India Tour of Ireland: ಟೀಮ್ ಇಂಡಿಯಾ ವಿರುದ್ದದ ಸರಣಿಗೆ ಐರ್ಲೆಂಡ್ ತಂಡ ಪ್ರಕಟ | India Tour of Ireland: Andrew Balbirnie to lead 14 man squad


India Tour of Ireland: ವಿಶೇಷ ಎಂದರೆ ಭಾರತ ತಂಡ 4 ವರ್ಷಗಳ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮೊದಲು, 2018 ರಲ್ಲಿ, ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್‌ಗೆ ಪ್ರವಾಸ ಕೈಗೊಂಡಿತು.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ (India Tour of Ireland) ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಲಿದೆ. ಜೂನ್ ಕೊನೆಯ ವಾರದಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗಾಗಿ ಇದೀಗ ಐರ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ಆಂಡ್ರ್ಯೂ ಬಾಲ್ಬಿರ್ನಿ ಮುನ್ನಡೆಸಲಿದ್ದಾರೆ. ಇನ್ನು 14 ಸದಸ್ಯರ ಬಳಗದಲ್ಲಿ ಬಹುತೇಕ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಟಿ20 ವಿಶ್ವಕಪ್​ನಲ್ಲಿ ಆಡಿದ್ದ ಜೋಶ್ ಲಿಟಲ್, ಕ್ರೇಗ್ ಯಂಗ್ ಕೂಡ ತಂಡದಲ್ಲಿದ್ದಾರೆ. ಹಾಗೆಯೇ ಸ್ಪೋಟಕ ಬ್ಯಾಟ್ಸ್​ಮನ್ ಪಾಲ್ ಸ್ಟಿರ್ಲಿಂಗ್ ಸಹ ಟೀಮ್ ಇಂಡಿಯಾ ವಿರುದ್ದ ಕಣಕ್ಕಿಳಿಯಲಿದ್ದಾರೆ.

ಈ ಸರಣಿಯಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, ಜೂನ್ 26 ರಂದು ಮೊದಲ ಪಂದ್ಯ ಜರುಗಲಿದೆ. ಹಾಗೆಯೇ 2ನೇ ಪಂದ್ಯ 28 ರಂದು ಮಲಾಹೈಡ್‌ನಲ್ಲಿ ನಡೆಯಲಿವೆ. ವಿಶೇಷ ಎಂದರೆ ಮೊದಲ ಪಂದ್ಯದ ಟಿಕೆಟ್​ಗಳು ಈಗಾಗಲೇ ಸಂಪೂರ್ಣ ಮಾರಾಟವಾಗಿದೆ. ಇನ್ನು ಈ ಸರಣಿಗಾಗಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಘೋಷಿಸಿಲ್ಲ. ಇದಾಗ್ಯೂ ಸಿಬ್ಬಂದಿಗಳನ್ನು ಬಿಸಿಸಿಐ ಆಯ್ಕೆ ಮಾಡಿಕೊಂಡಿದೆ. ಅದರಂತೆ ತಂಡದ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಐರ್ಲೆಂಡ್ ವಿರುದ್ದ ಸರಣಿಗೆ ಟೀಮ್ ಇಂಡಿಯಾ ಮೀಸಲು ತಂಡವನ್ನು ಕಳುಹಿಸಲು ನಿರ್ಧರಿಸಿದೆ.

ಏಕೆಂದರೆ ಜುಲೈ 1 ರಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸರಣಿ ಆಡಲಿದೆ. ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಪ್ರಮುಖ ಆಟಗಾರರು ಇಂಗ್ಲೆಂಡ್ ವಿರುದ್ದದ ಸರಣಿಗೆ ತೆರಳಲಿದೆ. ಹಾಗೆಯೇ ಐರ್ಲೆಂಡ್ ವಿರುದ್ದದ ಸರಣಿಗೆ ಮತ್ತೊಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ತಂಡದ ಕೋಚ್ ಆಗಿ ವಿವಿಎಸ್​ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದು, ಜೊತೆಗೆ ಎನ್‌ಸಿಎ ತರಬೇತುದಾರರಾದ ಸಿತಾಂಶು ಕೊಟಕ್, ಸಾಯಿರಾಜ್ ಬಹುತುಲೆ ಮತ್ತು ಮುನಿಶ್ ಬಾಲಿ ಟೀಮ್ ಇಂಡಿಯಾ ಜೊತೆ ಐರ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದಾರೆ.

ವಿಶೇಷ ಎಂದರೆ ಭಾರತ ತಂಡ 4 ವರ್ಷಗಳ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮೊದಲು, 2018 ರಲ್ಲಿ, ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್‌ಗೆ ಪ್ರವಾಸ ಕೈಗೊಂಡಿತು. ಇದೀಗ ಮತ್ತೊಮ್ಮೆ ಐರ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ವಿರುದ್ದದ ಸರಣಿಯನ್ನು ಐರ್ಲೆಂಡ್ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಟೀಮ್ ಇಂಡಿಯಾ ವಿರುದ್ದದ T20 ಸರಣಿಗೆ ಐರ್ಲೆಂಡ್ ತಂಡ ಹೀಗಿದೆ:
ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.