IND vs WI: ಮೂರನೇ ಏಕದಿನ ಪಂದ್ಯಕ್ಕೆ 4 ಬದಲಾವಣೆಗಳೊಂದಿಗೆ ಎಂಟ್ರಿ ಕೊಡಲಿದೆ ಟೀಂ ಇಂಡಿಯಾ! | India vs West Indies probable playing 11 Shikhar Dhawan Kuldeep Yadav Avesh Khan Deepak Chahar


IND vs WI: ಮೂರನೇ ಏಕದಿನ ಪಂದ್ಯಕ್ಕೆ 4 ಬದಲಾವಣೆಗಳೊಂದಿಗೆ ಎಂಟ್ರಿ ಕೊಡಲಿದೆ ಟೀಂ ಇಂಡಿಯಾ!

ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿಯಲ್ಲಿ (India vs West Indies, 3rd ODI) ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದರೆ, ಎರಡನೇ ಪಂದ್ಯವನ್ನು 44 ರನ್‌ಗಳಿಂದ ಗೆದ್ದುಕೊಂಡಿತ್ತು. ಇದೀಗ ಸರಣಿಯ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದ್ದು, ಇದರಲ್ಲಿ ಭಾರತ ತಂಡ ಬದಲಾವಣೆಗಳೊಂದಿಗೆ ಕಣಕ್ಕಿಳಿಯಬಹುದು. ಟೀಂ ಇಂಡಿಯಾದಲ್ಲಿ ಕನಿಷ್ಠ ನಾಲ್ಕು ಬದಲಾವಣೆಗಳಾಗಬಹುದು ಎಂದು ಊಹಿಸಲಾಗಿದೆ. ಎರಡನೇ ಏಕದಿನ ಪಂದ್ಯದ ಗೆಲುವಿನ ಬಳಿಕ ಸ್ವತಃ ನಾಯಕ ರೋಹಿತ್ ಶರ್ಮಾ (Rohit Sharma) ಈ ಬಗ್ಗೆ ಸೂಚನೆ ನೀಡಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ (Shikhar Dhawan) ಅವರನ್ನು ಆಡಿಸಲಿದ್ದೇವೆ ಎಂದು ಪಂದ್ಯದ ನಂತರ ರೋಹಿತ್ ಶರ್ಮಾ ಹೇಳಿದರು. ODI ಸರಣಿಯ ಮೊದಲು ಧವನ್ ಕೋವಿಡ್ ಪಾಸಿಟಿವ್ ಆದ ಕಾರಣದಿಂದಾಗಿ ಅವರು ಮೊದಲ ಎರಡು ODIಗಳನ್ನು ಆಡಲು ಸಾಧ್ಯವಾಗಲಿಲ್ಲ. ಇವರಲ್ಲದೆ ರಿತುರಾಜ್ ಗಾಯಕ್ವಾಡ್ ಮತ್ತು ನವದೀಪ್ ಸೈನಿ ಅವರಿಗೂ ಕೋವಿಡ್ ಸೋಂಕು ತಗುಲಿತ್ತು. ಆದರೂ ಈಗ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಆಟ ಖಚಿತವಾಗಿದ್ದು, ಮತ್ತೊಮ್ಮೆ ಬದಲಾದ ಆರಂಭಿಕ ಜೋಡಿಯೊಂದಿಗೆ ಭಾರತ ಕಣಕ್ಕಿಳಿಯಲಿದೆ. ಎರಡನೇ ODIನಲ್ಲಿ, ಪಂತ್ ಮತ್ತು ರೋಹಿತ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈಗ ಧವನ್ ಬಂದರೆ, ಅವರು ಮತ್ತು ರೋಹಿತ್ ಓಪನಿಂಗ್‌ಗೆ ಇಳಿಯುತ್ತಾರೆ. ಪಂತ್ ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಿಂದ ದೀಪಕ್ ಹೂಡಾ ಅವರನ್ನು ಹೊರಗಿಡಬಹುದು. ಎರಡನೇ ಏಕದಿನ ಪಂದ್ಯದಲ್ಲಿ ಹೂಡಾ 29 ರನ್‌ಗಳ ಮಹತ್ವದ ಇನ್ನಿಂಗ್ಸ್‌ ಆಡಿದರು. ಇದರೊಂದಿಗೆ ಒಂದು ವಿಕೆಟ್ ಕೂಡ ಪಡೆದರು.

ಬೌಲಿಂಗ್ ವಿಭಾಗದಲ್ಲಿ 3 ಬದಲಾವಣೆಯಾಗಲಿದೆಯೇ?

ಮೂರನೇ ODIನಲ್ಲಿ, ಬೌಲಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಬಹುದು. ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಹಾರ್ ಅವಕಾಶ ಪಡೆಯಬಹುದು. ಅವರು ಹೊಸ ಬಾಲ್ ಬೌಲರ್ ಆಗಿದ್ದು ಅವರ ಬ್ಯಾಟಿಂಗ್ ಕೂಡ ಅತ್ಯುತ್ತಮವಾಗಿದೆ. ಇದಲ್ಲದೇ ಮೊಹಮ್ಮದ್ ಸಿರಾಜ್​ಗೆ ವಿಶ್ರಾಂತಿ ನೀಡುವ ಮೂಲಕ ಅವೇಶ್ ಖಾನ್ ಪಾದಾರ್ಪಣೆ ಮಾಡುವ ಅವಕಾಶ ಪಡೆಯಬಹುದು. ಈ ಬಲಗೈ ವೇಗದ ಬೌಲರ್ ತನ್ನ ವೇಗ ಮತ್ತು ಬೌನ್ಸರ್‌ಗೆ ಹೆಸರುವಾಸಿಯಾಗಿದ್ದಾನೆ. ಇದಲ್ಲದೇ ಸ್ಪಿನ್ ವಿಭಾಗದಲ್ಲಿ ಯುಜುವೇಂದ್ರ ಚಹಲ್ ಬದಲಿಗೆ ಕುಲದೀಪ್ ಯಾದವ್ ಅವಕಾಶ ಪಡೆಯಬಹುದು. ಕುಲದೀಪ್ ಯಾದವ್ ಗಾಯದ ನಂತರ ODI ತಂಡಕ್ಕೆ ಮರಳಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI

ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಅವೇಶ್ ಖಾನ್, ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ

TV9 Kannada


Leave a Reply

Your email address will not be published. Required fields are marked *