IND vs SA 5th T20 Match Preview: ಬೆಂಗಳೂರಿನಲ್ಲಿ ಸರಣಿ ನಿರ್ಧಾರ; ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ | India vs South Africa T20 Match Preview Ind vs SA Today Match Highlights


IND vs SA 5th T20 Match Preview: ಬೆಂಗಳೂರಿನಲ್ಲಿ ಸರಣಿ ನಿರ್ಧಾರ; ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ

ಟೀಂ ಇಂಡಿಯಾ

India vs South Africa, 5th T20 Match Preview: ಭಾನುವಾರ ನಡೆಯಲಿರುವ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತದ ಯುವ ತಂಡ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಗೆಲುವು ದಾಖಲಿಸುವ ಉದ್ದೇಶದಿಂದ ತಂಡವಾಗಿ ಉತ್ತಮ ಪ್ರದರ್ಶನ ತೋರಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa ) ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ (five-match T20 series) ಇದೀಗ ರೋಚಕ ತಿರುವನ್ನು ತಲುಪಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ. ಭಾನುವಾರ ನಡೆಯಲಿರುವ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತದ ಯುವ ತಂಡ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಗೆಲುವು ದಾಖಲಿಸುವ ಉದ್ದೇಶದಿಂದ ತಂಡವಾಗಿ ಉತ್ತಮ ಪ್ರದರ್ಶನ ತೋರಲಿದೆ. ಭಾರತ ಎಂಟು ದಿನಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಿದೆ ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರ ಸ್ಥಿರತೆಯ ತತ್ವದ ಪ್ರಕಾರ ಆಡುವ XI ನಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಲಾಗಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸೋತ ಭಾರತ ಮೂರನೇ ಪಂದ್ಯವನ್ನು 48 ರನ್‌ಗಳಿಂದ ಮತ್ತು ನಾಲ್ಕನೇ ಪಂದ್ಯವನ್ನು 82 ರನ್‌ಗಳಿಂದ ಗೆದ್ದುಕೊಂಡಿತು. ಭಾರತ ತಂಡ ಇದುವರೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಪಕ್ಷೀಯ T20I ಸರಣಿಯನ್ನು ಗೆದ್ದಿಲ್ಲ.

ತೆಂಬ ಬವುಮಾ ಆಡುವುದು ಕಷ್ಟ

ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಜಯದ ವಾಸ್ತುಶಿಲ್ಪಿ ಪಾತ್ರವನ್ನು ನಿರ್ವಹಿಸಿದರೆ, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಕೂಡ ನಿರೀಕ್ಷೆಯಂತೆ ಪ್ರದರ್ಶನ ನೀಡಿದರು. ಯುಜುವೇಂದ್ರ ಚಹಾಲ್ ಅವರು ತಮ್ಮ ಐಪಿಎಲ್ ತವರು ಮೈದಾನದಲ್ಲಿ ನಡೆಯುವ ಈ ನಿರ್ಣಾಯಕ ಪಂದ್ಯದಲ್ಲಿ ಖಂಡಿತವಾಗಿಯೂ ಏನಾದರೂ ವಿಶೇಷ ಸಾಧನೆ ಮಾಡಲು ಬಯಸುತ್ತಾರೆ. ಎರಡೂ ತಂಡಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿಳಿದಾಗ ಮೊದಲೆರಡು ಪಂದ್ಯಗಳಲ್ಲಿ ಸುಸ್ತಾಗಿ ಕಾಣುತ್ತಿರುವ ಭಾರತ ತಂಡ ಗೆಲುವಿಗೆ ಪ್ರಬಲ ಪೈಪೋಟಿ ನೀಡಲಿದೆ. ತೆಂಬಾ ಬವುಮಾ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ದಕ್ಷಿಣ ಆಫ್ರಿಕಾ ಅವರನ್ನು ಕಳೆದುಕೊಳ್ಳುತ್ತದೆ. ಕಳೆದ ಎರಡು ಪಂದ್ಯಗಳಲ್ಲಿ, ಅವರ ಬ್ಯಾಟಿಂಗ್ ಸಹ ದುರ್ಬಲವಾಗಿ ಕಂಡುಬಂದಿದೆ. ಈ ಕಾರಣದಿಂದಾಗಿ ಭಾರತದ ದಾಳಿಯು ಸಾಕಷ್ಟು ತೀಕ್ಷ್ಣವಾಗಿ ಕಾಣಲು ಪ್ರಾರಂಭಿಸಿದೆ.

TV9 Kannada


Leave a Reply

Your email address will not be published.