IND vs SA: 2ನೇ ಟಿ20ಯಲ್ಲಿ ಹರಿಣಗಳಿಗೆ ಸೋಲುಣಿಸಬಲ್ಲ ಟೀಂ ಇಂಡಿಯಾದ ಐವರು ಕ್ರಿಕೆಟಿಗರಿವರು..! | Here see 5 Indian cricketers who is on focus at 2nd T20 against South Africa


IND vs SA: 2ನೇ ಟಿ20ಯಲ್ಲಿ ಹರಿಣಗಳಿಗೆ ಸೋಲುಣಿಸಬಲ್ಲ ಟೀಂ ಇಂಡಿಯಾದ ಐವರು ಕ್ರಿಕೆಟಿಗರಿವರು..!

ರಿಷಭ್ ಪಂತ್

IND vs SA: ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮ್ಯಾನ್ ಇನ್ ಬ್ಲೂ ತಂಡವು ಹರಿಣಗಳ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. 1-0 ಅಂತರದಲ್ಲಿ ಹಿನ್ನಡೆ ಕಂಡರೂ ಟೀಂ ಇಂಡಿಯಾದಲ್ಲಿ ಆತ್ಮವಿಶ್ವಾಸಕ್ಕೆ ಕೊರತೆ ಇಲ್ಲ.

ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ರಿಷಬ್ ಪಂತ್ (Rishabh Pant) ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಂಬಾ ಬವುಮಾ (Temba Bavuma) ವಿರುದ್ಧ ಸೆಣಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ (T20 series) ಮೊದಲ ಪಂದ್ಯದಲ್ಲಿ ಮ್ಯಾನ್ ಇನ್ ಬ್ಲೂ ತಂಡವು ಹರಿಣಗಳ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. 1-0 ಅಂತರದಲ್ಲಿ ಹಿನ್ನಡೆ ಕಂಡರೂ ಟೀಂ ಇಂಡಿಯಾದಲ್ಲಿ ಆತ್ಮವಿಶ್ವಾಸಕ್ಕೆ ಕೊರತೆ ಇಲ್ಲ. ಇಂದು ಆಫ್ರಿಕಾಗೆ ಸೋಲಿನ ರುಚಿ ತೋರುವ ಮೂಲಕ ಟೀಂ ಇಂಡಿಯಾ ಗೆಲುವಿನ ಟ್ರ್ಯಾಕ್​ಗೆ ಮರಳಲು ಹಂಬಲಿಸುತ್ತಿದೆ.

ಟೀಂ ಇಂಡಿಯಾಗೆ ವರವಾಗಬಲ್ಲ 5 ಭಾರತೀಯ ಕ್ರಿಕೆಟಿಗರಿವರು

1) ಇಶಾನ್ ಕಿಶನ್- ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ T20 ಪಂದ್ಯದಲ್ಲು 48 ಎಸೆತಗಳಲ್ಲಿ 76 ರನ್ ಗಳಿಸಿದರು. ಇಶಾನ್ 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 7 ರನ್ ಗಳಿಸಿದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಕಿಶನ್ ಲಯ ಕಾಯ್ದುಕೊಳ್ಳಬಹುದೇ ಎಂಬ ಮೇಲೆ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

2) ರಿಷಬ್ ಪಂತ್- ಮೊದಲ ಟಿ20 ಪಂದ್ಯದಲ್ಲಿ ರಿಷಬ್ ಪಂತ್ 16 ಎಸೆತಗಳಲ್ಲಿ 29 ರನ್ ಗಳಿಸಿದರು. ಆದಾಗ್ಯೂ, ಪಂತ್ ಯಾವುದೇ ಕ್ಷಣದಲ್ಲಿ ಬೌಲರ್​ಗಳ ಮೇಲೆ ಮುರಿದುಬೀಳುವ ಆಟಗಾರ. ಹೀಗಾಗಿ ಸರಣಿ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಹಠಾತ್ ಗಾಯಗೊಂಡಾಗ ಆಯ್ಕೆದಾರರು ಪಂತ್ ಮೇಲೆ ನಂಬಿಕೆ ಇಟ್ಟರು. ಆದ್ದರಿಂದ, ಭಾನುವಾರ ರಾತ್ರಿ ಕ್ಯಾಪ್ಟನ್ ಪಂತ್ ಮೇಲೆ ಎಲ್ಲರ ಗಮನ ಇರಲಿದೆ.

TV9 Kannada


Leave a Reply

Your email address will not be published.