India vs new zealand
ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 372 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದು ಹಂಗಾಮಿ ನಾಯಕ ಟಾಮ್ ಲ್ಯಾಥಮ್. ಪಂದ್ಯದ ಹೀನಾಯ ಸೋಲಿನ ಬಗ್ಗೆ ಮಾತನಾಡಿದ ಲ್ಯಾಥಮ್, ತಂಡದಲ್ಲಿದ್ದ ಅನುಭವಿ ಬ್ಯಾಟ್ಸ್ ಮನ್ ರಾಸ್ ಟೇಲರ್ ಮಾಡಿದ ಫ್ಲಾಪ್ ಆದ ಕಾರಣ ತಂಡ ಹೀನಾಯವಾಗಿ ಸೋಲಬೇಕಾಯಿತು ಎಂದರು. ಕಾನ್ಪುರದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಳ ಕ್ರಮಾಂಕದ ಆಟಗಾರರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮುಂಬೈನಲ್ಲಿ ನ್ಯೂಜಿಲೆಂಡ್ ತಂಡ ಎರಡು ಇನ್ನಿಂಗ್ಸ್ಗಳಲ್ಲಿ 62 ಮತ್ತು 167 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಬಗ್ಗೆ ಮಾತನಾಡಿದ ಲ್ಯಾಥಮ್, ‘ರಾಸ್ (ಟೇಲರ್) ಸ್ಪಷ್ಟ ಯೋಜನೆಯನ್ನು ಹೊಂದಿದ್ದರು. ಅವರು ಬೌಲರ್ಗಳನ್ನು ಒತ್ತಡಕ್ಕೆ ಸಿಲುಕಿಸಲು ಬಯಸಿದ್ದರು. ಉಪಖಂಡದ ತಂಡದ ವಿರುದ್ಧ ನೀವು ಇದನ್ನು ಮಾಡಿದಾಗ, ಎದುರಾಳಿಗಳು ಚೆಂಡನ್ನು ಬೇಗನೆ ಕೆಳಗೆ ಹಾಕಲು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್, ರಾಸ್ ಅವರ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ಇದೇ ವೇಳೆ ಭಾರತದ ಸ್ಪಿನ್ನರ್ಗಳನ್ನು ಶ್ಲಾಘಿಸಿದ ಲ್ಯಾಥಮ್, ‘ಟೀಮ್ ಇಂಡಿಯಾ ಬೌಲರುಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಅವರು ನಮಗೆ ರನ್ ಗಳಿಸುವ ಅವಕಾಶವನ್ನು ಕೂಡ ನೀಡಿರಲಿಲ್ಲ ಎಂದರು.
ಇದು ನಮ್ಮ ತಂಡದ ಕೆಟ್ಟ ಸಮಯ ಎಂದು ಭಾವಿಸುತ್ತೇನೆ. ಮುಂಬೈ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ ಹೊರತುಪಡಿಸಿ, ನ್ಯೂಜಿಲೆಂಡ್ನ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿದರು. ಸ್ಪಿನ್ನರ್ಗಳ ಮೇಲೆ ಆಕ್ರಮಣಕಾರಿ ಧೋರಣೆಯನ್ನು ತೆಗೆದುಕೊಳ್ಳಲು ತಾನು ಯೋಜಿಸಿದ್ದೆ . ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಲ್ಯಾಥಮ್ ಹೇಳಿದರು.