Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ! | Interesting Facts The only unnamed railway station in India here is the story behind it


Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!

ಹೆಸರಿಲ್ಲದ ರೈಲು ನಿಲ್ದಾಣ

ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಆಯಾ ಊರಿನ ಅಥವಾ ಆ ಊರಿನ ಪ್ರಸಿದ್ಧ ವ್ಯಕ್ತಿಗಳು, ಸ್ಥಳದ ಹೆಸರನ್ನು ಇಡಲಾಗುತ್ತದೆ. ಇದಕ್ಕಾಗಿ ಸಾಕಷ್ಟು ಲಾಬಿಗಳೂ ನಡೆಯುತ್ತವೆ. ಆದರೆ, ಭಾರತದಲ್ಲಿ ಹೆಸರಿಲ್ಲದ ರೈಲು ನಿಲ್ದಾಣವೂ ಒಂದು ಇದೆ ಎಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರ. 2017ರ ಮಾರ್ಚ್ 31ರ ಅಂಕಿ-ಅಂಶದಂತೆ ಭಾರತವು 7,349 ರೈಲು ನಿಲ್ದಾಣಗಳನ್ನು ಹೊಂದಿತ್ತು. ಆದರೆ ಅವುಗಳಲ್ಲಿ ಒಂದು ರೈಲು ನಿಲ್ದಾಣಕ್ಕೆ ಮಾತ್ರ ‘ಹೆಸರಿಲ್ಲ’. ಆ ಹೆಸರಿಲ್ಲದ ನಿಲ್ದಾಣದಿಂದ ಪ್ರಯಾಣಿಕರು ಹೇಗೆ ರೈಲಿನಲ್ಲಿ ಬರುತ್ತಾರೆ ಅಥವಾ ಯಾವ ಸ್ಟೇಷನ್​ಗೆ ಟಿಕೆಟ್ ಬುಕ್ ಮಾಡುತ್ತಾರೆ ಎಂದು ನೀವು ಬಹುಶಃ ಆಶ್ಚರ್ಯ ಪಡುತ್ತೀರಿ.

ಈ ರೈಲು ನಿಲ್ದಾಣವು ಪಶ್ಚಿಮ ಬಂಗಾಳ ರಾಜ್ಯದಲ್ಲಿದ್ದು, ಬರ್ಧಮಾನ್ ಜಿಲ್ಲೆಗೆ ಸೇರಿದೆ. ಈ ಹೆಸರಿಲ್ಲದ ರೈಲು ನಿಲ್ದಾಣವು ಬರ್ಧಮಾನ್ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರೈನಾ ಗ್ರಾಮದಲ್ಲಿದೆ. 2008ರಲ್ಲಿ ಭಾರತೀಯ ರೈಲ್ವೇ ಈ ಪ್ರದೇಶದಲ್ಲಿ ರೈಲು ನಿಲ್ದಾಣವನ್ನು ನಿರ್ಮಿಸಿತು. ಇನ್ನೊಂದು ಕುತೂಹಲದ ವಿಷಯವೆಂದರೆ ಇದು ಭಾರತದ ಹೆಸರಿಲ್ಲದ ಏಕೈಕ ರೈಲು ನಿಲ್ದಾಣವಾಗಿದೆ.

ನಿಲ್ದಾಣಕ್ಕೆ ಹೆಸರಿಡದಿರಲು ಕಾರಣವೇನು?:

ಭಾರತೀಯ ರೈಲ್ವೆ ಇಲಾಖೆ ಈ ರೈಲು ನಿಲ್ದಾಣಕ್ಕೆ ಏಕೆ ಯಾವ ಹೆಸರನ್ನೂ ಇಡಲಿಲ್ಲ ಎಂದು ನೀವು ಆಶ್ಚರ್ಯವಾಗಬಹುದು. ಇದಕ್ಕೆ ಎರಡು ಊರುಗಳ ನಡುವಿನ ಭಿನ್ನಾಭಿಪ್ರಾಯವೇ ಕಾರಣ. ರೈನಾ ಮತ್ತು ರಾಯ್​ನಗರ ಎಂಬ ಊರುಗಳ ಮಧ್ಯೆ ಇರುವ ಈ ರೈಲು ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಎರಡೂ ಗ್ರಾಮಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮೇಲ್ನೋಟಕ್ಕೆ 2008ರ ಮೊದಲು ರಾಯ್​ನಗರದಲ್ಲಿ ರಾಯ್​ನಗರ್ ರೈಲ್ವೆ ನಿಲ್ದಾಣ ಎಂದು ಕರೆಯಲಾಗುವ ರೈಲು ನಿಲ್ದಾಣವಿತ್ತು. ನಂತರ ರೈಲು ಬಂಕುರಾ-ದಾಮೋದರ್ ರೈಲ್ವೆ ಲೈನ್ ಎಂಬ ಸಣ್ಣ ಗೇಜ್ ಮಾರ್ಗದಲ್ಲಿ 200 ಮೀಟರ್ ಮುಂದೆ ನಿಲ್ಲತೊಡಗಿತು.

ಈ ಬ್ರಾಡ್ ಗೇಜ್ ಅನ್ನು ಪರಿಚಯಿಸಿದಾಗ, ರೈನಾ ಗ್ರಾಮದ ಬಳಿ ಹೊಸ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಯಿತು. ನಂತರ, ಇದು ಹೌರಾ-ಬರ್ಧಮಾನ್ ಲೈನ್‌ಗೆ ಸೇರಿತು. ಹೀಗಾಗಿ, ರೈಲು ನಿಲ್ದಾಣದ ಹೆಸರು ಚರ್ಚೆಗೆ ಗ್ರಾಸವಾದಾಗ ರೈನಾ ಪ್ರದೇಶದ ನಿವಾಸಿಗಳು ರಾಯ್​ನಗರ ಎಂದು ಹೆಸರಿಡಬಾರದು ಎಂದು ಒತ್ತಾಯಿಸಿದರು.

ರೈಲ್ವೆ ಪ್ಲಾಟ್‌ಫಾರ್ಮ್ ತಮ್ಮ ಗ್ರಾಮದಲ್ಲಿ ಇರುವುದರಿಂದ ಇದನ್ನು ರೈನಾ ಸ್ಟೇಷನ್ ಎಂದೂ ಕರೆಯಬೇಕು ಎಂದು ರೈನಾ ಗ್ರಾಮದ ನಿವಾಸಿಗಳು ಒತ್ತಾಯಿಸಿದರು. ಇದರ ಪರಿಣಾಮವಾಗಿ ಈ ರೈಲು ನಿಲ್ದಾಣವು ಇಂದಿಗೂ ಹೆಸರಿಲ್ಲದೆ ಉಳಿದಿದೆ.

ಅದೇನೇ ಇದ್ದರೂ, ಬಂಕುರಾ-ಮಸಗ್ರಾಮ್ ಹೆಸರಿನ ರೈಲು ದಿನಕ್ಕೆ 6 ಬಾರಿ ನಿಲ್ದಾಣಕ್ಕೆ ಬರುತ್ತದೆ. ಪ್ಲಾಟ್‌ಫಾರ್ಮ್‌ಗೆ ಬರುವ ಹೊಸ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಹೆಸರಿಲ್ಲ ಎಂದು ಕಂಡು ಬೆರಗಾಗುತ್ತಾರೆ. ಈ ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಕೇವಲ ಬೋರ್ಡ್ ಇದೆ, ಆದರೆ ಅದರ ಮೇಲೆ ಯಾವ ಹೆಸರನ್ನೂ ಬರೆದಿಲ್ಲ.

TV9 Kannada


Leave a Reply

Your email address will not be published. Required fields are marked *