Ishant Sharma, Ajinkya Rahane and Ravindra Jadeja IND vs NZ
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಿಂದ ಟೀಮ್ ಇಂಡಿಯಾದ (India vs New Zealand) ಮೂವರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಇಶಾಂತ್ ಶರ್ಮಾ (Ishanth Sharma), ರವೀಂದ್ರ ಜಡೇಜಾ (Ravindra Jadeja) ಮತ್ತು ಉಪ ನಾಯಕ ಅಜಿಂಕ್ಯಾ ರಹಾನೆ (Ajinkya rahane) ಇಂಜುರಿಗೆ ತುತ್ತಾದ ಪರಿಣಾಮ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗ ಬೇಕಿರುವ ಅಂತಿಮ ನಿರ್ಣಾಯಕ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ. ಮೊದಲ ಟೆಸ್ಟ್ನ ಅಂತಿಮ ದಿನ ವೇಗಿ ಇಶಾಂತ್ ಶರ್ಮಾ ಅವರ ಎಡಗೈಯ ಕಿರು ಬೆರಳಿಗೆ ಗಾಯವಾದ ಕಾರಣ ಅವರು ಅಲಭ್ಯರಾಗಿದ್ದಾರೆ. ರವೀಂದ್ರ ಜಡೇಜಾ ಬಲ ಮುಂಗೈ ಗಾಯದಿಂದ ಬಳಲುತ್ತಿದ್ದಾರೆ ಮತ್ತು ರಹಾನೆ ಮೊದಲ ಟೆಸ್ಟ್ನ ಕೊನೇ ದಿನ ಫೀಲ್ಡಿಂಗ್ ಮಾಡುವಾಗ ಎಡ ಮಂಡಿರಜ್ಜು ನೋವಿಗೆ ತುತ್ತಾದರು ಎಂದು ಹೇಳಿದೆ. ಇವರೆಲ್ಲರನ್ನು ಬಿಸಿಸಿಐ ಮೆಡಿಕಲ್ ತಂಡ ಸೂಕ್ಷ್ಮವಾಗಿ ವಿಚಾರಿಸುತ್ತಿದೆ.
NEWS – Injury updates – New Zealand’s Tour of India
Ishant Sharma, Ajinkya Rahane and Ravindra Jadeja ruled out of the 2nd Test.
More details here – https://t.co/ui9RXK1Vux #INDvNZ pic.twitter.com/qdWDPp0MIz
— BCCI (@BCCI) December 3, 2021
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಎರಡನೇ ನಿರ್ಣಾಯಕ ಟೆಸ್ಟ್ ಪಂದ್ಯ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಇನ್ನೇನು ಶುರುವಾಗುವುದರಲ್ಲಿದೆ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಗೆಲುವಿನ ಸನಿಹ ಬಂದರೂ, ಕಾನ್ಪುರ ಪಿಚ್ ಹೆಚ್ಚಿನ ನೆರವು ನೀಡದ ಕಾರಣ ಭಾರತ ತಂಡ ಡ್ರಾಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ ಇಂದಿನಿಂದ ನಡೆಯಲಿರುವ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಿರುವ ಬಲವಿದ್ದರೆ, ಇತ್ತ ಇದುವರೆಗೆ ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ಕೇನ್ ಪಡೆ (Kane Williamson) ಐತಿಹಾಸಿಕ ಗೆಲುವನ್ನು ಎದುರು ನೋಡುತ್ತಿದೆ. ಇದರ ನಡುವೆ ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಮಾರ್ಗದರ್ಶನದಲ್ಲಿ ವಿರಾಟ್ (Virat Kohli) ತಂಡವನ್ನು ಮುನ್ನಡೆಸುತ್ತಿದ್ದು, ಭಾರತದ ಪ್ರದರ್ಶನ ಯಾವರೀತಿ ಇರಲಿದೆ ಎಂಬುದು ನೋಡಬೇಕಿದೆ.
ಇನ್ನಷ್ಟು ಮಾಹಿತಿಗೆ ನಿರೀಕ್ಷಿಸಿ…