Inspiring Story: ಅಕ್ಷರಗಳನ್ನು ಓದಲು ತಡಕಾಡುತ್ತಿದ್ದವ ಈಗ ಸೆಲೆಬ್ರಿಟಿ ಮ್ಯಾನೇಜರ್; ಡಿಸ್ಲೆಕ್ಸಿಯಾ ನ್ಯೂನತೆ ಮೀರಿ ನಿಂತ ಯುವಕನ ಬದುಕಿನ ಕಥನ ಇಲ್ಲಿದೆ | Dyslexic man inspiring story from tubelight to celebrity manager

Inspiring Story: ಅಕ್ಷರಗಳನ್ನು ಓದಲು ತಡಕಾಡುತ್ತಿದ್ದವ ಈಗ ಸೆಲೆಬ್ರಿಟಿ ಮ್ಯಾನೇಜರ್; ಡಿಸ್ಲೆಕ್ಸಿಯಾ ನ್ಯೂನತೆ ಮೀರಿ ನಿಂತ ಯುವಕನ ಬದುಕಿನ ಕಥನ ಇಲ್ಲಿದೆ

ಅಕ್ಷರಗಳನ್ನು ಓದಲು ತಡಕಾಡುತ್ತಿದ್ದವ ಈಗ ಸೆಲೆಬ್ರಿಟಿ ಮ್ಯಾನೇಜರ್

ಇವರು ಚಿಕ್ಕ ವಯಸ್ಸಿಲ್ಲಿಯೇ ಜನರಿಂದ ಅದೆಷ್ಟೋ ಮಾತುಗಳನ್ನು ಹೇಳಿಸಿಕೊಂಡರು. ಅಂಬೆಗಾಲಿಡುವ ವಯಸ್ಸಿನಿಂದ ಪುಟ್ಟಪುಟ್ಟ ಹೆಜ್ಜೆ ಇಡುವವರೆಗೆ ಬಾಲ್ಯದಲ್ಲಿ ಹೊಂದಿಕೊಳ್ಳಲು ಹೆಣಗಾಡಿದರು. ಪದಗಳನ್ನು ಉಚ್ಛರಿಸಲು ತಡಗಾಡುತ್ತಿದ್ದರು. ಆದರೆ ಇದೀಗ ಒಳ್ಳೆಯ ಮಾತುಗಾರರಾಗಿ ಜೀವನದಲ್ಲಿಒಳ್ಳೆಯ ಉದ್ಯೋಗದಲ್ಲಿದ್ದಾರೆ. ಡಿಸ್ಲೆಕ್ಸಿಯಾ ಎಂಬ ನ್ಯೂನ್ಯತೆಯಿಂದ ಬಳಲುತ್ತಿದ್ದ ಇವರು ಇದೀಗ ಆನ್​ಲೈನ್​ನಲ್ಲಿ ಅನೇಕರಿಗೆ ಸ್ಪೂರ್ತಿ ನೀಡುವಂತೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇವರ ಜೀವನದ ಪ್ರತಿ ಹೆಜ್ಜೆ ಎಲ್ಲರ ಮನಕೆರಳಿಸುವಂತಿದೆ. ಅವರೇ ಮುಂಬೈ ನಿವಾಸಿ ಹರ್ಷ ದೋಶಿ.

ಅಕ್ಟೋಬರ್ 7ರಂದು ವಿಶ್ವ ಡಿಸ್ಲೆಕ್ಸಿಯಾ ಜಾಗೃತಿ ದಿನದ ಅಂಗವಾಗಿ ಹ್ಯೂಮನ್ಸ್ ಆಫ್ ಬಾಂಬೆ ಹಂಚಿಕೊಂಡ ವೈರಲ್ ಪೋಸ್ಟ್ ಹರ್ಷ ಅವರ ಮಾತುಗಳನ್ನು ಹಂಚಿಕೊಂಡಿದೆ. ನನಗೆ ಡಿಸ್ಲೆಕ್ಸಿಯಾ ಇರಬಹುದು, ಆದರೆ ನಾನು ಎಂದಿಗೂ ಆ ಸಮಸ್ಯೆ ಕಾಡುತ್ತಿರುವಂತೆ ಯೋಚಿಸಲೇ ಇಲ್ಲ. ಬಾಲ್ಯದಲ್ಲಿದ್ದಾಗ ಹೆದರಿಕೆಯ ವಿರುದ್ಧ ಹೋರಾಟ ನಡೆಸಿರುವುದರಿಂದ ಹಿಡಿದು ಇದೀಗ ಒಳ್ಳೆಯ ಮಾತುಗಾರನಾಗುವವರೆಗೆ ನಡೆದು ಬಂದ ಹಾದಿಯನ್ನು, ಎದುರಿಸಿದ ಕಷ್ಟಗಳನ್ನು ಅವರು ಹೇಳಿಕೊಂಡಿದ್ದಾರೆ. ಇವರ ಈ ಮನಮಿಡಿಯುವ ಕಥೆ ನೆಟ್ಟಿಗರ ಹೃದಯ ಗೆದ್ದಿದೆ.

ಹರ್ಷ ಅವರನ್ನು 2 ವರ್ಷದ ಶಿಶುವಿದ್ದಾಗ ದತ್ತು ತೆಗೆದುಕೊಳ್ಳಲಾಯಿತು. ಅದೃಷ್ಟವಶಾತ್ ನನ್ನನ್ನು ದತ್ತು ಪಡೆದವರು ಹೆಚ್ಚು ಪ್ರೀತಿ ತೋರಸಿ ನನ್ನನ್ನು ಸಾಕಿದರು. ಆದರೆ ಸಾಕಷ್ಟು ಪರೀಕ್ಷೆಗಳನ್ನು ನಾನು ಎದುರಿಸಬೇಕಿತ್ತು. ಮೂರ್ಖ ಹುಡುಗ ಎಂದು ಕರೆಯುತ್ತಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತಿತ್ತು. ಈ ರೀತಿ ಹೇಳಿಸಿಕೊಂಡ ಅನೇಕ ಪದಗಳಿವೆ ಎಂದು ಅವರು ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಎರಡು ವರ್ಷದವನಿದ್ದಾಗ ವರ್ಣ ಮಾಲೆಯ ಅಕ್ಷರಗಳನ್ನು ಕಲಿಯಲು ಪ್ರಾರಂಭಿಸಿದೆ. ಪದಗಳನ್ನು ಉಚ್ಚರಿಸಲು ಹೆಣಗಾಡುತ್ತಿದ್ದೆ, ನನ್ನ ತಾಯಿ ಪಟ್ಟು ಹಿಡಿದು ನನಗೆ ಅಕ್ಷರಾಭ್ಯಾಸ ಮಾಡಿಸಲು ಮಾರ್ಗದರ್ಶನ ನೀಡುತ್ತಿದ್ದರು. ಆರಂಭದಲ್ಲಿ ಹೇಗೋ ಅಕ್ಷರಗಳನ್ನು ಕಲಿಯುವ ಬಗ್ಗೆ ಸ್ವಲ್ಪ ತುಡಿತ ನನ್ನಲ್ಲಿದೆ ಎಂಬುದನ್ನು ತಾಯಿ ಮನಗಂಡರು. ಮೊದಲಿಗೆ ನಾನು ಒಂದು ಮಾತನ್ನು ಅರ್ಥೈಸಿಕೊಳ್ಳಲು ನೂರು ಬಾರಿ ಕೇಳಿಸಿಕೊಳ್ಳಬೇಕಿತ್ತು. ಹಾಗಾಗಿ ನನ್ನೊಂದಿಗೆ ಯಾರೂ ಸ್ನೇಹ ಬೆಳೆಸಲು ಮುಂದಾಗುತ್ತಿರಲಿಲ್ಲ. ಎಲ್ಲರೂ ನನಗೆ ಟ್ಯೂಬ್​ಲೈಟ್​ ಎಂದು ಕರೆಯುತ್ತಿದ್ದರು ಎಂಬ ಮಾತನ್ನು ಹಂಚಿಕೊಂಡಿದ್ದಾರೆ.

ಕಲಿಯೊಂದಿಗೆ ನಿರಂತರ ಹೋರಾಟದ ಬಳಿಕ ನಾನು 3ನೇ ತರಗತಿಯಲ್ಲಿರುವಾಗ ನನಗೆ ಡಿಸ್ಲೆಕ್ಸಿಯಾ ಮತ್ತು ಎಡಿಹೆಚ್​ಡಿ ಇರುವುದು ತಿಳಿದು ಬಂದಿತು. ಶಿಕ್ಷಕರು ಮತ್ತು ಸಂಬಂಧಿಕರ ಯಾವುದೇ ಸಹಕಾರ ಇಲ್ಲದಿರುವ ಕಾರಣ ನನ್ನ ಪೋಷಕರು ನನಗೆ ಮಾರ್ಗದರ್ಶನ ನೀಡಲು ತುಂಬಾ ಕಷ್ಟಪಟ್ಟರು. ಸಂಬಂಧಿಕರು ಯಾವುದೇ ಸಹಾಯಕ್ಕೆ ಬರುತ್ತಿರಲಿಲ್ಲ ಆದರೆ ನನ್ನನ್ನು ಗೇಲಿ ಮಾಡುತ್ತಿದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಧ್ಯಯನಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡೆ ಎಂದು ಹೇಳಿದ್ದಾರೆ.

ಕಠಿಣ ಪರಿಶ್ರಮದ ಬಳಿಕ 12ನೇ ತರಗತಿಯಲ್ಲಿ ಹರ್ಷ ದೋಶಿ ಅವರು ಉತ್ತೀರ್ಣರಾದರು. ತಮ್ಮ ಪದವಿಯನ್ನು ಮುಂದುವರೆಸಲು ಮುಂದಾದರು. ಬಳಿಕ ಒಳ್ಳೆಯ ಮಾತುಗಾರನಾಗಿ ಹೊರಹೊಮ್ಮಿದರು. ಸಾರ್ವಜನಿಕ ಸ್ಥಳಗಳಲ್ಲಿ ವೇದಿಕೆಯ ಮೇಲೆ ನಿಂತು ಮಾತನಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಎರಡು ವರ್ಷಗಳ ನಂತರ ನನ್ನ ಸೆಲೆಬ್ರಿಟಿ ಮ್ಯಾನೇಜರ್ ವೃತ್ತಿ ಜೀವನವು ತುಂಬಾ ಸುಂದರವಾಗಿದೆ. ಒಂದು ಕಾಲದಲ್ಲಿ ಪದಗಳನ್ನು ಉಚ್ಛರಿಸಲು ಕಷ್ಟಪಡುತ್ತಿದ್ದ ನಾನು ಇದೀಗ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಿ ಸಹಾಯ ಮಾಡುವಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ಎಂದು ಅವರು ಮಾತನಾಡಿದ್ದಾರೆ. ಕಷ್ಟಪಟ್ಟು ದುಡಿಯುವ ವ್ಯಕ್ತಿ ಎಂದು ವಿವರಿಸುವ ಮೂಲಕ ಹರ್ಷ ದೋಶಿ ಅವರ ಗೆಳೆಯರು ಮತ್ತು ನೆಟ್ಟಿಗರು ಅವರನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Inspiring Story: ಸಾಫ್ಟ್​ವೇರ್​ ಉದ್ಯೋಗ ಬಿಟ್ಟು ಭಾರತೀಯ ಸೇನೆ ಸೇರಿದ ಬೆಂಗಳೂರಿನ ಇಂಜಿನಿಯರ್

Inspiring Story: ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುವ ಕಾರ್ಮಿಕನ ಪುತ್ರಿ ಆರ್ಯಾ; ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ

TV9 Kannada

Leave a comment

Your email address will not be published. Required fields are marked *