India vs West Indies 2nd T20: ಭಾರತ-ವೆಸ್ಟ್ ಇಂಡೀಸ್​ 2ನೇ ಟಿ20 ಪಂದ್ಯ ಯಾವಾಗ? | India vs West Indies 2nd T20: When and where to watch


India vs West Indies 2nd T20: ಭಾರತ-ವೆಸ್ಟ್ ಇಂಡೀಸ್​ 2ನೇ ಟಿ20 ಪಂದ್ಯ ಯಾವಾಗ?

India vs West Indies

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ T20 ಸರಣಿಯ ಎರಡನೇ ಪಂದ್ಯವು ಶುಕ್ರವಾರ (ಫೆಬ್ರವರಿ 18) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಈಗಾಗಲೇ ಮೊದಲ ಪಂದ್ಯವನ್ನು ಗೆದ್ದುಕೊಂಡಿದ್ದು, 2ನೇ ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿ ಟೀಮ್ ಇಂಡಿಯಾ ವಶವಾಗಲಿದೆ. ಹೀಗಾಗಿ 2ನೇ ಪಂದ್ಯವು ಕೀರನ್ ಪೊಲಾರ್ಡ್ ನಾಯಕತ್ವದ ವಿಂಡೀಸ್ ತಂಡಕ್ಕೆ ನಿರ್ಣಾಯಕವಾಗಿದೆ.

ಮೊದಲ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಪ್ರಸ್ತುತ ಸರಣಿಯನ್ನು ಭಾರತ ಗೆದ್ದರೆ, ನಾಯಕನಾಗಿ ನೇಮಕಗೊಂಡ ನಂತರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವು ಸತತ ಮೂರನೇ ಸರಣಿಯನ್ನು ಗೆದ್ದಂತಾಗಲಿದೆ. ಮತ್ತೊಂದೆಡೆ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಇದೀಗ ತಂಡದ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಅವರು ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ವಿರುದ್ಧ 08, 18, 00 ಮತ್ತು 17 ರನ್ ಗಳಿಸಿದ್ದಾರೆ. ಹೀಗಾಗಿ ತಂಡವು ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದೆ. ಅದರಂತೆ 2ನೇ ಟಿ20 ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ T20 ಪಂದ್ಯ ಯಾವಾಗ ಆರಂಭವಾಗುತ್ತದೆ?
ಎರಡನೇ ಟಿ20 ಪಂದ್ಯವು ಶುಕ್ರವಾರ, ಫೆಬ್ರವರಿ 18 ರಂದು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ.

ಎರಡನೇ T20 ಪಂದ್ಯ ಎಲ್ಲಿ ನಡೆಯಲಿದೆ?
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.

ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಎರಡನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಇರಲಿದೆ.

ಲೈವ್ ಸ್ಟ್ರೀಮಿಂಗ್ ಅನ್ನು ನಾನು ಎಲ್ಲಿ ವೀಕ್ಷಿಸಬಹುದು?
ನೀವು Hotstar ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್‌ನ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ಉಪನಾಯಕ), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ವೆಂಕಟೇಶ್ ಅಯ್ಯರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ಅವೇಶ್ ಖಾನ್, ದೀಪಕ್ ಹೂಡಾ ಮತ್ತು ಕುಲದೀಪ್ ಯಾದವ್.

ಭಾರತ ವಿರುದ್ಧದ ವೆಸ್ಟ್ ಇಂಡೀಸ್ ಟಿ20 ತಂಡ: ಕೀರಾನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಶೆಲ್ಡನ್ ಕಾಟ್ರೆಲ್, ರೋವ್‌ಮನ್ ಕಿಂಗ್ ಪೊವೆಲ್, ಕೈಲ್ ಮೈಯರ್ಸ್, ಓಡಿಯನ್ ಸ್ಮಿತ್ ಮತ್ತು ಹೇಡನ್ ವಾಲ್ಷ್ ಜೂನಿಯರ್, ರೊಮಾರಿಯೋ ಶೆಫರ್ಡ್.

TV9 Kannada


Leave a Reply

Your email address will not be published. Required fields are marked *