India Probable Playing XI: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ಓರ್ವ ಆಟಗಾರ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ | India Probable Playing XI vs Scotland Its another must win Game for Virat Kohli Team in T20 World Cup


India Probable Playing XI: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ಓರ್ವ ಆಟಗಾರ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

India Playing XI vs Scotland

ಟಿ20 ವಿಶ್ವಕಪ್​ನಲ್ಲಿ (T20 World Cup) ಉಳಿಯಲು ಹರಸಾಹಸ ಪಡುತ್ತಿರುವ ಭಾರತ ಕ್ರಿಕೆಟ್ ತಂಡ ಇಂದು ಸ್ಕಾಟ್ಲೆಂಡ್ (India vs Scotland) ವಿರುದ್ಧ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದ ರೀತಿಯಲ್ಲೇ ವಿರಾಟ್ ಕೊಹ್ಲಿ (Virat Kohli) ಪಡೆಗೆ ಇಂದು ಮತ್ತೊಂದು ದೊಡ್ಡ ಮೊತ್ತದ ಗೆಲುವಿನ ಅವಶ್ಯಕತೆಯಿದೆ. ಟೀಮ್ ಇಂಡಿಯಾ (Team India) ಸೆಮಿಫೈನಲ್ ಏರಬೇಕಾದರೆ ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಸಾಕಾಗುವುದಿಲ್ಲ. ಜೊತೆಗೆ ಉತ್ತಮ ರನ್‌ರೇಟ್ ಕೂಡ ಖಾತ್ರಿಪಡಿಸಬೇಕಿದೆ. ಇದರ ಜೊತೆಗೆ ಅಫ್ಘಾನ್ ತಂಡ ತನ್ನ ಕೊನೇ ರೌಂಡ್‌ ರಾಬಿನ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಗೆದ್ದರೆ ಭಾರತ ತಂಡಕ್ಕೆ ಸೆಮಿಫೈನಲ್‌ ತಲುಪುವ ಅವಕಾಶದ ಬಾಗಿಲು ತೆರೆದುಕೊಳ್ಳಲಿದೆ. ಹೀಗಾಗಿ ಟೀಮ್ ಇಂಡಿಯಾ ಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿಯಲಿದೆ. ಇದಕ್ಕಾಗಿ ಇಂದಿನ ಪಂದ್ಯಕ್ಕೆ ಒಂದು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. (Team India Probable Playing X)

ಕಳೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಆಲ್ರೌಂಡರ್ ಪ್ರದರ್ಶನ ನೀಡಿತ್ತು. ಹೀಗಾಗಿ ಭಾರತಕ್ಕೆ ಸುಲಭ ಜಯ ದಕ್ಕಿತು. ಆದರೂ ಕೊಹ್ಲಿ ಪಡೆಯ ಬೌಲಿಂಗ್ ವಿಭಾಗ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ. ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಬಂದ ಮೇಲೆ ಬಲಿಷ್ಠವಾಗಿದೆ. ಆದರೆ, ವೇಗಿಗಳ ಪೈಕಿ ಜಸ್​ಪ್ರೀತ್ ಬುಮ್ರಾ ಬಿಟ್ಟರೆ ಮತ್ಯಾರು ಎದುರಾಳಿಗೆ ಕಂಠಿಕವಾಗಿ ಪರಿಣಮಿಸುತ್ತಿಲ್ಲ.

ಹೌದು, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ದುಬಾರಿಯಾಗುತ್ತಿದ್ದಾರೆ. ಭುವನೇಶ್ವರ್ ಕುಮಾರ್ ಜಾಗದಲ್ಲಿ ಸ್ಥಾನ ಪಡೆದುಕೊಂಡ ಠಾಕೂರ್ ಬೌಲಿಂಗ್​ನಲ್ಲಿ ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಹೀಗಾಗಿ ಭುವಿ ಮತ್ತೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವ ಸಂಭವವಿದೆ. ಅಥವಾ ಮತ್ತೊಬ್ಬ ಸ್ಪಿನ್ನರ್​ ವರುಣ್ ಚಕ್ರವರ್ತಿಯನ್ನು ಆಡಿಸಿದರೂ ಅಚ್ಚರಿ ಪಡಬೇಕಿಲ್ಲ.

ಉಳಿದಂತೆ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್ ಫಾರ್ಮ್​ಗೆ ಬಂದಿದ್ದು, ಕಳೆದ ಪಂದ್ಯದಲ್ಲಿ ಆಡಿದ ರೀತಿಯಲ್ಲೇ ಬ್ಯಾಟ್ ಬೀಸಬೇಕಿದೆ. ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಫಿನಿಶಿಂಗ್ ಜವಾಬ್ದಾರಿ ಕಳೆದ ಪಂದ್ಯದಲ್ಲಿ ಅದ್ಭುತವಾಗಿ ನಿರ್ವಹಿಸಿದ್ದರು. ರವೀಂದ್ರ ಜಡೇಜಾ ಕೂಡ ತಂಡಕ್ಕೆ ನೆರವಾಗುತ್ತಿದ್ದಾರೆ.

ಪಿಚ್ ಹೇಗಿದೆ?:

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡ ಸೂಪರ್‌ 12 ಹಂತದ ಮೊದಲ ಎರಡೂ ಪಂದ್ಯಗಳನ್ನು ಸೋತಿದೆ. ಟಾಸ್‌ ಗೆದ್ದು ರನ್‌ ಚೇಸ್‌ ಆಯ್ಕೆ ಮಾಡುವ ತಂಡಕ್ಕೆ ಇಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗಾಗಿ ರನ್‌ ಚೇಸ್‌ ಆಯ್ಕೆ ಟಾಸ್‌ ಗೆದ್ದ ನಾಯಕನ ತಲೆಯಲ್ಲಿರುತ್ತದೆ. ಮೊದಲ ಮೂರೂ ಪಂದ್ಯಗಳಲ್ಲಿ ಟಾಸ್‌ ಸೋತಿರುವ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ಇಲ್ಲಿ ಅದೃಷ್ಟ ಒಲಿಯುತ್ತದೆಯೇ ಕಾದು ನೋಡಬೇಕು. ಕಳೆದ 14 ಟಾಸ್‌ಗಳಲ್ಲಿ ಕೊಹ್ಲಿ 13 ಟಾಸ್‌ ಸೋತಿದ್ದಾರೆ ಎಂಬುದು ಟೀಮ್ ಇಂಡಿಯಾಕ್ಕೆ ಮೈನಸ್ ಪಾಯಿಂಟ್ ಆಗಿದೆ.

ಪಂದ್ಯ ಆರಂಭ: ಸಂಜೆ 7:30ಕ್ಕೆ

India vs Scotland: ಸ್ಕಾಟ್ಲೆಂಡ್ ವಿರುದ್ಧ ಮತ್ತೊಂದು ಅಗ್ನಿ ಪರೀಕ್ಷೆ: ಕೊಹ್ಲಿ ಬರ್ತ್​ ಡೇಗೆ ಗೆಲುವಿನ ಗಿಫ್ಟ್ ನೀಡುತ್ತಾ ಭಾರತ?

Happy Birthday Virat Kohli: ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ: 33ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ ವಿರಾಟ್​

(India Probable Playing XI vs Scotland Its another must-win Game for Virat Kohli Team in T20 World Cup)

TV9 Kannada


Leave a Reply

Your email address will not be published. Required fields are marked *