India Vs Pakistan: ಭಾರತ- ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಾ? ಐಸಿಸಿ ಹೇಳಿದ್ದೇನು? | ICC cant influence India Pakistan relations bilateral series upto BCCI and PCB Says Interim CEO


India Vs Pakistan: ಭಾರತ- ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಾ? ಐಸಿಸಿ ಹೇಳಿದ್ದೇನು?

india vs pakistan

ಭಾರತ ಕ್ರಿಕೆಟ್ ತಂಡವು 2021 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ವಿಶ್ವಕಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನವು ಭಾರತವನ್ನು ಸೋಲಿಸಿತು. ಈ ಪಂದ್ಯ ಮತ್ತೊಮ್ಮೆ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳ ಉತ್ಸಾಹವನ್ನು ಜಾಗೃತಗೊಳಿಸಿತು. ಪಾಕಿಸ್ತಾನದ ಅಭಿಮಾನಿಗಳು ಭಾರತವನ್ನು ಮತ್ತೊಮ್ಮೆ ಸೋಲಿಸಲು ಉತ್ಸುಕರಾಗಿದ್ದಾರೆ. ಆದರೆ ಭಾರತೀಯ ಅಭಿಮಾನಿಗಳು ಟೀಮ್ ಇಂಡಿಯಾ ಈ ಸೋಲಿನ ಖಾತೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ಬಯಸುತ್ತಾರೆ. ಆದರೆ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯದ ಕಾರಣ ದೀರ್ಘ ಕಾಲ ಕಾಯಬೇಕಾಗಿದೆ. ಉಭಯ ದೇಶಗಳ ನಡುವಿನ ಬಾಂಧವ್ಯದಿಂದಾಗಿ ಎರಡೂ ದೇಶಗಳು ತಮ್ಮ ನಡುವೆ ಯಾವುದೇ ಕ್ರಿಕೆಟ್ ಸರಣಿಗಳನ್ನು ಆಡುತ್ತಿಲ್ಲ ಮತ್ತು ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ಈ ವಿಚಾರದಲ್ಲಿ ತನ್ನ ಕಡೆಯಿಂದ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2012-13 ರಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಕಳೆದ ಬಾರಿ ಉಭಯ ತಂಡಗಳ ನಡುವೆ ಏಕದಿನ ಹಾಗೂ ಟಿ20 ಸರಣಿ ನಡೆದಿತ್ತು. ಆಗ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಆದರೆ ಅಂದಿನಿಂದ ಉಭಯ ದೇಶಗಳ ನಡುವಿನ ಹದಗೆಟ್ಟ ಸಂಬಂಧದಿಂದಾಗಿ ಯಾವುದೇ ಸರಣಿಗಳು ನಡೆದಿಲ್ಲ. ಭಾರತ ಮತ್ತು ಪಾಕಿಸ್ತಾನವು ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗಲಿದೆ. ಈ ಮೂಲಕ ಅಭಿಮಾನಿಗಳಿಗೆ ಈ ಪಂದ್ಯವನ್ನು ಆನಂದಿಸುವ ಅವಕಾಶ ಸಿಗುತ್ತದೆ.

ಎರಡೂ ದೇಶಗಳ ನಡುವೆ ಐಸಿಸಿ ಬರುವಂತಿಲ್ಲ
ಎರಡು ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯಲ್ಲಿ ಐಸಿಸಿ ಮಧ್ಯಸ್ಥಿಕೆ ವಹಿಸಬಹುದೇ? ಈ ಪ್ರಶ್ನೆಗೆ ಐಸಿಸಿಯ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡಿಸ್ ಅವರು ಇತ್ತೀಚೆಗೆ ಉತ್ತರ ನೀಡಿದ್ದಾರೆ. ನ್ಯೂಸ್ 18 ಇಂಗ್ಲಿಷ್ ಸುದ್ದಿ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಅಲಾರ್ಡಿಸ್, “ದ್ವಿಪಕ್ಷೀಯ ಕ್ರಿಕೆಟ್‌ನಲ್ಲಿ ಐಸಿಸಿ ಹಸ್ತಕ್ಷೇಪ ಇರುವಂತಿಲ್ಲ. ಅವರು ನಮ್ಮ ಈವೆಂಟ್‌ಗಳಲ್ಲಿ ಆಡುವಾಗ ನಾವು ಅದನ್ನು ಆನಂದಿಸುತ್ತೇವೆ. ಆದರೆ ಎರಡು ದೇಶಗಳು ಮತ್ತು ಎರಡೂ ಮಂಡಳಿಗಳ ನಡುವಿನ ಸಂಬಂಧವು ಅಂತಹದ್ದಾಗಿದೆ. ICC ಪ್ರಭಾವ ಬೀರಲು ಸಾಧ್ಯವಿಲ್ಲ. ಯಾವುದೇ ದ್ವಿಪಕ್ಷೀಯ ಸರಣಿಯಂತೆ, ಎರಡೂ ಮಂಡಳಿಗಳು ಒಪ್ಪಿಕೊಂಡರೆ, ಅವರು ಆಡುತ್ತಾರೆ. ಇಲ್ಲದಿದ್ದರೆ, ನಾನು ಅವರ ಮಧ್ಯೆ ತಲೆಹಾಕುವಂತಿಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಆಗುತ್ತಿರುವುದನ್ನು ನಾನು ನೋಡುತ್ತಿಲ್ಲ.

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಯಾವುದೇ ಸರಣಿ ಇರುವುದಿಲ್ಲ
ಪ್ರಸ್ತುತ ಪರಿಸ್ಥಿತಿಯಿಂದಾಗಿ, ಭಾರತ ಮತ್ತು ಪಾಕಿಸ್ತಾನವು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಆಡಬಹುದು. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರ ನಡುವೆ ಪಂದ್ಯದ ಬಗ್ಗೆ ಸ್ವಲ್ಪ ಭರವಸೆ ಇದೆ. ಏಕೆಂದರೆ ಅದರ ಅಡಿಯಲ್ಲಿ ಆಡುವ ಟೆಸ್ಟ್ ಸರಣಿಯನ್ನು ದ್ವಿಪಕ್ಷೀಯ ಕ್ಯಾಲೆಂಡರ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆದರೆ, ಎರಡೂ ತಂಡಗಳು ಫೈನಲ್ ತಲುಪಿದರೆ ತಟಸ್ಥ ಸ್ಥಳದಲ್ಲಿ ಆಡಬೇಕಾಗುತ್ತದೆ ಎಂದು ಐಸಿಸಿ ಸಿಇಒ ಸ್ಪಷ್ಟಪಡಿಸಿದ್ದಾರೆ. ಮುಂಬರುವ ಐಸಿಸಿ ಟೂರ್ನಿಯಲ್ಲಿ (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ) ಉಭಯ ತಂಡಗಳು ಒಂದೇ ಗುಂಪಿನಲ್ಲಿ ಇರಬೇಕೇ ಎಂಬುದನ್ನು ಎರಡೂ ತಂಡಗಳ ಶ್ರೇಯಾಂಕದ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ಅಲಾರ್ಡಿಸ್ ಸ್ಪಷ್ಟಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *