India vs Pakistan: ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಮುಂದಿದೆ ಅವಕಾಶ | India vs pakistan will be playing again in upcoming tournament


India vs Pakistan: ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಮುಂದಿದೆ ಅವಕಾಶ

india vs pakistan

ಟಿ20 ವಿಶ್ವಕಪ್​ನಿಂದ (T20 World Cup 2021) ಟೀಮ್ ಇಂಡಿಯಾ (Team India) ಹೊರಬಿದ್ದಿದೆ. ಈ ಬಾರಿ ಪಾಕಿಸ್ತಾನ್ ವಿರುದ್ದದ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದ್ದರೆ, ಮತ್ತೊಮ್ಮೆ ಪಾಕ್ ವಿರುದ್ದ ಆಡುವ ಅವಕಾಶ ದೊರೆಯುತ್ತಿತ್ತು. ಸೆಮಿಫೈನಲ್​ನಲ್ಲಿ ಉಭಯ ತಂಡಗಳು ಗೆದ್ದು, ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅತ್ತ ಪಾಕ್ ಸೆಮಿಫೈನಲ್ ಪ್ರವೇಶಿಸಿದರೆ, ಟೀಮ್ ಇಂಡಿಯಾ ಲೀಗ್​ ಹಂತದಿಂದಲೇ ಹೊರಬಿದ್ದಿದೆ. ಹೀಗಾಗಿ ಪಾಕ್ ವಿರುದ್ದದ ಮತ್ತೊಂದು ಮುಖಾಮುಖಿಯ ನಿರೀಕ್ಷೆ ಕೂಡ ಅಂತ್ಯವಾಗಿದೆ. ಇತ್ತ ಭಾರತ-ಪಾಕಿಸ್ತಾನ್ ನಡುವೆ ಯಾವುದೇ ಸರಣಿ ನಡೆಯುತ್ತಿಲ್ಲ. ಹೀಗಾಗಿ ಮತ್ತೆ ಉಭಯ ತಂಡಗಳ ಮುಖಾಮುಖಿ ಯಾವಾಗ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತಮ ಮುಂದಿನ ವರ್ಷ. ಹೌದು, 2022 ರಲ್ಲೇ ಭಾರತಕ್ಕೆ ವಿಶ್ವಕಪ್​ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಅವಕಾಶ ಸಿಗಲಿದೆ.

ಮುಂದಿನ ವರ್ಷ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯಲಿದ್ದು, ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಆಡಲಿವೆ. ಈ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತ-ಪಾಕ್ ಮುಖಾಮುಖಿಯಾಗಲಿದೆ.

ಅದೇ ರೀತಿ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟ 2020ರ ಟಿ20 ವಿಶ್ವಕಪ್​ ಅನ್ನು 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗುತ್ತದೆ. ಈ ವಿಶ್ವಕಪ್​ನಲ್ಲೂ ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಇನ್ನು 2023ರಲ್ಲೂ ಪಾಕಿಸ್ತಾನ್​ದಲ್ಲಿ ಏಷ್ಯಾ ಕಪ್ ನಡೆಯಲಿದ್ದು, ಇದರಲ್ಲೂ ಭಾರತ ಭಾಗವಹಿಸುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ 2023 ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್​ ಜರುಗಲಿದ್ದು, ಈ ವಿಶ್ವಕಪ್​ಗಾಗಿ ಪಾಕಿಸ್ತಾನ್ ತಂಡ ಭಾರತಕ್ಕೆ ಬರಲಿದೆ.

ಅಂದರೆ ಮುಂದಿನ 2 ವರ್ಷಗಳಲ್ಲಿ 4 ಪ್ರಮುಖ ಟೂರ್ನಿಗಳು ನಡೆಯಲಿದ್ದು, ಈ ನಾಲ್ಕು ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನ್ ಆಡಲಿದೆ. ಈ ಟೂರ್ನಿಗಳಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(india vs pakistan will be playing again in upcoming tournament)

TV9 Kannada


Leave a Reply

Your email address will not be published.