ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಲು ಕರ್ನಾಟಕ ಮೂಲದ ಉದ್ಯಮಿಗಳು ಹಾಗೂ ಉದ್ದಿಮೆಗಳು ಹೆಚ್ಚು ಆಸಕ್ತಿ ತೋರಿವೆ. ಈ ಪೈಕಿ ಇನ್ಫೋಸಿಸ್ ಹಾಗೂ ಓಲಾ ಎಲೆಕ್ಟ್ರಿಕ್ ಮುಂಚೂಣಿಯಲ್ಲಿವೆ.

ಸಾಂದರ್ಭಿಕ ಚಿತ್ರ (ಕೃಪೆ; ಉತ್ತರ ಪ್ರದೇಶ ಸರ್ಕಾರದ ವೆಬ್ಸೈಟ್)
ಬೆಂಗಳೂರು: ಉತ್ತರ ಪ್ರದೇಶದಲ್ಲಿ (Uttar Pradesh) ಹೂಡಿಕೆ ಮಾಡಲು ಕರ್ನಾಟಕ (Karnataka) ಮೂಲದ ಉದ್ಯಮಿಗಳು ಹಾಗೂ ಉದ್ದಿಮೆಗಳು ಹೆಚ್ಚು ಆಸಕ್ತಿ ತೋರಿವೆ. ಈ ಪೈಕಿ ಇನ್ಫೋಸಿಸ್ (Infosys) ಹಾಗೂ ಓಲಾ ಎಲೆಕ್ಟ್ರಿಕ್ (Ola Electric) ಮುಂಚೂಣಿಯಲ್ಲಿವೆ. ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ (Uttar Pradesh Global Investors Summit 2023) ಪೂರ್ವಭಾವಿಯಾಗಿ ಸಚಿವರು ಮತ್ತು ಕೆಲವು ಉದ್ಯಮಿಗಳ ನಡುವೆ ಸಭೆ ನಡೆದಿದೆ. ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಉದ್ಯಮಿಗಳು ಸಹ ಭಾಗಿಯಾಗಿದ್ದಾರೆ. ಇನ್ಫೋಸಿಸ್, ಓಲಾ ಮುಂತಾದ ಉನ್ನತ ಕಾರ್ಪೊರೇಟ್ಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಇನ್ಫೋಸಿಸ್ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಓಲಾ ಎಲೆಕ್ಟ್ರಿಕ್ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಸೇವಾಕ್ರಮಣಿ ಮತ್ತು ಗ್ರೂಪ್ ಸಿಎಫ್ಒ ಜಿಆರ್ ಅರುಣ್ ಕುಮಾರ್ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರನ್ನು ಭೇಟಿಯಾಗಿ ಉತ್ತರ ಪ್ರದೇಶದಲ್ಲಿ ಹೂಡಿಕೆಯ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ, ಕಿಸಾನ್ ಕ್ರಾಫ್ಟ್ ಎಂಡಿ ರವೀಂದ್ರ ಅಗರ್ವಾಲ್ ಬಿ.ಡಿ ಜೊತೆಗೂ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಇದನ್ನು ಹೊರತುಪಡಿಸಿ, ಝೆನ್ಸಾರ್ ಏರೋಸ್ಪೇಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ಸಿಇಒ ಅರುಣಾಕರ್ ಮಿಶ್ರಾ ಕೂಡ ಉತ್ತರ ಪ್ರದೇಶದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ಹೂಡಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿ
ಪ್ರಸಿದ್ಧ ಕಂಪನಿಗಳು ಮಾತ್ರವಲ್ಲದೆ ಯುವ ಉದ್ಯಮಿಗಳು ಕೂಡ ಸಭೆಯಲ್ಲಿ ಭಾಗವಹಿಸಿ. ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮ್ಮ ಕಂಪನಿಯು ಉತ್ತರ ಪ್ರದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಜನರ ಆಲೋಚನೆಯನ್ನು ಬದಲಾಯಿಸಿದ್ದಾರೆ. ಉತ್ತರ ಪ್ರದೇಶವನ್ನು ಬದಲಾಯಿಸಲು ನಮ್ಮ ಕಂಪನಿಯು ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದು ಕಿಸಾನ್ ಕ್ರಾಫ್ಟ್ ಲಿಮಿಟೆಡ್ನ ಎಂಡಿ ರವೀಂದ್ರ ಅಗರ್ವಾಲ್ ಹೇಳಿದ್ದಾರೆ.