Inspiring Story: ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುವ ಕಾರ್ಮಿಕನ ಪುತ್ರಿ ಆರ್ಯಾ; ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ | Kerala petrol pump attendant daughter makes iit kanpur

Inspiring Story: ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುವ ಕಾರ್ಮಿಕನ ಪುತ್ರಿ ಆರ್ಯಾ; ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ

ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುವ ಕಾರ್ಮಿಕನ ಪುತ್ರಿ ಆರ್ಯಾ

ಪೆಟ್ರೋಲ್ ಬಂಕ್​ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳದ ರಾಜಗೋಪಾಲನ್ ಅವರ ಮಗಳು ಉನ್ನತ ಶಿಕ್ಷಣಕ್ಕಾಗಿ ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆದ ಕುರಿತಾಗಿ ಇಂಡಿಯಲ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಅವರು ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ. ಕೇರಳದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿರುವ ರಾಜಗೋಪಾಲನ್ ಅವರ ಮಗಳಾದ ಆರ್ಯಾ, ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದಿದ್ದಾರೆ. ಈ ಸ್ಪೂರ್ತಿದಾಯಕ ಕಥೆಯನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆಯುವ ಮೂಲಕ ಆರ್ಯಾ ನಮಗೆಲ್ಲಾ ಹೆಮ್ಮೆ ತಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ರಾಜಗೋಪಾಲನ್ ಅವರು ಕಳೆದ 15 ವರ್ಷಗಳಿಂದ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮಗಳಾದ ಆರ್ಯಾ, ನಿನಗೆ ಆಲ್ ದಿ ಬೆಸ್ಟ್ ಎನ್ನುತ್ತಾ ತಂದೆಯೊಂದಿಗೆ ಮಗಳು ಪೆಟ್ರೋಲ್ ಬಂಕ್​ನಲ್ಲಿ ನಿಂತಿರುವ ಚಿತ್ರವನ್ನು ಬುಧವಾರ ಶ್ರೀಕಾಂತ್ ಮಾಧವ್ ವೈದ್ಯ ಪೋಸ್ಟ್ ಮಾಡಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಇದೀಗ 12,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ. ಆರ್ಯಾಳ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜಗೋಪಾಲನ್ ಅವರು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಾರೆ. ನಾವೆಲ್ಲರೂ ಇಂಧನ ಕ್ಷೇತ್ರದಲ್ಲಿ ಸಂಬಂಧ ಹೊಂದಿದ್ದೇವೆ. ಐಐಟಿ ವಿದ್ಯಾರ್ಥಿ ಆರ್ಯಾಗೆ ಶುಭ ಹಾರೈಕೆಗಳು  ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ:

Inspiring Story: ಸಾಫ್ಟ್​ವೇರ್​ ಉದ್ಯೋಗ ಬಿಟ್ಟು ಭಾರತೀಯ ಸೇನೆ ಸೇರಿದ ಬೆಂಗಳೂರಿನ ಇಂಜಿನಿಯರ್

International Women’s Day 2021: ‘ಸವಾಲಿಗೆ ಸಿದ್ಧ ನಾವು..’ – ಮಹಿಳಾ ದಿನಾಚರಣೆಯ ಈ ಘೋಷವಾಕ್ಯಕ್ಕೆ ಒಪ್ಪಿಗೆಯಿದ್ದರೆ ಕೈ ಎತ್ತಿ !

 

TV9 Kannada

Leave a comment

Your email address will not be published. Required fields are marked *