IND vs SA: 6 ವರ್ಷ, 56 ಟಿ20 ಪಂದ್ಯ; ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಚೊಚ್ಚಲ ಪಂದ್ಯವಿದು | 56 T20Is and 6 years later KL Rahul all set to make first T20 DEBUT against South Africa


IND vs SA: ಕೆಎಲ್ ರಾಹುಲ್ ಆಡಲಿರುವ ಅವರ ಟಿ20 ವೃತ್ತಿಜೀವನದ 57ನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವಾಗಿದೆ. ಇದಕ್ಕೂ ಮೊದಲು, ಅವರು ಕಳೆದ 6 ವರ್ಷಗಳಲ್ಲಿ 12 ತಂಡಗಳ ವಿರುದ್ಧ 56 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು, ಆದರೆ ದಕ್ಷಿಣ ಆಫ್ರಿಕಾವನ್ನು ಎದುರಿಸಲಿಲ್ಲ.

ಕೆಎಲ್ ರಾಹುಲ್ (KL Rahul) ಪದಾರ್ಪಣೆ ಮಾಡಲಿದ್ದಾರೆ. ಈ ಮಾತನ್ನು ಕೇಳಿ ಒಮ್ಮೆ ಶಾಕ್ ಆಗಬಹುದು. ಹೌದು… ಅವರ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಲ್ಲ ಬದಲಿಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ (T20 cricket against South Africa). ವಾಸ್ತವವಾಗಿ, ಜೂನ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಮೊದಲ ಟಿ20 ದಕ್ಷಿಣ ಆಫ್ರಿಕಾ ವಿರುದ್ಧದ ಈ ಮಾದರಿಯ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಅವರ ಮೊದಲ ಪಂದ್ಯವಾಗಿದೆ. ವಿಶೇಷವೆಂದರೆ ರಾಹುಲ್ ತಮ್ಮದೇ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಆಡಲಿದ್ದಾರೆ. ಅವರ T20 ವೃತ್ತಿಜೀವನದ 6 ವರ್ಷಗಳು ಕಳೆದಿರುವಾಗ ಅವರಿಗೆ ಈ ಅವಕಾಶ ಬಂದಿದೆ. ಆದರೆ ಈ ಪಂದ್ಯಕ್ಕೂ ಮೊದಲು ಅವರು 56 T20 ಪಂದ್ಯಗಳನ್ನು ಸಹ ಆಡಿದ್ದಾರೆ.

ಅದೇನೆಂದರೆ, ಕೆಎಲ್ ರಾಹುಲ್ ಆಡಲಿರುವ ಅವರ ಟಿ20 ವೃತ್ತಿಜೀವನದ 57ನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವಾಗಿದೆ. ಇದಕ್ಕೂ ಮೊದಲು, ಅವರು ಕಳೆದ 6 ವರ್ಷಗಳಲ್ಲಿ 12 ತಂಡಗಳ ವಿರುದ್ಧ 56 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು, ಆದರೆ ದಕ್ಷಿಣ ಆಫ್ರಿಕಾವನ್ನು ಎದುರಿಸಲಿಲ್ಲ.

TV9 Kannada


Leave a Reply

Your email address will not be published.