IND vs ZIM: ಗಿಲ್ ವಿಕೆಟ್​ಗಾಗಿ ಡಿಆರ್​ಎಸ್ ತೆಗೆದುಕೊಂಡ ಬಿಂಬಾಬ್ವೆ; ಆದರೆ ಔಟಾಗಿದ್ದು ಮಾತ್ರ ಇಶಾನ್ ಕಿಶನ್! | IND vs ZIM Appeal against Shubman Gill Ishan Kishan is out know why


IND vs ZIM: 43ನೇ ಓವರ್‌ನಲ್ಲಿ, ಬ್ರಾಡ್ ಇವಾನ್ಸ್ ಅವರ ಮೊದಲ ಎಸೆತದಲ್ಲಿ ಶುಭ್​ಮನ್ ಗಿಲ್ ವಿರುದ್ಧ ಎಲ್‌ಬಿಡಬ್ಲ್ಯೂ ಅಪೀಲ್ ಆಗಿತ್ತು. ಈ ವೇಳೆ ಇಶಾನ್ ಕಿಶನ್ ರನ್ ಗಳಿಸಲು ಯತ್ನಿಸಿದರೂ ಗಿಲ್ ನಿರಾಕರಿಸಿದರು.

ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್ (Shubman Gill) ಭರ್ಜರಿ ಶತಕ ಬಾರಿಸಿದರೆ, ಇಶಾನ್ ಕಿಶನ್ (Ishan Kishan) ಕೂಡ ಅರ್ಧಶತಕ ದಾಖಲಿಸಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೂರನೇ ವಿಕೆಟ್‌ಗೆ 127 ಎಸೆತಗಳಲ್ಲಿ 140 ರನ್‌ಗಳನ್ನು ಹಂಚಿಕೊಂಡರು. ಆದಾಗ್ಯೂ, ಈ ಪಾಲುದಾರಿಕೆಯು ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಕೊನೆಗೊಂಡಿತು. ಇಶಾನ್ ಕಿಶನ್ ರನ್ ಔಟ್ ಆದ ಕಾರಣ ಈ ಜೊತೆಯಾಟ ಮುರಿದುಬಿತ್ತು. ಆದರೆ ಇಶಾನ್ ರನ್ ಔಟ್ ಆದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ವಾಸ್ತವವಾಗಿ ಜಿಂಬಾಬ್ವೆ ಆಟಗಾರರು ಶುಭ್​ಮನ್ ಗಿಲ್ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದರು. ಆದರೆ ಮೇಲ್ಮನವಿಯಲ್ಲಿ ಕಂಡುಬಂದಿದ್ದು ಮಾತ್ರ ಇಶಾನ್ ಕಿಶನ್ ರನೌಟ್ ಆಗಿರುವುದು.

ಗಿಲ್ ವಿರುದ್ಧ ಮೇಲ್ಮನವಿ, ಇಶಾನ್ ವಿಕೆಟ್ ಪತನ
43ನೇ ಓವರ್‌ನಲ್ಲಿ, ಬ್ರಾಡ್ ಇವಾನ್ಸ್ ಅವರ ಮೊದಲ ಎಸೆತದಲ್ಲಿ ಶುಭ್​ಮನ್ ಗಿಲ್ ವಿರುದ್ಧ ಎಲ್‌ಬಿಡಬ್ಲ್ಯೂ ಅಪೀಲ್ ಆಗಿತ್ತು. ಈ ವೇಳೆ ಇಶಾನ್ ಕಿಶನ್ ರನ್ ಗಳಿಸಲು ಯತ್ನಿಸಿದರೂ ಗಿಲ್ ನಿರಾಕರಿಸಿದರು. ನಂತರ ಮುನ್ಯೊಂಗಾ ಸೊಗಸಾದ ಥ್ರೋ ಮಾಡಿ ಇಶಾನ್ ಕಿಶನ್ ಅವರನ್ನು ನಾನ್ ಸ್ಟ್ರೈಕರ್ ಕೊನೆಯಲ್ಲಿ ರನೌಟ್ ಮಾಡಿದರು. ಇದರ ನಂತರ ಜಿಂಬಾಬ್ವೆ
ಗಿಲ್ ವಿರುದ್ಧ ಡಿಆರ್​ಎಸ್ ತೆಗೆದುಕೊಂಡಿತು. ಇದರಲ್ಲಿ ಗಿಲ್ ಔಟಾಗದ್ದಿದ್ದರು, ಇಶಾನ್ ಕಿಶನ್ ರನ್ ಔಟ್ ಆಗಿರುವುದು ಸ್ಪಷ್ಟವಾಗಿತ್ತು.

ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಆದರೆ ರನೌಟ್ ಆಗುವುದಕ್ಕೂ ಮುನ್ನ ಇಶಾನ್ ಕಿಶನ್ ಅರ್ಧ ಶತಕ ಗಳಿಸಿದ್ದರು. ಹರಾರೆಯ ಕಠಿಣ ಪಿಚ್‌ನಲ್ಲಿ ಇಶಾನ್ ಕಿಶನ್ ನಿಧಾನವಾಗಿ ಪ್ರಾರಂಭಿಸಿ, ನಂತರ ವೇಗವನ್ನು ಹೆಚ್ಚಿಸಿದರು. ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡಂತೆ ಅರ್ಧಶತಕ ಪೂರೈಸಿದರು.

ಶತಕ ಬಾರಿಸಿದ ಗಿಲ್

TV9 Kannada


Leave a Reply

Your email address will not be published.