INR USD Exchange Rate: ಅಮೆರಿಕ ಡಾಲರ್ ಸೇರಿ ಪ್ರಮುಖ ಕರೆನ್ಸಿ ವಿರುದ್ಧ ಭಾರತದ ರೂಪಾಯಿ ಮೇ 25ಕ್ಕೆ ಎಷ್ಟಿದೆ? | Dollar to Rupee Exchange Rate USD INR On May 25th 2022 In Kannada


INR USD Exchange Rate: ಅಮೆರಿಕ ಡಾಲರ್ ಸೇರಿ ಪ್ರಮುಖ ಕರೆನ್ಸಿ ವಿರುದ್ಧ ಭಾರತದ ರೂಪಾಯಿ ಮೇ 25ಕ್ಕೆ ಎಷ್ಟಿದೆ?

ಸಾಂದರ್ಭಿಕ ಚಿತ್ರ

Dollar to Rupee Exchange Rate (USD/INR): ಅಮೆರಿಕ ಡಾಲರ್ ಸೇರಿದಂತೆ ವಿಶ್ವದ ಪ್ರಮುಖ ಕರೆನ್ಸಿಗಳ ವಿರುದ್ಧ ಮೇ 25ರ ಬುಧವಾರದ ಭಾರತದ ರೂಪಾಯಿ ಮೌಲ್ಯ ವಿವರ ಇಲ್ಲಿದೆ.

ವಿದೇಶಿ ವಿನಿಮಯ ದರ (foreign exchange) ಎಷ್ಟಿದೆ ಎಂಬುದು ಹಲವು ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾದ ಮಾಹಿತಿ. ಅದು ಓದೇ ಇರಬಹುದು, ಕೆಲಸ, ಪ್ರವಾಸ, ಖರೀದಿ, ಆಮದು- ರಫ್ತು ಹೀಗೆ ಬೇರೆ ವಿಚಾರಗಳಿಗೆ ವಿಶ್ವದ ಪ್ರಮುಖ ಕರೆನ್ಸಿಗಳ ಮೌಲ್ಯ ತುಂಬ ಮುಖ್ಯವಾಗುತ್ತದೆ. ಮೇ 25ನೇ ತಾರೀಕಿನ ಬುಧವಾರದಂದು ವಿವಿಧ ದೇಶಗಳ ಕರೆನ್ಸಿ ಮೌಲ್ಯ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದ ಕರೆನ್ಸಿಯಾದ ರೂಪಾಯಿ ಮೌಲ್ಯ ಯಾವ ದೇಶದ ಕರೆನ್ಸಿ ವಿರುದ್ಧ ಎಷ್ಟಿದೆ ಎಂಬ ವಿವರ ನಿಮ್ಮೆದುರು ಇದ್ದು, ಈ ವಿವರಗಳಿಂದ ನಿಮಗೆ ನೆರವಾಗಬಹುದು.

ಅಮೆರಿಕ ಯುಎಸ್​ಡಿ 1ಕ್ಕೆ= 77.50 ಭಾರತದ ರೂಪಾಯಿ

ಬ್ರಿಟಿಷ್​ ಪೌಂಡ್ ಸ್ಟರ್ಲಿಂಗ್​​ಗೆ= 97.50 ಭಾರತದ ರೂಪಾಯಿ

ಯುರೋಗೆ= 82.80 ಭಾರತದ ರೂಪಾಯಿ

ಚೀನಾದ ಯುವಾನ್= 11.57 ಭಾರತದ ರೂಪಾಯಿ

ಜಪಾನ್​ನ ಯೆನ್= 0.61 (61 ಪೈಸೆ)

ಕುವೈತ್​ ದಿನಾರ್= 253.21 ಭಾರತದ ರೂಪಾಯಿ

ಇರಾನ್​ನ ರಿಯಾಲ್= 0.0018 ಪೈಸೆ

ಬಾಂಗ್ಲಾದೇಶ್​ ಟಾಕಾ= 0.88 (88 ಪೈಸೆ)

ಶ್ರೀಲಂಕಾ ರೂಪಾಯಿ= 0.22 (22 ಪೈಸೆ)

ಪಾಕಿಸ್ತಾನದ ರೂಪಾಯಿ= 0.38 (38 ಪೈಸೆ)

ನೇಪಾಳದ ರೂಪಾಯಿ= 0.62 (62 ಪೈಸೆ)

ರಷ್ಯಾದ ರೂಬೆಲ್= 1.28 (1.28 ರೂ.)

ಅಂತರರಾಷ್ಟ್ರೀಯ ವಹಿವಾಟುಗಳಿಗೆ, ಅಂದರೆ ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಇತರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್​ ಬಳಸಲಾಗುತ್ತದೆ. ಆದರೆ ಯುನೈಟೆಡ್​ ಕಿಂಗ್​ಡಮ್​ನ ಪೌಂಡ್​ ಸ್ಟರ್ಲಿಂಗ್, ಯುರೋಪ್​ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್​ ದಿನಾರ್​ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ,  ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published. Required fields are marked *