಸಿದ ಕೊನೆಯ ಆಟಗಾರ ಮೊಹಿಂದರ್ ಅಮರನಾಥ್ ಅವರು ಅಕ್ಟೋಬರ್ 1984 ರಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದರು. ಮೊಹಿಂದರ್ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದಾಗ, ಅವರು ತಮ್ಮ 35 ನೇ ODI ಆಡುತ್ತಿದ್ದರು.

ಟಾಸ್ ಸೋತ ಕೆಎಲ್ ರಾಹುಲ್
ಕೆಎಲ್ ರಾಹುಲ್ ಏಕದಿನ ನಾಯಕನಾಗಿ ಮೊದಲ ಟೆಸ್ಟ್ ಸೋತರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮಧ್ಯಪ್ರದೇಶದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಓಪನಿಂಗ್ ಮಾಡಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ ರೋಹಿತ್ ಶರ್ಮಾ ಇಲ್ಲದ ಕಾರಣ ಅವರು ಓಪನಿಂಗ್‌ಗೆ ಹೋಗಲು ನಿರ್ಧರಿಸಿದರು.

ಟೆಸ್ಟ್ ಸರಣಿಗೂ ನಾಯಕತ್ವ ವಹಿಸಿದ್ದರು
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೆಸ್ಟ್ ಸರಣಿಯ ವೇಳೆ ಕೆಎಲ್ ರಾಹುಲ್ ಕೂಡ ನಾಯಕತ್ವದ ಅವಕಾಶ ಪಡೆದಿದ್ದರು. ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಗಾಯಗೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ನಾಯಕತ್ವದ ಜವಾಬ್ದಾರಿಯನ್ನು ಹೊರಬೇಕಾಯಿತು. ಈ ಪಂದ್ಯಕ್ಕೂ ಮುನ್ನ ಅವರು ಕೇವಲ ಒಂದು ಪ್ರಥಮ ದರ್ಜೆ ಪಂದ್ಯದಲ್ಲಿ ನಾಯಕರಾಗಿದ್ದರು. ಅವರು ಟಿ20 ಮಾದರಿಯಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ 2020 ಮತ್ತು 2021ರಲ್ಲಿ ತಂಡದ ನಾಯಕರಾಗಿದ್ದರು. ಆದರೆ, ಹೆಚ್ಚಿನ ಯಶಸ್ಸು ಸಿಗಲಿಲ್ಲ. ಅವರ ನಾಯಕತ್ವದಲ್ಲಿ ತಂಡವು ಒಮ್ಮೆಯೂ ಪ್ಲೇ ಆಫ್‌ಗೆ ಹೋಗಲಿಲ್ಲ. IPL 2022 ರಲ್ಲಿ KL ರಾಹುಲ್ ಈಗ ಲಕ್ನೋ ಫ್ರಾಂಚೈಸಿಯ ನಾಯಕರಾಗಿದ್ದಾರೆ ಎಂದು ವರದಿಯಾಗಿದೆ. IPL ನ ಈ ಹೊಸ ತಂಡವು ರಾಹುಲ್ ಅವರನ್ನು ಖರೀದಿಸಲು ನಿರ್ಧರಿಸಿದೆ.

TV9 Kannada


Leave a Reply

Your email address will not be published. Required fields are marked *