IND vs WI: ಇತಿಹಾಸ ಸೃಷ್ಟಿಸಿದ ಹಾರ್ದಿಕ್ ಪಾಂಡ್ಯ; ಟಿ20 ಮಾದರಿಯಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ | Team India All rounder hardik pandya becomes the first indian to score 500 runs with 50 wickets in t20is


IND vs WI: ಹಾರ್ದಿಕ್ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 50 ವಿಕೆಟ್ ಪೂರೈಸಿ 806 ರನ್ ಗಳಿಸಿದ್ದಾರೆ. ಜೊತೆಗೆ ಟಿ20ಯಲ್ಲಿ ಭಾರತದ ಪರ 50 ವಿಕೆಟ್ ಹಾಗೂ 500ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಹಾರ್ದಿಕ್.

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹಾರ್ದಿಕ್ 50 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20 ಯಲ್ಲಿ, ಹಾರ್ದಿಕ್ ಪಾಂಡ್ಯ ಅವರು ಬ್ರಾಂಡನ್ ಕಿಂಗ್ ಅವರನ್ನು ಔಟ್ ಮಾಡಿದ ತಕ್ಷಣ T20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 50-ವಿಕೆಟ್​ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಹಾರ್ದಿಕ್ ಟಿ20ಯಲ್ಲಿ 50 ವಿಕೆಟ್ ಪೂರೈಸಿದ ಭಾರತದ ಆರನೇ ಬೌಲರ್ ಎನಿಸಿಕೊಂಡರು. ಹಾರ್ದಿಕ್‌ಗಿಂತ ಮೊದಲು, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ( Yuzvendra Chahal, Bhuvneshwar Kumar, Jasprit Bumrah and Ravindra Jadeja) ಭಾರತದ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಟೀ20ಯಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಚಹಲ್ ನಿರ್ಮಿಸಿದ್ದಾರೆ. ಚಹಲ್ ಒಟ್ಟು 79 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಹಾರ್ದಿಕ್ ವೃತ್ತಿಜೀವನ

ಹಾರ್ದಿಕ್ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 50 ವಿಕೆಟ್ ಪೂರೈಸಿ 806 ರನ್ ಗಳಿಸಿದ್ದಾರೆ. ಜೊತೆಗೆ ಟಿ20ಯಲ್ಲಿ ಭಾರತದ ಪರ 50 ವಿಕೆಟ್ ಹಾಗೂ 500ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಹಾರ್ದಿಕ್.

ಶಾಹಿದ್ ಅಫ್ರಿದಿ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಭಾರತೀಯ ಆಲ್‌ರೌಂಡರ್

ಹಾರ್ದಿಕ್ ಪಾಂಡ್ಯ ಅವರು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಮತ್ತು 500+ ರನ್ ಗಳಿಸಿದ ವಿಶ್ವದ 9 ನೇ ಕ್ರಿಕೆಟಿಗನಾಗುವ ಮೂಲಕ ಅದ್ಭುತ ದಾಖಲೆ ಮಾಡಿದರು. ಹಾರ್ದಿಕ್‌ಗಿಂತ ಮೊದಲು ಶಕೀಬ್ ಅಲ್ ಹಸನ್, ಶಾಹಿದ್ ಅಫ್ರಿದಿ, ಡ್ವೇನ್ ಬ್ರಾವೋ, ಜಾರ್ಜ್ ಡಾಕ್ರೆಲ್, ಮೊಹಮ್ಮದ್ ನಬಿ, ಮೊಹಮ್ಮದ್ ಹಫೀಜ್, ಕೆವಿನ್ ಒಬ್ರೇನ್ ಮತ್ತು ತಿಸಾರಾ ಪೆರೇರಾ ಅದ್ಭುತ ಡಬಲ್ ಬ್ಲಾಸ್ಟ್‌ಗಳ ಪಟ್ಟಿಯಲ್ಲಿದ್ದಾರೆ.

ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

TV9 Kannada


Leave a Reply

Your email address will not be published. Required fields are marked *