IND vs SA: ಹೆಸರಿಗೆ ಮಾತ್ರ ಆಲ್​ರೌಂಡರ್; ವಿಕೆಟ್ ಬೇಕಿದ್ದಾಗಲೂ ವೆಂಕಟೇಶ್​ಗೆ ಬೌಲಿಂಗ್ ಕೊಡಲಿಲ್ಲ ರಾಹುಲ್ | India vs South Africa 1st ODI Venkatesh Iyer didnt get a single over despite 6th bowling option


IND vs SA: ಹೆಸರಿಗೆ ಮಾತ್ರ ಆಲ್​ರೌಂಡರ್; ವಿಕೆಟ್ ಬೇಕಿದ್ದಾಗಲೂ ವೆಂಕಟೇಶ್​ಗೆ ಬೌಲಿಂಗ್ ಕೊಡಲಿಲ್ಲ ರಾಹುಲ್

ವೆಂಕಟೇಶ ಅಯ್ಯರ್

ಅವರು ನಮ್ಮ ಪ್ರಮುಖ ಆಟಗಾರ, ಅವರು ನಮ್ಮ ಆರನೇ ನಂಬರ್ ಬೌಲರ್, ಆರನೇ ಬೌಲರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಏಕದಿನ ಸರಣಿ ಆರಂಭಕ್ಕೂ ಮುನ್ನ ವೆಂಕಟೇಶ್ ಅಯ್ಯರ್​ಗೆ ಕೆಎಲ್ ರಾಹುಲ್ ಹೇಳಿದ್ದ ಮಾತುಗಳಿವು, ಆದರೆ ಪಂದ್ಯ ಪರ್ಲ್​ನಲ್ಲಿ ಆರಂಭವಾದಾಗ ನಾಯಕನ ಮಾತಿಗೂ ನಡತೆಗೂ ಅಜಗಜಾಂತರ ವ್ಯತ್ಯಾಸವಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ (India vs South Africa, 1st ODI) , KL ರಾಹುಲ್ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಅವರಿಂದ ಒಂದೇ ಒಂದು ಓವರ್ ಹಾಕಿಸಲಿಲ್ಲ. ಆಲ್ ರೌಂಡರ್ ಆಗಿ ತಂಡಕ್ಕೆ ಸೇರ್ಪಡೆಗೊಂಡ ವೆಂಕಟೇಶ್​ಗೆ ಒಂದೇ ಒಂದು ಓವರ್ ನೀಡದ ಬೆನ್ನಲ್ಲೇ ಕೆಎಲ್ ರಾಹುಲ್ ತಂತ್ರಗಾರಿಕೆ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ.

ವಿಸ್ಮಯಕಾರಿ ಸಂಗತಿ ಎಂದರೆ ಟೀಂ ಇಂಡಿಯಾದ ಐವರು ಸಾಮಾನ್ಯ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಬಳಿಸಲು ವಿಫಲರಾದ್ದಗಲೂ ತಂಡದ ನಾಯಕ ಕೆಎಲ್ ರಾಹುಲ್ ಅವರಿಗೆ ವೆಂಕಟೇಶ್ ಅಯ್ಯರ್ ನೆನಪಾಗಲಿಲ್ಲ. ವೆಂಕಟೇಶ್ ಅಯ್ಯರ್ ಫೀಲ್ಡಿಂಗ್ ಮಾಡುತ್ತಲೇ ಇದ್ದರು ಆದರೆ ನಾಯಕ ಅವರಿಗೆ ಚೆಂಡನ್ನು ನೀಡಲಿಲ್ಲ. ಕೆಎಲ್ ರಾಹುಲ್ ಅವರ ಈ ತಂತ್ರದ ಬಗ್ಗೆ ಗೌತಮ್ ಗಂಭೀರ್ ಕೂಡ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಮೆಂಟರಿ ಸಂದರ್ಭದಲ್ಲಿ ಗಂಭೀರ್, ‘ವೆಂಕಟೇಶ್ ಅಯ್ಯರ್ ಬೌಲಿಂಗ್ ಮಾಡಲು ನಿಮ್ಮ ಆರನೇ ಆಯ್ಕೆಯಾಗಿದ್ದರು, ಅವರು ಆಲ್ ರೌಂಡರ್, ಆದ್ದರಿಂದ ಅವರು ಬೌಲಿಂಗ್ ಮಾಡಬೇಕಿತ್ತು’ ಎಂದು ಹೇಳಿದರು.

ವಿಜಯ್ ಹಜಾರೆಯಲ್ಲಿ ಉತ್ತಮ ಪ್ರದರ್ಶನ
ವೆಂಕಟೇಶ್ ಅಯ್ಯರ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಬ್ಯಾಟ್‌ನಿಂದ ಮಾತ್ರವಲ್ಲದೆ ಚೆಂಡಿನಿಂದಲೂ ತಮ್ಮ ಶಕ್ತಿಯನ್ನು ತೋರಿಸಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ವೆಂಕಟೇಶ್ ಅಯ್ಯರ್ 9 ವಿಕೆಟ್ ಪಡೆದರು ಮತ್ತು ಅವರ ಎಕಾನಮಿ ದರವು ಪ್ರತಿ ಓವರ್‌ಗೆ 6 ರನ್‌ಗಳಿಗಿಂತ ಕಡಿಮೆಯಿತ್ತು. ನಾಯಕ ಕೆಎಲ್ ರಾಹುಲ್ ಅವರೇ ಅವರಿಗೆ ಬೌಲಿಂಗ್ ಆಯ್ಕೆಯನ್ನು ಹೇಳಿದರು. ಆದರೆ ಅವರಿಗೆ ಚೆಂಡನ್ನು ನೀಡಲಿಲ್ಲ, ಇದು ನಿಜವಾಗಿಯೂ ಆಶ್ಚರ್ಯಕರವಾಗಿದೆ. ಭಾರತದ ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ಮೊದಲ 20 ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡುಬಂತು. ದಕ್ಷಿಣ ಆಫ್ರಿಕಾದ ಆರಂಭಿಕರಾದ ಯೆನೆಮನ್ ಮಲಾನ್ ಮತ್ತು ಡಿ ಕಾಕ್ ಅವರು ಸುಲಭವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ 2 ವಿಕೆಟ್‌ಗಳು ಪತನಗೊಂಡವು ಆದರೆ ಇದರ ನಂತರ ಎದುರಾಳಿ ನಾಯಕ ತೆಂಬಾ ಬವುಮಾ ಮತ್ತು ರಾಸಿ ವ್ಯಾನ್ ಡೆರ್ ದುಸನ್ ನಾಲ್ಕನೇ ವಿಕೆಟ್‌ಗೆ 204 ರನ್ ಸೇರಿಸಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದ್ದರಿಂದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 296 ರನ್ ಗಳಿಸಿತು.

ಬೌಲರ್‌ಗಳ ಪ್ರದರ್ಶನ ಹೇಗಿತ್ತು?
ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಎಲ್ಲಾ ಬೌಲರ್‌ಗಳು ಸರಾಸರಿಯಾಗಿ ಕಾಣುತ್ತಾರೆ. ಬುಮ್ರಾ 10 ಓವರ್‌ಗಳಲ್ಲಿ 48 ರನ್ ನೀಡಿ 2 ವಿಕೆಟ್ ಪಡೆದರು. ಆದರೆ ಶಾರ್ದೂಲ್ ಚಾಕುರ್ 10 ಓವರ್ ಗಳಲ್ಲಿ 72 ರನ್ ಬಿಟ್ಟುಕೊಟ್ಟರು. ಭುವನೇಶ್ವರ್ ಕುಮಾರ್ 64 ರನ್ ನೀಡಿದರು. ಅಶ್ವಿನ್ ಮತ್ತು ಚಹಾಲ್ ತಲಾ 53 ರನ್ ನೀಡಿದರು. ಠಾಕೂರ್ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ, ವೆಂಕಟೇಶ್ ಅಯ್ಯರ್ ಬೌಲಿಂಗ್‌ಗೆ ಇಳಿಯಲಿಲ್ಲ. ಅಂದಹಾಗೆ, ಅವರು ಬೌಲಿಂಗ್‌ಗೆ ಅನರ್ಹರಾಗಿದ್ದಾರೆ ಎಂಬುದಕ್ಕೆ ಅವರ ಗಾಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

TV9 Kannada


Leave a Reply

Your email address will not be published. Required fields are marked *