IND vs SA: ಮಿಲ್ಲರ್ ಔಟ್ ಮಾಡುವುದು ಹೇಗೆ? ಟೀಂ ಇಂಡಿಯಾ ಬೌಲರ್​ಗಳಿಗೆ ವಿಡಿಯೋ ಸಲಹೆ ನೀಡಿದ ಟರ್ಬನೇಟರ್ | IND vs SA Harbhajan Singh Posts A Hilarious Video Of How Bowlers Can Dismiss The In form David Miller


IND vs SA: ಮಿಲ್ಲರ್ ಔಟ್ ಮಾಡುವುದು ಹೇಗೆ? ಟೀಂ ಇಂಡಿಯಾ ಬೌಲರ್​ಗಳಿಗೆ ವಿಡಿಯೋ ಸಲಹೆ ನೀಡಿದ ಟರ್ಬನೇಟರ್

ಡೇವಿಡ್ ಮಿಲ್ಲರ್

IND vs SA: ಐಪಿಎಲ್ 2022 ರಲ್ಲೂ ಮಿಲ್ಲರ್ ಅದೇ ಶೈಲಿಯಲ್ಲಿ ಬ್ಯಾಟ್ ಮಾಡಿದರು. ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಿಲ್ಲರ್ ಈ ಬಾರಿಯ ಐಪಿಎಲ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಕೇವಲ 7 ಬಾರಿ ವಿಕೆಟ್ ಕಳೆದುಕೊಂಡು ಒಟ್ಟು 481 ರನ್ ಗಳಿಸಿದ್ದರು.

ಐಪಿಎಲ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಡೇವಿಡ್ ಮಿಲ್ಲರ್ (David Miller) ಭಾರತ ವಿರುದ್ಧದ ಟಿ20 ಸರಣಿಯಲ್ಲೂ ಅದೇ ಆಕ್ರಮಣಶೀಲತೆಯನ್ನು ಮುಂದುವರಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಯಾವ ಬೌಲರ್‌ಗೂ ನಿಲ್ಲಲಾರದಷ್ಟು ವಿಧ್ವಂಸಕತೆಯನ್ನು ಸೃಷ್ಟಿಸಿದರು. ಮಿಲ್ಲರ್ ಅವರ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ಆಫ್ರಿಕಾ 211 ರನ್‌ಗಳ ಗುರಿಯನ್ನು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು. ಎರಡನೇ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ (Team India) ಮಿಲ್ಲರ್ ಸವಾಲನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ (Harbhajan Singh)  ಮಿಲ್ಲರ್ ರನ್ನು ಔಟ್ ಮಾಡುವ ವಿಚಿತ್ರ ವಿಧಾನವನ್ನು ಟೀಂ ಇಂಡಿಯಾ ಬೌಲರ್​ಗಳಿಗೆ ಹೇಳಿಕೊಟ್ಟಿದ್ದಾರೆ.

ಭಾರತ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ. ರಿಷಬ್ ಪಂತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಟಿ20 ಗೆಲುವಿನೊಂದಿಗೆ ಮರಳುವುದು ಬಹಳ ಮುಖ್ಯ. ಮತ್ತೊಮ್ಮೆ ವಿಫಲವಾದರೆ ಸರಣಿ ಗೆಲ್ಲಲು ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು. ಈ ಸರಣಿಯಲ್ಲಿ ಸಹಜವಾಗಿಯೇ ಡೇವಿಡ್ ಮಿಲ್ಲರ್ ಸ್ಫೋಟಕ ಫಾರ್ಮ್‌ನಲ್ಲಿರುವ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದ್ದಾರೆ. ಮಿಲ್ಲರ್ 31 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ ಅಜೇಯ 64 ರನ್ ಗಳಿಸಿದರು ಮತ್ತು ವ್ಯಾನ್ ಡೆರ್ ದುಸೇನ್ 46 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 75 ರನ್ ಗಳಿಸಿದರು.

TV9 Kannada


Leave a Reply

Your email address will not be published.