Instant Karma: ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ! | Man throws stone at dog but the animal teaches him a lesson viral video on social media


Viral Video: ತಕ್ಷಣದ ಕರ್ಮ… ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ.

Instant Karma: ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!

ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!

TV9kannada Web Team

| Edited By: sadhu srinath

Aug 23, 2022 | 9:46 PM
ತತ್ ​​ಕ್ಷಣದಲ್ಲೇ ಕರ್ಮ…ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ. ತಪ್ಪು ಮಾಡಿದವರು ಖಂಡಿತ ಬೆಲೆ ತೆರುತ್ತಾರೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ವೀಡಿಯೊಗಳನ್ನು ನೋಡಿದ್ದೇವೆ. ಇತ್ತೀಚೆಗೆ ಆ ಗುಂಪಿಗೆ ಸೇರಿದ ವಿಡಿಯೋವೊಂದು ಜೋರಾಗಿ ಸದ್ದು ಮಾಡುತ್ತಾ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದ ನಾಯಿಯ ಮೇಲೆ ತನ್ನ ಪೌರುಷ ತೋರಲು ಹೋಗಿದ್ದಾನೆ. ಅಷ್ಟೇ ಆ ನಾಯಿ ನೀನಾ ನಾನಾ ಎಂದು ಅವನ ಮೇಲೆ ಎಗರಿದೆ. ವೀರತ್ವ ತೋರಿಸಲು ಕಲ್ಲಿನಿಂದ ಹೊಡೆಯ ಬಂದ ವ್ಯಕ್ತಿಗೆ ಜೋರಾಗಿಯೇ ಬುದ್ದಿ ಕಲಿಸಿದೆ.

ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ:

ವೈರಲ್ ಆಗಿರುವ ವೀಡಿಯೋ ನೋಡಿದಾಗ.. ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ. ನಾಯಿ ಆತನ ಮೇಲೆ ದಾಳಿ ಮಾಡಿದೆ. ಕಚ್ಚಿ ಕಚ್ಚಿ ಆ ವ್ಯಕ್ತಿಗೆ ಪಾಠ ಕಲಿಸಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟಿಜನ್‌ಗಳು ಸಾಲುಗಟ್ಟಿ ಕಾಮೆಂಟ್‌ಗಳ ಮೂಲಕ ಆ ವ್ಯಕ್ತಿಗೆ ನಾಯಿ ಪಾಠ ಕಲಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.