Infosys: ಉದ್ಯೋಗಿಗಳನ್ನೆಲ್ಲ ಕಚೇರಿಗೆ ಕರೆಸಿಕೊಳ್ಳಲು ಸಿದ್ಧವಾಗುತ್ತಿದೆ ಇನ್ಫೋಸಿಸ್; ವರದಿ – After TCS, now Infosys to resume WFO in a phased manner Latest Industry business news in Kannada


ಇನ್ಫೋಸಿಸ್ ಹಂತ ಹಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿರುವುದು ಕಂಪನಿಯು ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಸಂದೇಶದಿಂದ ತಿಳಿದುಬಂದಿದೆ. ಕಚೇರಿಯಿಂದಲೇ ಕೆಲಸ ಆರಂಭಿಸಲು ಮೂರು ಹಂತದ ಯೋಜನೆ ಹಮ್ಮಿಕೊಂಡಿರುವುದಾಗಿ ಸಂದೇಶದಲ್ಲಿ ತಿಳಿಸಲಾಗಿದೆ.

Infosys: ಉದ್ಯೋಗಿಗಳನ್ನೆಲ್ಲ ಕಚೇರಿಗೆ ಕರೆಸಿಕೊಳ್ಳಲು ಸಿದ್ಧವಾಗುತ್ತಿದೆ ಇನ್ಫೋಸಿಸ್; ವರದಿ

ಇನ್ಫೋಸಿಸ್

ಬೆಂಗಳೂರು: ಉದ್ಯೋಗಿಗಳನ್ನು ಹಂತ ಹಂತವಾಗಿ ಕಚೇರಿಗೆ ಕರೆಸಿಕೊಳ್ಳಲು ಮತ್ತು ಕಚೇರಿಯಿಂದಲೇ ಕೆಲಸ ಮಾಡುವುದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಐಟಿ ಕಂಪನಿ ಇನ್ಫೋಸಿಸ್ (Infosys) ಮುಂದಾಗಿದೆ ಎಂದು ವರದಿಯಾಗಿದೆ. ಇನ್ನೊಂದು ಐಟಿ ಕಂಪನಿ ಟಿಸಿಎಸ್ (TCS) ಈಗಾಗಲೇ ಮನೆಯಿಂದಲೇ ಕೆಲಸ ಅಥವಾ ವರ್ಕ್ ಫ್ರಂ ಹೋಂ ಅನ್ನು ಬಹುತೇಕ ಸ್ಥಗಿತಗೊಳಿಸಿದ್ದು, ಹೆಚ್ಚಿನ ಉದ್ಯೋಗಿಗಳು ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಫೋಸಿಸ್ ಹಾಗೂ ಟಿಸಿಎಸ್ ಈಗಾಗಲೇ ಹೈಬ್ರಿಡ್ ಮಾದರಿ ಅನುಸರಿಸುತ್ತಿವೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿಯಿಂದಲೇ ಕೆಲಸ ಆರಂಭಿಸಲಿವೆ. ಆದಾಗ್ಯೂ, ಉದ್ಯೋಗಿಗಳ ಅವಶ್ಯಕತೆಹಗಳನ್ನೂ ಗಮನದಲ್ಲಿಟ್ಟುಕೊಂಡು ಪಾರದರ್ಶಕ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿರುವುದಾಗಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ.

ಇನ್ಫೋಸಿಸ್ ಹಂತ ಹಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿರುವುದು ಕಂಪನಿಯು ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಸಂದೇಶದಿಂದ ತಿಳಿದುಬಂದಿದೆ. ಕಚೇರಿಯಿಂದಲೇ ಕೆಲಸ ಆರಂಭಿಸಲು ಮೂರು ಹಂತದ ಯೋಜನೆ ಹಮ್ಮಿಕೊಂಡಿರುವುದಾಗಿ ಸಂದೇಶದಲ್ಲಿ ತಿಳಿಸಲಾಗಿದೆ. ಇದರ ಜತೆಗೇ, ಉದ್ಯೋಗಿಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಪಾರದರ್ಶಕ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗುವುದು ಎಂದು ಕಂಪನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಹೀಗಿರಲಿದೆ ಹಂತಗಳು…

ಮೊದಲ ಹಂತದಲ್ಲಿ ವಾರದಲ್ಲಿ ಎರಡು ದಿನ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲಾಗುವುದು. ಎರಡನೇ ಹಂತದಲ್ಲಿ ತಮ್ಮ ಆಯ್ಕೆಯ ಬ್ರಾಂಚ್ ಅಥವಾ ಕಚೇರಿಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಕಂಪನಿಯು 54 ದೇಶಗಳ 274 ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ.

ಮುಂದಿನ ಹಂತದಲ್ಲಿ ಹೈಬ್ರಿಡ್ ಕೆಲಸದ ನೀತಿ ಮತ್ತು ಅದಕ್ಕಿಂತ ಹಿಂದಿನ ಕೆಲಸ ಕಾರ್ಯಗಳ ಬಗ್ಗೆ ಉದ್ಯೋಗಿಗಳ ಅಭಿಪ್ರಾಯ ಕೋರಲಾಗುವುದು. ನಮ್ಮ ತಂಡಗಳು ಕಚೇರಿಯಿಂದ ಕಾರ್ಯನಿರ್ವಹಿಸುವುದನ್ನು ಹೇಗೆ ಸ್ವೀಕರಿಸುತ್ತವೆ, ಸಾಮೂಹಿಕ ಕೆಲಸ ಮತ್ತು ಸೃಜನಾತ್ಮಕತೆಯು ಯೋಜನೆ ಮತ್ತು ವ್ಯವಹಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಹೇಗೆ ನೆರವಾಗುತ್ತವೆ ಎಂಬುದನ್ನು ಗಮನಿಸಲಾಗುವುದು ಎಂದು ಉದ್ಯೋಗಿಗಳಿಗೆ ಕಳುಹಿಸಲಾಗಿರುವ ಸಂದೇಶದಲ್ಲಿ ತಿಳಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

TV9 Kannada


Leave a Reply

Your email address will not be published. Required fields are marked *