India requiring 100 more runs to win the Test whereas Bangladesh need 6 wickets to level the series – IND vs BAN 2nd Test: ರೋಚಕ ಘಟ್ಟದತ್ತ ಭಾರತ-ಬಾಂಗ್ಲಾ ದ್ವಿತೀಯ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಬೇಕು 100 ರನ್ಸ್


India vs Bangladesh 2nd Test: ಬಾಂಗ್ಲಾ ನೀಡಿರುವ 145 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 23 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದ್ದು ಗೆಲುವಿಗೆ 100 ರನ್​ಗಳ ಅವಶ್ಯಕತೆಯಿದೆ.

ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಬಾಂಗ್ಲಾ ನೀಡಿರುವ 145 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿರುವ ಟೀಮ್ ಇಂಡಿಯಾ (Team India) 50 ರನ್​ಗೂ ಮೊದಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 23 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದ್ದು ಗೆಲುವಿಗೆ 100 ರನ್​ಗಳ ಅವಶ್ಯಕತೆಯಿದೆ. ಅಕ್ಷರ್ ಪಟೇಲ್ (Axar Patel) ಹಾಗೂ ಜಯದೇವ್ ಉನಾದ್ಕಟ್ ಕ್ರೀಸ್​ನಲ್ಲಿದ್ದಾರೆ. ಇಂದಿನ ನಾಲ್ಕನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್:

ಎರಡನೇ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಗೆದ್ದು ಮೊದಲ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಮೊಮಿನುಲ್ ಹಕ್ (84) ಹೊರತುಪಡಿಸಿದರೆ ಯಾವ ಆಟಗಾರರು ಬ್ಯಾಟ್​ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ 73.5 ಓವರ್‌ಗಳಲ್ಲಿ ಬಾಂಗ್ಲಾ 227 ರನ್‌ಗಳಿಗೆ ಸರ್ವಪತನ ಕಂಡಿತು. ನಜ್ಮುಲ್‌ ಹುಸೇನ್ ಶಾಂಟೊ (25), ಜಾಕಿರ್‌ ಹಸನ್‌(15), ಶಕಿಬ್‌ ಅಲ್‌ ಹಸನ್‌ (16), ಮುಷ್ಫಿಕರ್‌ ರಹೀಮ್‌ (26) ಹಾಗೂ ಲಿಟನ್‌ ದಾಸ್‌ (15) ಬ್ಯಾಟಿಂಗ್‌ನಲ್ಲಿ ನಿರಾಶೆ ಮೂಡಿಸಿದರು. ಉಮೇಶ್ ಯಾದವ್ 4 ವಿಕೆಟ್ ಕಬಳಿಸಿದರು. ಇವರ ಜೊತೆಗೆ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರು.

ಭಾರತ ಮೊದಲ ಇನ್ನಿಂಗ್ಸ್:

ಮೊದಲ ಇನ್ನಿಂಗ್ಸ್ ಶುರು ಮಾಡಿದ್ದ ಟೀಮ್ ಇಂಡಿಯಾ ಪುನಃ ಆರಂಭಿಕ ವೈಫಲ್ಯ ಅನುಭವಿಸಿತು. ಕೆಎಲ್ ರಾಹುಲ್ 10 ರನ್​​ಗೆ (45 ಎಸೆತ), ಶುಭ್​ಮನ್ ಗಿಲ್ (20) ಬೇಗನೆ ನಿರ್ಗಮಿಸಿದರು. ಪೂಜಾರ 55 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಕೂಡ 24 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ 5ನೇ ವಿಕೆಟ್​ಗೆ ಜೊತೆಯಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಧಾರವಾದರು. ಪಂತ್ 105 ಎಸೆತಗಳಲ್ಲಿ 7 ಫೋರ್, 5 ಭರ್ಜರಿ ಸಿಕ್ಸರ್​ನೊಂದಿಗೆ 93 ರನ್ ಸಿಡಿಸಿ ಔಟಾದರು. ಅಯ್ಯರ್ 87 ರನ್​ ಚಚ್ಚಿದರು. ಭಾರತ 86.3 ಓವರ್​ಗಳಲ್ಲಿ 314 ರನ್​ಗೆ ಆಲೌಟ್ ಆಯಿತು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್ ಹಾಗೂ ತೈಜುಲ್ ಇಸ್ಲಾಂ ತಲಾ 4 ವಿಕೆಟ್ ಕಿತ್ತರು.

RCB Squad 2023: ಬಲಿಷ್ಠವಾಗಿದೆ ಬೆಂಗಳೂರು: ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ ನೋಡಿ

ಬಾಂಗ್ಲಾ ಎರಡನೇ ಇನ್ನಿಂಗ್ಸ್:

ಎರಡನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ 70.2 ಓವರ್​ಗಳಲ್ಲಿ 231 ರನ್ ಕಲೆಹಾಕಿತು. ಜಾಕಿರ್‌ ಹಸನ್‌ 135 ಎಸೆತಗಳಲ್ಲಿ 51 ರನ್ ಗಳಿಸಿದರು. ಲಿಟನ್ ದಾಸ್ ತಂಡಕ್ಕೆ ಆಧಾರವಗಿ 73 ರನ್ ಬಾರಿಸಿದರು. ನೂರುಲ್ ಹಸನ್ ಹಾಗೂ ಟಸ್ಕಿನ್ ಅಹ್ಮದ್ ತಲಾ 31 ರನ್ ಗಳಿಸಿದರು. ಭಾರತ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರೆ, ಅಶ್ವಿನ್ ಹಾಗೂ ಸಿರಾಜ್ ತಲಾ 2 ವಿಕೆಟ್ ಪಡೆದರು.

ಭಾರತ ಎರಡನೇ ಇನ್ನಿಂಗ್ಸ್:

145 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. ಓಪನರ್​ಗಳಾದ ಶುಭ್​ಮನ್ ಗಿಲ್ 7 ರನ್​ಗೆ ಹಾಗೂ ನಾಯಕ ಕೆಎಲ್ ರಾಹುಲ್ 2 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಚೇತೇಶ್ವರ್ ಪೂಜಾರ ಕೂಡ 6 ರನ್​ಗೆ ನಿರ್ಗಮಿಸಿ ಶಾಕ್ ನೀಡಿದರು. ವಿರಾಟ್ ಕೊಹ್ಲಿ (1) ಆಟ ಕೂಡ ನಡೆಯಲಿಲ್ಲ. ಬಳಿಕ ಅಕ್ಷರ್ ಪಟೇಲ್ (16*) ಹಾಗೂ ಜಯದೇವ್ ಉನಾದ್ಕಟ್ (3*) ದಿನದಾಟದ ಅಂತ್ಯಕ್ಕೆ ಕ್ರೀಸ್​ನಲ್ಲಿದ್ದರು. ಭಾರತ 23 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು. ಟೀಮ್ ಇಂಡಿಯಾ ಗೆಲುವಿಗೆ ಇನ್ನೂ 100 ರನ್​ಗಳ ಅವಶ್ಯಕತೆಯಿದೆ. ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಇನ್ನಷ್ಟೇ ಕ್ರೀಸ್​ಗೆ ಬರಬೇಕಿದೆ.

TV9 Kannada


Leave a Reply

Your email address will not be published. Required fields are marked *