INTERESTING ನಿರೀಕ್ಷೆ ಹುಸಿ ಮಾಡಿದ ದೈತ್ಯರು; ವಿಶ್ವಕಪ್​​ನಲ್ಲಿ ಇವರ ಸಾಧನೆ ಏನು ಗೊತ್ತಾ..?


ಟಿ20 ವಿಶ್ವಕಪ್​ ಟೂರ್ನಿಗೆ ಅದ್ಧೂರಿ ತೆರೆ ಬಿದ್ದಾಗಿದೆ. 5 ವರ್ಷಗಳ ಬಳಿಕ ನಡೆದ ಚುಟುಕು ಸಮರದಲ್ಲಿ ಸ್ಟಾರ್ ಆಟಗಾರರ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಈ ನಿರೀಕ್ಷೆಯಂತೆ ಕೆಲ ಆಟಗಾರರು ಸಿಡಿದು ಗಮನ ಸೆಳೆದರೆ, ಈ ವಿಶ್ವಕಪ್​ನಲ್ಲಿ ಸಿಡಿದೇಳುತ್ತಾರೆಂಬ ನಿರೀಕ್ಷೆ ಹುಟ್ಟಿಸಿದ್ದ ಖ್ಯಾತನಾಮರು ಅಟ್ಟರ್​​ ಫ್ಲಾಪ್​ ಸ್ಟಾರ್​ಗಳಾಗಿ ಭಾರೀ ನಿರಾಸೆ ಮೂಡಿಸಿದ್ದಾರೆ.

ವಿಶ್ವಕಪ್​ನಲ್ಲಿ ಠುಸ್​ ಆದ ಟಿ20 ಕ್ರಿಕೆಟ್​ ಬಾಸ್..!
ದಿ ಯೂನಿವರ್ಸ್ ಬಾಸ್ ಕ್ರಿಸ್​​ ಗೇಲ್.. ಟಿ20 ಕ್ರಿಕೆಟ್​ನ ಕಾ ಬಾಸ್​.. ಆದ್ರೆ, ಟಿ20 ವಿಶ್ವಕಪ್​​ನಲ್ಲಿ ಬಾಸ್‌ ಹೆಸರಿಗೆ ತಕ್ಕ ಆಟವನ್ನೇ ಆಡಲಿಲ್ಲ. ಆಡಿದ 5 ಪಂದ್ಯಗಳಿಂದ ಈ ಆಜಾನುಬಾಹು ಕ್ರಮವಾಗಿ ಕಲೆ ಹಾಕಿದ್ದು, 13, 15, 4, 12 ಮತ್ತು 1 ರನ್​​​..!

ವಿವಾದದಿಂದಲೇ ಹೆಚ್ಚು ಸದ್ದು ಮಾಡಿದ ಕ್ವಿಂಟನ್​..!
ಈ ಟಿ20 ವಿಶ್ವಕಪ್​ನಲ್ಲಿ ಕ್ವಿಂಟನ್ ಡಿಕಾಕ್, ಸೌತ್ ಆಫ್ರಿಕಾದ ಪ್ರಮುಖ ಬ್ಯಾಟರ್ ಅಂತಾನೇ ನಿರೀಕ್ಷಿಸಲಾಗಿತ್ತು. ಆದ್ರೆ, ಬ್ಯಾಟ್​ನಿಂದ ಸದ್ದು ಮಾಡದ ಡಿಕಾಕ್, ಈ ಟೂರ್ನಿಯಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದೇ ಸಾಧನೆಯಾಗಿದೆ. ಕೇವಲ 69 ರನ್ ಗಳಿಸಿದ ಕ್ವಿಂಟನ್, ಕೇವಲ ಶೋಫೀಸ್ ಆಗಿ ಕಂಡರು.

ವಿಶ್ವಕಪ್​ನಲ್ಲಿ ನಡೆಯಲಿಲ್ಲ ಮ್ಯಾಕ್ಸಿ ಅಬ್ಬರ..!
ಐಪಿಎಲ್​ನಲ್ಲಿ ಮಿಂಚಿದ್ದ ಮ್ಯಾಕ್ಸ್​ವೆಲ್​, ವಿಶ್ವಕಪ್​ನಲ್ಲಿ ಎದುರಾಳಿ ಪಾಲಿಗೆ ಸಿಂಹ ಸ್ವಪ್ನವಾಗ್ತಾರೆ ಅಂತಾನೇ ಊಹಿಸಲಾಗಿತ್ತು. ಆದ್ರೆ, ಆಗಿದ್ದೇ ಬೇರೆ. ಆರ್​ಸಿಬಿ ಪರ ಮ್ಯಾಚ್​ ವಿನ್ನರ್ ಆಗಿ ಕಾಣಿಸಿಕೊಂಡಿದ್ದ ಮ್ಯಾಕ್ಸಿ, ವಿಶ್ವಕಪ್​​​ನಲ್ಲಿ ಸೂಪರ್​​ ​ಫ್ಲಾಪ್ ಸ್ಟಾರ್​ ಎನಿಸಿಕೊಂಡ್ಬಿಟ್ರು.

ಇದನ್ನೂ ಓದಿ: 2024ರ ಐಸಿಸಿ ‘ಟಿ20 ವಿಶ್ವಕಪ್’​ ಟೂರ್ನಿ ಆತಿಥ್ಯ ವಹಿಸುವ ದೇಶ ಯಾವುದು ಗೊತ್ತಾ..?

ಫ್ಲಾಫ್ ಆದ ಕೆರಿಬಿಯನ್ ಬಿಗ್​ ಹಿಟ್ಟರ್ಸ್..!
ಟಿ20 ವಿಶ್ವಕಪ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ ಮತ್ತೊಬ್ಬ ಬಿಗ್​ ಸ್ಟಾರ್ ಪೊಲಾರ್ಡ್, ನಾಯಕನಾಗಿ ಕನಿಷ್ಠ ಜವಾಬ್ದಾರಿಯುತ ಆಟವಾಡದ ಪೊಲಾರ್ಡ್​, 5 ಪಂದ್ಯಗಳಿಂದ ಕೇವಲ ಗಳಿಸಿದ್ದ 84 ಎಸೆತಗಳಲ್ಲಿ 90 ರನ್. ಇದು ನಿಜಕ್ಕೂ ಆತನ ಹೆಸರಿಗೆ ತಕ್ಕ ಆಟವೇ ಅಲ್ಲ. ಪೊಲಾರ್ಡ್​ ಮಾತ್ರವೇ ಅಲ್ಲ, ಆಂಡ್ರೆ​ ರಸೆಲ್, ಮಸಲ್ ಪವರ್​​ ಕೂಡ ನಡೆಯಲೇ ಇಲ್ಲ.. 5 ಪಂದ್ಯಗಳಿಂದ 25 ರನ್ ಗಳಿಸಿ 2 ಬಾರಿ ಡಕ್​ಔಟ್ ಆಗಿದ್ದೆ ಅವರ ಸಾಧನೆ.

ಇದನ್ನೂ ಓದಿ: ದಿಗ್ಗಜರ ಸಮಾಗಮಕ್ಕೆ ನಡುಗಿದ ಕ್ರಿಕೆಟ್​ ಲೋಕ.. ದಾದಾ, ವಾಲ್, ಲಕ್ಷ್ಮಣ್ ಅಂದ್ರೆ ಯಾಕೆ ಭಯ..?

ಇವರಷ್ಟೇ ಅಲ್ಲ..! ಟೀಮ್ ಇಂಡಿಯಾದ ಫಿನಿಷರ್, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯನೂ ನಿರಾಸೆ ಮೂಡಿಸಿದ್ದರು. ಅತ್ತ ಬೌಲಿಂಗ್ ಮಾಡದೆ, ಇತ್ತ ಬ್ಯಾಟಿಂಗ್​​ನಲ್ಲಿ ಮಿಂಚದೇ ಟೀಮ್ ಇಂಡಿಯಾಕ್ಕೆ ವಿಲನ್ ಆಗಿ ಮಾರ್ಪಟ್ಟರು. ಇವರಷ್ಟೇ ಅಲ್ಲ. ಎಕ್ಸ್​-ಫ್ಯಾಕ್ಟರ್​ ಎನಿಸಿಕೊಂಡ ಮಿಸ್ಟ್ರಿ ಸ್ಪಿನ್ನರ್ ವರುಣ್, ವಿಕೆಟ್ ಪಡೆಯದೇ ಮಿಸ್ಟ್ರಿಯಾಗೇ ಉಳಿದರು.

ಇದನ್ನೂ ಓದಿ: ಹಂಸಲೇಖ ಟೀಕೆ; ಹೊಗಳಿಕೆಗಾಗಿ ಮಾಡ್ತಿಲ್ಲ..ತೆಗಳಿದ್ರೂ ಕಾರ್ಯ ನಿಲ್ಲಲ್ಲ-ಪೇಜಾವರ ಶ್ರೀ

ಇದನ್ನೂ ಓದಿ: ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ

ಇದನ್ನೂ ಓದಿ: ದಲಿತರ ಮನೆಯಲ್ಲಿ ಪೇಜಾವರ ಶ್ರೀ ಕೋಳಿ ತಿಂತಾರಾ ಹೇಳಿಕೆ; ಕ್ಷಮೆ ಕೇಳಿದ ‘ಮಹಾಗುರು’ 

ಇದನ್ನೂ ಓದಿ: ನ್ಯೂಜಿಲೆಂಡ್​​ ವಿರುದ್ಧ 8 ವಿಕೆಟ್ ಭರ್ಜರಿ​​ ಜಯ; ಆಸ್ಟ್ರೇಲಿಯಾ ಮಡಿಲಿಗೆ ಚೊಚ್ಚಲ ಟಿ20 ವಿಶ್ವಕಪ್​​​ ಟ್ರೋಫಿ

News First Live Kannada


Leave a Reply

Your email address will not be published. Required fields are marked *