IND vs SL: ಶ್ರೀಲಂಕಾದ ಪತ್ರಿಕೆ ದಿ ಸಂಡೇ ಟೈಮ್ಸ್ ವರದಿಯ ಪ್ರಕಾರ, ಭಾರತವು ಶ್ರೀಲಂಕಾದೊಂದಿಗೆ ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಈ ಟಿ20 ಸರಣಿ ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ಸಮಯ ನಿಗದಿಯಾಗಿಲ್ಲ.
ಭಾರತೀಯ ಆಟಗಾರರು ಸದ್ಯ ಐಪಿಎಲ್ (IPL)ನಲ್ಲಿ ಬ್ಯುಸಿಯಾಗಿದ್ದು, ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದ್ದಾರೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಇಂಗ್ಲೆಂಡ್ನೊಂದಿಗಿನ ಭಾರತದ ಸರಣಿಯು ನಿಶ್ಚಿತವಾಗಿದೆ. ಆದರೆ ಈಗ ಅದಕ್ಕೆ ಹೊಸ ಸರಣಿಯೊಂದು ಸೇರ್ಪಡೆಗೊಳ್ಳಲಿದೆ. ಇದು ಶ್ರೀಲಂಕಾ ವಿರುದ್ಧದ ಸರಣಿ ಆಗಿರಲಿದೆ. ಶ್ರೀಲಂಕಾದ ಪತ್ರಿಕೆ ದಿ ಸಂಡೇ ಟೈಮ್ಸ್ ವರದಿಯ ಪ್ರಕಾರ, ಭಾರತವು ಶ್ರೀಲಂಕಾದೊಂದಿಗೆ (India vs Sri lanka) ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಈ ಟಿ20 ಸರಣಿ ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ಸಮಯ ನಿಗದಿಯಾಗಿಲ್ಲ, ಆದರೆ ಆಗಸ್ಟ್-ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾ ಕಪ್ ಮೊದಲು ಅಥವಾ ನಂತರ ಈ ಸರಣಿಯನ್ನು ಆಯೋಜಿಸಬಹುದು. ಪತ್ರಿಕೆ ತನ್ನ ವರದಿಯಲ್ಲಿ, “ಏಷ್ಯಾ ಕಪ್ಗೆ ಮೊದಲು ಅಥವಾ ನಂತರ ಶ್ರೀಲಂಕಾದೊಂದಿಗೆ ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲು ಭಾರತ ಒಪ್ಪಿಕೊಂಡಿದೆ, ಇದರಿಂದಾಗಿ ಕುಸಿತ ಕಂಡಿರುವ ಶ್ರೀಲಂಕಾ ಆರ್ಥಿಕವಾಗಿ ಲಾಭ ಪಡೆಯುತ್ತದೆ ಎಂದು ಬರೆದುಕೊಂಡಿದೆ.”
ಏಷ್ಯಾ ಕಪ್ ಯುಎಇಯಲ್ಲಿ ನಡೆಯಲಿದೆ
ಶ್ರೀಲಂಕಾ ಏಷ್ಯಾ ಕಪ್ ಅನ್ನು ಆಯೋಜಿಸಲಿದೆ, ಆದರೆ ಈ ದೇಶವು ಪ್ರಸ್ತುತ ಅಂತರ್ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಹೀಗಿರುವಾಗ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯುವ ನಿರೀಕ್ಷೆ ಗರಿಗೆದರಿದೆ. ಪತ್ರಿಕೆಯ ವರದಿಯಲ್ಲಿ ಮೂಲಗಳು ನೀಡಿರುವ ಮಾಹಿತಿಯನ್ನು ಪರಿಗಣಿಸಿದರೆ, ಏಷ್ಯಾಕಪ್ ಅನ್ನು ಯುಎಇಯಲ್ಲೂ ಆಯೋಜಿಸಬಹುದು. ಏಷ್ಯಾ ಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಈ ಏಷ್ಯಾಕಪ್ ಅನ್ನು ಶ್ರೀಲಂಕಾ ಆಯೋಜಿಸಿತ್ತು. ಈ ಏಷ್ಯಾಕಪ್ 2020 ರಲ್ಲಿ ನಡೆಯಬೇಕಿತ್ತು ಆದರೆ ಕೋವಿಡ್ನಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ. ಆದರೆ ಶ್ರೀಲಂಕಾದ ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಇದು ಸಾಧ್ಯವಾಗುತ್ತಿಲ್ಲ.