India vs New Zealand: ಕೊನೆ ಕ್ಷಣದಲ್ಲಿ ಟೀಮ್ ಇಂಡಿಯಾ ವಿರುದ್ದ ಸರಣಿಯಿಂದ ಹಿಂದೆ ಸರಿದ ನ್ಯೂಜಿಲೆಂಡ್ ವೇಗಿ | India vs New Zealand: Kyle Jamieson to skip T20 series in India zp


India vs New Zealand: ಕೊನೆ ಕ್ಷಣದಲ್ಲಿ ಟೀಮ್ ಇಂಡಿಯಾ ವಿರುದ್ದ ಸರಣಿಯಿಂದ ಹಿಂದೆ ಸರಿದ ನ್ಯೂಜಿಲೆಂಡ್ ವೇಗಿ

New zealand

ಭಾರತ-ನ್ಯೂಜಿಲೆಂಡ್ ನಡುವಣ ಟಿ20 ಸರಣಿ ಇಂದಿನಿಂದ (ನ.17) ಶುರುವಾಗಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜೇಮಿಸನ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಮುಂಬರುವ ಟೆಸ್ಟ್​​ ಸರಣಿಯತ್ತ ಹೆಚ್ಚಿನ ಗಮನಹರಿಸಲು ಜೇಮಿಸನ್ ಟಿ20 ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರೊಂದಿಗೆ ಭಾರತದ ವಿರುದ್ದದ ಟಿ20 ಸರಣಿಯಿಂದ 2ನೇ ಆಟಗಾರ ಹಿಂದೆ ಸರಿದಂತಾಗಿದೆ. ಈ ಹಿಂದೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಿಂದೆ ಸರಿದಿದ್ದರು. ವಿಶ್ರಾಂತಿಗಾಗಿ ಟಿ20 ಸರಣಿಯಿಂದ ಹೊರಗುಳಿಯುವುದಾಗಿ ವಿಲಿಯಮ್ಸನ್ ತಿಳಿಸಿದ್ದರು. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಟಿಮ್ ಸೌಥಿ ಮುನ್ನಡೆಸಲಿದ್ದಾರೆ.

“ಕೇನ್ ಮತ್ತು ಕೈಲ್ ಅವರು ಟಿ 20 ಸರಣಿಯಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಅವರಿಬ್ಬರೂ ಟೆಸ್ಟ್ ಪಂದ್ಯಗಳಿಗೆ ತಯಾರಿ ನಡೆಸಲಿದ್ದಾರೆ. ಟೆಸ್ಟ್ ತಂಡದಲ್ಲಿರುವ ಇತರೆ ಕೆಲವು ಆಟಗಾರರು ಸಹ ಸಂಪೂರ್ಣ ಸರಣಿ ಆಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಐದು ದಿನಗಳಲ್ಲಿ ಮೂರು T20 ಪಂದ್ಯಗಳನ್ನು ಹೊಂದಿರುವ ಮತ್ತು ಮೂರು ವಿಭಿನ್ನ ನಗರಗಳಿಗೆ ಪ್ರಯಾಣಿಸುವ ಮೂಲಕ ಸಮತೋಲನವನ್ನು ಸಾಧಿಸಬೇಕಾಗಿದೆ. ಇದು ತುಂಬಾ ಬಿಡುವಿಲ್ಲದ ಸಮಯ.” ಎಂದು ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ 3 T20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಬುಧವಾರ ಜೈಪುರದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರಂತಹ ದೊಡ್ಡ ಸ್ಟಾರ್ ಆಟಗಾರರು ಕಣಕ್ಕಿಳಿಯುತ್ತಿಲ್ಲ. ಅಷ್ಟೇ ಅಲ್ಲದೆ ಈ ಸರಣಿಯೊಂದಿಗೆ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಿ ಪದಾರ್ಪಣೆ ಮಾಡಲಿದ್ದು, ರಾಹುಲ್ ದ್ರಾವಿಡ್ ತಂಡದ ಮುಖ್ಯ ಕೋಚ್ ಆಗಿ ಹೊಸ ಇನಿಂಗ್ಸ್​ ಆರಂಭಿಸಲಿದ್ದಾರೆ.

ಭಾರತ-ನ್ಯೂಜಿಲ್ಯಾಂಡ್ ಸರಣಿ ವೇಳಾಪಟ್ಟಿ
1ನೇ ಟಿ20: 17 ನವೆಂಬರ್ (ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಜೈಪುರ)
2ನೇ ಟಿ20 ಪಂದ್ಯ: 19 ನವೆಂಬರ್ (JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್, ರಾಂಚಿ)
3ನೇ ಟಿ20 ಪಂದ್ಯ: 21 ನವೆಂಬರ್ (ಈಡನ್ ಗಾರ್ಡನ್ಸ್, ಕೋಲ್ಕತಾ)

1 ನೇ ಟೆಸ್ಟ್ ಪಂದ್ಯ: 25 ರಿಂದ 29 ನವೆಂಬರ್ (ಗ್ರೀನ್ ಪಾರ್ಕ್, ಕಾನ್ಪುರ)
2 ನೇ ಟೆಸ್ಟ್ ಪಂದ್ಯ: 3 ರಿಂದ 7 ಡಿಸೆಂಬರ್ (ವಾಂಖೆಡೆ ಸ್ಟೇಡಿಯಂ, ಮುಂಬೈ)

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(India vs New Zealand: Kyle Jamieson to skip T20 series in India)

TV9 Kannada


Leave a Reply

Your email address will not be published. Required fields are marked *