India vs West Indies: ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ | India vs West Indies T20 Series 2022 Schedule


India vs West Indies: ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ

India vs West Indies

ವೆಸ್ಟ್ ಇಂಡೀಸ್ (India vs West Indies) ನಡುವಣ ಏಕದಿನ ಸರಣಿಯನ್ನು ಭಾರತ ತಂಡವು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದೀಗ ಟೀಮ್ ಇಂಡಿಯಾ ಟಿ20 ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿದ್ದು, ಎಲ್ಲಾ ಪಂದ್ಯಗಳು ಕೊಲ್ಕತ್ತಾ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆಯಲಿದೆ. ಫೆಬ್ರವರಿ 16 ರಿಂದ ಶುರುವಾಗಲಿರುವ ಈ ಸರಣಿಗಾಗಿ ಈಗಾಗಲೇ ಉಭಯ ತಂಡಗಳನ್ನು ಘೋಷಿಸಲಾಗಿದೆ. ಆದರೆ ಗಾಯದ ಕಾರಣ ಈ ಸರಣಿಯಿಂದ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್ ಹೊರಗುಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿವೆ.

ಭಾರತ-ವೆಸ್ಟ್ ಇಂಡೀಸ್ T20 ಸರಣಿಯ ವೇಳಾಪಟ್ಟಿ:

ಫೆಬ್ರವರಿ 16 – 1 ನೇ T20, ಕೋಲ್ಕತ್ತಾ

ಫೆಬ್ರವರಿ 18 – 2 ನೇ T20, ಕೋಲ್ಕತ್ತಾ

ಫೆಬ್ರವರಿ 20 – 3 ನೇ T20, ಕೋಲ್ಕತ್ತಾ

ವೆಸ್ಟ್ ಇಂಡೀಸ್ ಟಿ20 ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಬ್ರೇಮನ್ ಕಿಂಗ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಕೈಲ್ ಮೈಯರ್ಸ್, ಓಡಿಯನ್ ಸ್ಮಿತ್ ಮತ್ತು ಹೇಡನ್ ವಾಲ್ಷ್ ಜೂನಿಯರ್.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಮತ್ತು ಹರ್ಷಲ್ ಪಟೇಲ್

TV9 Kannada


Leave a Reply

Your email address will not be published.