IND vs SA, 3rd Test, Day 2, Live Score: 2 ನೇ ದಿನದಾಟ ಆರಂಭ; ಆಫ್ರಿಕಾ 2ನೇ ವಿಕೆಟ್ ಪತನ | IND vs SA Live Score today 3rd test match day 2 scorecard Cape Town Newlands stadium In kannada India vs south africa


IND vs SA, 3rd Test, Day 2, Live Score: 2 ನೇ ದಿನದಾಟ ಆರಂಭ; ಆಫ್ರಿಕಾ 2ನೇ ವಿಕೆಟ್ ಪತನ

ಭಾರತ ಮತ್ತು ಆಫ್ರಿಕಾ ನಡುವಿನ ಅಂತಿಮ ಟೆಸ್ಟ್​ನ 2ನೇ ದಿನ ಇದು. ಮೊದಲ ದಿನದಾಟದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 223 ರನ್‌ಗಳಿಗೆ ಕುಸಿಯಿತು. ಭಾರತ ತಂಡದ ನಾಯಕತ್ವದ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 79 ರನ್ ಗಳಿಸಿದ್ದರು. ಚೇತೇಶ್ವರ ಪೂಜಾರ ಕೂಡ 43 ರನ್‌ಗಳ ಮಹತ್ವದ ಇನ್ನಿಂಗ್ಸ್‌ ಆಡಿದರು. ಉತ್ತರವಾಗಿ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. ದಕ್ಷಿಣ ಆಫ್ರಿಕಾ 5ನೇ ಓವರ್‌ನಲ್ಲಿ ನಾಯಕ ಡೀನ್ ಎಲ್ಗರ್ ವಿಕೆಟ್ ಕಳೆದುಕೊಂಡಿತು. ಎಲ್ಗರ್ 3 ರನ್ ಗಳಿಸಿ ಔಟಾದರು. ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಒಂದು ವಿಕೆಟ್‌ಗೆ 17 ರನ್ ಗಳಿಸಿತು. ಏಡೆನ್ ಮಾರ್ಕ್ರಾಮ್ ಮತ್ತು ಕೇಶವ್ ಮಹಾರಾಜ್ ಕ್ರೀಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಭಾರತದಿಂದ ಇನ್ನೂ 206 ರನ್‌ ಹಿಂದೆ ಇದೆ.

LIVE Cricket Score & Updates

TV9 Kannada


Leave a Reply

Your email address will not be published. Required fields are marked *