IND vs SA: ಭಾರತಕ್ಕೆ ಬರುತ್ತಿದ್ದಂತೆ ದಕ್ಷಿಣ ಆಫ್ರಿಕಾ ಆಟಗಾರರಿಗೆ ಶುರುವಾಗಿದೆ ಭಯ: ಇದಕ್ಕೆ ಕಾರಣ ಈ ಬೌಲರ್ | IND vs SA T20 Series Yuzvendra Chahal Most dangerous player in Team India due to which the South African team is in panic


India vs South Africa T20: ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ20 ನಡೆಯಲಿದೆ. ಹರಿಣಗಳ ಪಡೆ ಇಂದು ಭಾರತಕ್ಕೆ ಆಗಮಿಸಲಿದ್ದು ಆದರೆ, ಇದಕ್ಕೂ ಮನ್ನವೇ ಬವುಮಾ ಪಡೆಗೆ ಭಯ ಶುರುವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡಿದ್ದು ಆಟಗಾರರು ಇದೀಗ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಸರಣಿಗೆ ಸಜ್ಜಾಗುತ್ತಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಕೆಎಲ್ ‌ರಾಹುಲ್‌ (KL Rahul) ತಂಡವನ್ನು ಮುನ್ನಡೆಸಲಿದ್ದಾರೆ. ರಿಷಬ್ ಪಂತ್ ಉಪನಾಯಕನಾಗಿದ್ದಾರೆ. ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಅವರಿಗೂ ರೆಸ್ಟ್ ನೀಡಲಾಗಿದೆ. ಹಾರ್ದಿಕ್‌ ಪಾಂಡ್ಯ ಮತ್ತು ದಿನೇಶ್‌ ಕಾರ್ತಿಕ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಜೊತೆಗೆ ಕೆಲ ಯುವ ಆಟಗಾರರು ಕೂಡ ಆಯ್ಕೆಯಾಗಿದ್ದಾರೆ. ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲ ಟಿ20 ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಆದರೆ, ಇದಕ್ಕೂ ಮನ್ನವೇ ಹರಿಣಗಳ ಪಡೆಗೆ ಭಯ ಶುರುವಾಗಿದೆ. ಅದು ಯುಜ್ವೇಂದ್ರ ಚಹಲ್ (Yuzvendra Chahal) ಅವರದ್ದು.

ಹೌದು, ಭಾರತೀಯ ಪಿಚ್​ನಲ್ಲಿ ಅತ್ಯಂತ ಅಪಾಯಕಾರಿ ಸ್ಪಿನ್ನರ್ ಆಗಿರುವ ಯುಜ್ವೇಂದ್ರ ಚಹಲ್ ಆಫ್ರಿಕಾ ಆಟಗಾರರ ನಿದ್ದೆ ಕೆಡಿಸಿದೆ. 54 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 68 ರನ್ ವಿಕೆಟ್ ಕಿತ್ತ ಇವರು ಭರ್ಜರಿ ಫಾರ್ಮ್​ನಲ್ಲಿ ಕೂಡ ಇದ್ದಾರೆ. ಐಪಿಎಲ್ 2022 ರಲ್ಲಿ 27 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಕೂಡ ತೊಟ್ಟಿದ್ದರು. ಕಳೆದ ವರ್ಷ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಚಹಲ್ ಈಗ ಮತ್ತೊಮ್ಮೆ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು ದೊಡ್ಡ ಇಂಪ್ಯಾಕ್ಟ್ ಸೃಷ್ಟಿಸುವುದು ಖಚಿತ.

ಅಚ್ಚರಿ ಎಂದರೆ ಈ ಹಿಂದೆ ಭಾರತದಲ್ಲಿ ನಡೆದ ಉಭಯ ತಂಡಗಳ ನಡುವಿನ ಟಿ20 ಸರಣಿಯಲ್ಲಿ ಭಾರತ ಎಂದಿಗೂ ಗೆಲುವು ದಾಖಲಿಸಿಲ್ಲ. ಹೀಗಾಗಿ, ಈ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಹಿಂದೆ 2015/16ರಲ್ಲಿ ಇಂಡೋ-ಆಫ್ರಿಕಾ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಹರಿಣಗಳ ತಂಡ 2-0 ಅಂತರದಿಂದ ಗೆಲುವು ದಾಖಲು ಮಾಡಿತ್ತು. ಇದಾದ ಬಳಿಕ 2019-20ರಲ್ಲಿ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲು ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಅಲ್ಲಿ ಸರಣಿ ಸಮಬಲಗೊಂಡಿತ್ತು.

IPL 2022, RCB: ಐಪಿಎಲ್ 2023ಕ್ಕೂ ಮುನ್ನ ಈ 5 ಆಟಗಾರರನ್ನು ರಿಲೀಸ್ ಮಾಡಲಿದೆ ಆರ್​ಸಿಬಿ

ಇದೀಗ ಯುವಕರಿಂದಲೇ ಕೂಡಿರುವ ಭಾರತ ತಂಡ ಗೆಲುವು ಸಾಧಿಸಿ, ಹೊಸ ಇತಿಹಾಸ ರಚನೆ ಮಾಡುವ ತವಕದಲ್ಲಿದೆ. ತಂಡಕ್ಕೆ ಕೋಚ್​ ರಾಹುಲ್​ ದ್ರಾವಿಡ್ ಸಾರಥ್ಯವಿದ್ದು, ದಿನೇಶ್ ಕಾರ್ತಿಕ್​, ರಿಷಭ್ ಪಂತ್​ ಸೇರಿದಂತೆ ಕೆಲ ಟಿ20 ಸ್ಪೆಷಲಿಸ್ಟ್​​​​ಗಳಿಗೆ ಬಿಸಿಸಿಐ ಮಣೆ ಹಾಕಿದೆ. ಈ ಸರಣಿಯಲ್ಲಿ ಭಾರತ ಗೆಲುವು ದಾಖಲು ಮಾಡಿದ್ರೆ, ಹೊಸ ಐತಿಹಾಸ ನಿರ್ಮಾಣವಾಗಲಿದೆ.

ಜೂನ್ 9 ರಿಂದ ಆರಂಭಗೊಳ್ಳುವ ಮೊದಲ ಟಿ20 ಪಂದ್ಯವು ದೆಹಲಿಯಲ್ಲಿ ನಡೆಯಲಿದ್ದು, ಜೂನ್ 12 ಎರಡನೇ ಟಿ20 ಕಟಕ್, ಜೂನ್ 14 ಮೂರನೇ ಟಿ20 ವಿಶಾಖಪಟ್ಟಣಂ, ಜೂನ್ 17 ನಾಲ್ಕನೇ ಟಿ20 ರಾಜ್‌ಕೋಟ್‌, ಜೂನ್ 19 ಐದನೇ ಟಿ20 ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಟಬ್ರೈಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್, ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್.

TV9 Kannada


Leave a Reply

Your email address will not be published. Required fields are marked *