
ಸಲಿಲ್ ಪರೇಖ್ (ಸಂಗ್ರಹ ಚಿತ್ರ)
ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಫೈಲಿಂಗ್ ಪ್ರಕಾರ, ಇನ್ಫೋಸಿಸ್ ಸಿಇಒ ಸಲಿಲ್ ಪರೇಖ್ ಅವರಿಗೆ 2021-22ನೇ ಸಾಲಿನಲ್ಲಿ 71 ಕೋಟಿ ರೂಪಾಯಿ ಪಾವತಿಸಲಾಗಿದೆ.
ಬೆಂಗಳೂರು ಮೂಲದ ಇನ್ಫೋಸಿಸ್ನ (Infosys) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಲಿಲ್ ಪರೇಖ್ ಅವರಿಗೆ 2021-22ರ ಹಣಕಾಸು ವರ್ಷದಲ್ಲಿ 71 ಕೋಟಿ ರೂಪಾಯಿ ವೇತನ ಪಾವತಿಸಲಾಗಿದೆ. ಈ ಬಗ್ಗೆ ಷೇರು ವಿನಿಮಯ ಕೇಂದ್ರದ ಫೈಲಿಂಗ್ನಲ್ಲಿ ತಿಳಿಸಲಾಗಿದೆ. 2020-21ನೇ ಸಾಲಿನಲ್ಲಿ ಪಾವತಿಸಿದ್ದ 49.68 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 43ರಷ್ಟು ಹೆಚ್ಚಳವಾಗಿದೆ. ಇನ್ನು ಇಷ್ಟು ದೊಡ್ಡ ಮೊತ್ತದ ವೇತನದ ಪೈಕಿ ಸ್ಟಾಕ್ ಆಪ್ಷನ್ಸ್ 52.33 ಕೋಟಿ, ನಿಶ್ಚಿತ ವೇತನ 5.69 ಕೋಟಿ ರೂಪಾಯಿ, ಇದರಲ್ಲಿ ನಿವೃತ್ತಿ ಅನುಕೂಲ 38 ಲಕ್ಷ ರೂಪಾಯಿ ಒಳಗೊಂಡಿದೆ.
ವೇತನದಲ್ಲಿ 12.62 ಕೋಟಿ ರೂಪಾಯಿ ವೇರಿಯಬಲ್ ಪೇ ಇದೆ. ಈ ವೇತನದ ಬಗ್ಗೆ ತೀರ್ಮಾನವನ್ನು ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪೆನಿಯಾದ ಇನ್ಫೋಸಿಸ್ ಸಲಿಲ್ ಪರೇಖ್ ಅವರನ್ನು ಎರಡನೇ ಅವಧಿಗೆ, 2027ರ ಮಾರ್ಚ್ ತನಕ ಸಿಇಒ ಹಾಗೂ ಎಂ.ಡಿ. ಆಗಿ ಮರು ನೇಮಕ ಆಗಿದ್ದಾರೆ.
ಸಲಿಲ್ ಪರೇಖ್ ಅವರನ್ನು 2018ರ ಜನವರಿಯಿಂದ ಇನ್ಫೋಸಿಸ್ ಸಿಇಒ ಮತ್ತು ಎಂ.ಡಿ. ಆಗಿ ಇದ್ದಾರೆ. ಇನ್ಫೋಸಿಸ್ ಮಂಡಳಿಯಿಂದ ಮ್ಯಾನೇಜ್ಮೆಂಟ್ನ 6 ಪ್ರಮುಖ ಅಧಿಕಾರಿಗಳಿಗೆ 1,04,000 ಷೇರುಗಳು ಹಾಗೂ ಇತರ 88 ಹಿರಿಯ ಅಧಿಕಾರಿಗಳಿಗೆ 3,75,650 ಷೇರುಗಳನ್ನು ಅನುಮೋದನೆ ನೀಡಿರುವುದರಿಂದ ಸ್ಟಾಕ್ ಆಪ್ಷನ್ ದೊರೆಯುತ್ತಿದೆ.
ಆದರೆ, ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾದ ನಂದನ್ ನಿಲೇಕಣಿ ಅವರು ಸ್ವಯಂಪ್ರೇರಿತರಾಗಿ ತಮಗೆ ಕಂಪೆನಿಯಿಂದ ಯಾವುದೇ ವೇತನ ಬೇಡ ಎಂದು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ