INS ರಣವೀರ್ ಯುದ್ಧನೌಕೆ ಸ್ಫೋಟ: 3 ಸೇನಾ ಸಿಬ್ಬಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ


ನವದೆಹಲಿ: ಭಾರತೀಯ ನೌಕಾದಳದ ಐಎನ್​ಎಸ್​ ರಣವೀರ್​ ನೌಕೆಯಲ್ಲಿ ಸ್ಫೋಟ ಸಂಭವಿಸಿದ್ದು, ದುರ್ಘಟನೆಯಲ್ಲಿ ಮೂವರು ನೌಕಾಪಡೆ ಸಿಬ್ಬಂದಿ ಸಾವನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ಸುತ್ತ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಸೂಕ್ತ ತನಿಖೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆದೇಶಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಮೂವರು ಸಿಬ್ಬಂದಿ ಹುತಾತ್ಮ
ಮುಂಬೈನ ನೌಕಾ ನೆಲೆಯಲ್ಲಿ ಭಾರತೀಯ ನೌಕಾದಳದ ಐಎನ್​ಎಸ್​ ರಣವೀರ್​ ನೌಕೆಯಲ್ಲಿ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಮೂವರು ನೌಕಾಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 11ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದು, ಸ್ಥಳೀಯ ನೌಕಾಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸ್ಫೋಟ ಸಂಭವಿಸುತ್ತಿದ್ದಂತೆ ತಕ್ಷಣವೇ ನೌಕಾಪಡೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಇನ್ನು ಸ್ಫೋಟಕ್ಕೆ ನಿಖರ ಕಾರಣ ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಆದೇಶಿಸಿದ್ದಾರೆ.

ಐಎನ್‌ಎಸ್‌ ರಣವೀರ್‌ನಲ್ಲಿ ಸ್ಫೋಟ
ಭಾರತೀಯ ನೌಕಾಪಡೆಯ ಬಲಿಷ್ಠ ನೌಕೆಗಳ ಸಾಲಿನಲ್ಲಿ ಗುರ್ತಿಸಿಕೊಂಡಿದ್ದ ಐಎನ್‌ಎಸ್‌ ರಣವೀರ್ ನೌಕೆ. ಜಲಾಂತರ್ಗಾಮಿ ನೌಕೆಗಳ ವಿರುದ್ಧ ಹೊರಾಟಕ್ಕೆ ಸಹಾಯಕಾರಿ. ಸಬ್‌ಮೆರಿನ್‌ಗಳನ್ನು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನ ಹೊಂದಿದ್ದು, ಶತ್ರುಗಳನ್ನು ಮಟ್ಟಹಾಕಲು ಭಾರತೀಯ ನೌಕೌಪಡೆಗೆ ಪ್ರಮುಖ ಅಸ್ತ್ರವಾಗಿದೆ. ಈ ಮೊದಲು ಪೂರ್ವ ನೌಕಾ ಕಮಾಂಡ್‌ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಬಳಿಕ 2021ರ ನವೆಂಬರ್‌ ಕರಾವಳಿಯ ಕಾರ್ಯಾಚರಣೆಗೆ ನಿಯೋಜನೆಗೊಂಡಿತ್ತು. ಶೀಘ್ರದಲ್ಲೇ ಬೇಸ್ ಪೋರ್ಟ್‌ಗೆ ಮರಳಬೇಕಿದ್ದ ರಣವೀರ್ ನೌಕೆ, ಬೇಸ್ ಪೋರ್ಟ್‌ ತಲುಪುವ ಮೊದಲೇ ನೌಕೆಯಲ್ಲಿ ಸ್ಫೋಟ ಸಂಭವಿಸಿದೆ.

ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಐಎನ್‌ಎಸ್‌ ನೌಕೆಯಲ್ಲಿ ಸ್ಫೋಟ ಸಂಭವಿಸಿರೋದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈಗಾಗ್ಲೆ ಸ್ಫೋಟಕ್ಕೆ ಕಾರಣವೇನು ಎಂದು ತಿಳಿಯೋಕೆ ತನಿಖೆ ಚುರುಕುಗೊಂಡಿದೆ. ತನಿಖೆಯ ಬಳಿಕವಷ್ಟೇ ಸ್ಫೋಟಕ್ಕೆ ಕಾರಣವೇನು ಎಂಬುವುದು ಗೊತ್ತಾಗಲಿದೆ.

The post INS ರಣವೀರ್ ಯುದ್ಧನೌಕೆ ಸ್ಫೋಟ: 3 ಸೇನಾ ಸಿಬ್ಬಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ appeared first on News First Kannada.

News First Live Kannada


Leave a Reply

Your email address will not be published. Required fields are marked *