ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಗಂಡಿಸಲಾಯಿತು. ಭಾರತದಲ್ಲಿ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಪಾಕಿಸ್ತಾನ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ.

Independence Day( ಸಂಗ್ರಹ ಚಿತ್ರ)
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಭಾರತವು ಆಗಸ್ಟ್ 15ರಂದು ತನ್ನ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಆಚರಿಸಲು ಸಿದ್ಧವಾಗಿದೆ. ಈ ಮಹತ್ವದ ದಿನದ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಹಲವಾರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಈ ದಿನವು ತುಂಬಾ ಮಹತ್ವದ್ದಾಗಿರುವುದಕ್ಕೆ ಕಾರಣವೆಂದರೆ 1947 ರಲ್ಲಿ ಇದೇ ದಿನಾಂಕದಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆಯಿತು. ದೇಶದ ಒಳಿತಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಿಸ್ವಾರ್ಥ ತ್ಯಾಗದ ಪ್ರತೀಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ನಮಗೆ ದೊರಕಿರುವುದು ಖುಷಿಯ ವಿಚಾರವಾದರು ದೇಶದ ಇಬ್ಬಾಗವೂ ದುಃಖವನ್ನು ತರಿಸಿತು. ದುರದೃಷ್ಟವಶಾತ್ ಬ್ರಿಟಿಷ್ ಭಾರತೀಯ ಉಪಖಂಡವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಗಂಡಿಸಲಾಯಿತು. ಭಾರತದಲ್ಲಿ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಪಾಕಿಸ್ತಾನ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ.