IND vs WI 3rd ODI: ಸರಣಿ ಕ್ಲೀನ್​ಸ್ವೀಪ್: ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಮಾತು ಕೇಳಿ | Rohit Sharma praise on Prasidh Krishna at the post match presentation ceremony after IND vs WI 3rd ODI


IND vs WI 3rd ODI: ಸರಣಿ ಕ್ಲೀನ್​ಸ್ವೀಪ್: ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಮಾತು ಕೇಳಿ

Rohit Sharma post match presentation IND vs WI

ನಿರೀಕ್ಷೆಯಂತೆಯೇ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ 3-0 ಅಂತರಗಳಿಂದ ಕ್ಲೀನ್‌ಸ್ವೀಪ್ ಸಾಧನೆ ಮಾಡಿದೆ. ಶುಕ್ರವಾರ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಮತ್ತು ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ (India) 50 ಓವರ್​​ಗಳಲ್ಲಿ 265 ರನ್​​ಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಕೇವಲ 169 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವೈಟ್ ವಾಷ್ ಮುಖಭಂಗ ಅನುಭವಿಸಿತು. ಈ ಸರಣಿ ಗೆಲುವಿನೊಂದಿಗೆ ರೋಹಿತ್ ಶರ್ಮಾ ನಾಯಕನಾಗಿ ವಿಶೇಷ ದಾಖಲೆಯನ್ನೂ ಬರೆದರು. ಶ್ರೇಯಸ್ ಅಯ್ಯರ್ (Shreyas Iyer) 80 ರನ್ ಸಿಡಿಸಿ ಮತ್ತು ರಿಷಭ್ ಪಂತ್ 56 ರನ್ ಚಚ್ಚಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಲಿಂಗ್​ನಲ್ಲೂ ಸಂಘಟಿತ ಪ್ರದರ್ಶನ ತೋರಿತು. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.

“ಖಂಡಿತವಾಗಿಯೂ ಈ ನಾಯಕತ್ವದ ದಾಖಲೆ ಬಗ್ಗೆ ನಾನು ನೋಡುವುದಿಲ್ಲ. ಈ ಸರಣಿಯಿಂದ ಅನೇಕ ವಿಚಾರಗಳನ್ನು ನಾವು ಕಲಿತಿದ್ದೇವೆ. ಸಾಕಷ್ಟು ವಿಷಯಗಳನ್ನು ಈ ಸರಣಿಯಿಂದ ನಾವು ಪಡೆದುಕೊಂಡಿದ್ದೇವೆ. ಒಬ್ಬ ಆಟಗಾರನಾಗಿ, ಒಬ್ಬ ವ್ಯಕ್ತಿಯಾಗಿ ನಮ್ಮನ್ನು ಎಲ್ಲರೂ ನೋಡುತ್ತಿರುತ್ತಾರೆ. ನಮಗೆ ಯಾವ ವಿಚಾರದ ಬಗ್ಗೆ ಗಮನ ಕೊಡಬೇಕು ಎಂಬ ಅರಿವಿದೆ. ಹೊರಗಿನವರ ಮಾತು ನಮ್ಮ ಡ್ರೆಸ್ಸಿಂಗ್ ರೂಮ್​ನಲ್ಲಿ ಯಾವುದೇ ತೊಂದರೆ ಉಂಟುಮಾಡುವುದಿಲ್ಲ,” ಎಂದು ಹೇಳಿದ್ದಾರೆ.

“ಪ್ರಸಿದ್ಧ್ ಕೃಷ್ಣ ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನ ನಾನು ಈವರೆಗೆ ನೋಡಿರಲಿಲ್ಲ. ಈರೀತಿಯ ಬೌಲರ್ ಇದ್ದರೆ ಒಳ್ಳೆಯದು. ಮೊಹಮ್ಮದ್ ಸಿರಾಜ್ ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ. ಶಾರ್ದೂಲ್ ಮತ್ತು ದೀಪಕ್ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕುಲ್ದೀಪ್ ಮತ್ತು ಚಹಲ್ ನಮ್ಮ ಪ್ರಮುಖ ಅಸ್ತ್ರ. ಇವರು ನಿಧಾನವಾಗಿ ಕಮ್​ಬ್ಯಾಕ್ ಮಾಡಿಸುವುದು ಮುಖ್ಯ. ಆದಷ್ಟು ಬೇಗ ಈ ಜೋಡಿ ಮತ್ತೆ ಕಮಾಲ್ ಮಾಡುತ್ತದೆ.”

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬಗ್ಗೆ ಮಾತನಾಡಿದ ರೋಹಿತ್, “ನಾವು 40 ರನ್​ಗೆ 3 ವಿಕೆಟ್ ಕಳೆದುಕೊಂಡೆವು. ಈ ಸಂದರ್ಭ ನಮ್ಮ ತಂಡ ಮುಂದೇ ಸಾಗುವುದು ದೊಡ್ಡ ಚಾಲೆಂಜ್ ಆಗಿತ್ತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಇಂದು ಅತ್ಯುತ್ತಮ ಪ್ರದರ್ಶನ ನೀಡಿದರು.” ಎಂದು ಹೇಳಿದ್ದಾರೆ.

ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಪ್ರಸಿದ್ಧ್ ಕೃಷ್ಣ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಈ ಸಂದರ್ಭ ಮಾತನಾಡಿದ ಅವರು, “ನಮ್ಮ ತಂಡದಲ್ಲಿರುವ ಎಲ್ಲಾ ಆಟಗಾರರು ಅತ್ಯುತ್ತಮವಾಗಿದ್ದಾರೆ. ಇಂಥಾ ಆಟಗಾರರ ಗುಂಪಿನಲ್ಲಿದ್ದಾಗ ನಾವೆಲ್ಲರೂ ಒಬ್ಬರಿಗೊಬ್ಬರು ಕಲಿಯುತ್ತೇವೆ. ಆ ಮೂಲಕ ಗುಂಪಿನಲ್ಲಿ ಯಾರಾದರೂ ಒಬ್ಬರೂ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ. ವೆಸ್ಟ್‌ ಇಂಡೀಸ್‌ ವಿರುದ್ಧ ತಂಡದ ಪ್ರಯತ್ನ ಅತ್ಯುತ್ತಮವಾಗಿದೆ,” ಎಂದು ಹೇಳಿದರು.

IPL 2022 Auction: 10 ಫ್ರಾಂಚೈಸಿ, 590 ಆಟಗಾರರು: ಇಂದಿನಿಂದ ಬಹುನಿರೀಕ್ಷಿತ ಐಪಿಎಲ್ 2022 ಮೆಗಾ ಹರಾಜು

TV9 Kannada


Leave a Reply

Your email address will not be published.